ಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆ: ಭಾವೋದ್ರೇಕಕಾರೀ ಪ್ರಚಾರದ ಪ್ರಭಾವ ಕುಂದುತ್ತಿದೆ

ಮಹಾರಾಷ್ಟ್ರ ಮತ್ತು ಹರ‍್ಯಾಣ ವಿಧಾನಸಭೆಗಳ ಚುನಾವಣೆಗಳು ಮತ್ತು ಗುಜರಾತ್, ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಕೇರಳ, ಅಸ್ಸಾಂ ಮುಂತಾದ ರಾಜ್ಯಗಳ ಉಪಚುನಾವಣೆಗಳ ಫಲಿತಾಂಶಗಳು ಬಿಜೆಪಿ ಹೊತ್ತಿಸಿರುವ  ಕೋಮುವಾದಿ ರಾಷ್ಟ್ರವಾದಿ ಭಾವೋದ್ರೇಕಕಾರೀ ಪ್ರಚಾರದ ಪ್ರಭಾವ ಕುಂದುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿವೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಟಿಪ್ಪಣಿ ಮಾಡಿದೆ.

ಪ್ರಧಾನ ಮಂತ್ರಿಗಳು ಮತ್ತು ಗೃಹಮಂತ್ರಿಗಳು ಇಬ್ಬರೂ ಒಂದು ಹಿಂದುತ್ವ ರಾಷ್ಟ್ರವಾದಿ ಪ್ರಚಾರವನ್ನು ಹರಿಯ ಬಿಟ್ಟರು. ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಅಧಿಕಾರಕ್ಕೆ ಮರಳಿರುವುದು ಕಡಿಮೆ ಬಹುಮತದೊಂದಿಗೆ. ಹರ‍್ಯಾಣದಲ್ಲಿ ಬಿಜೆಪಿ ಬಹುಮತ ಗಳಿಸುವಲ್ಲಿ ವಿಫವಾವಗಿದೆ. ಸರಕಾರವನ್ನು ಕಳೆದುಕೊಂಡಿರುವುದರಿಂದಾಗಿ ಅದು ಎಂದಿನ ತನ್ನ ನೀಚ ಕುದುರೆ ವ್ಯಾಪಾರಕ್ಕೆ ಇಳಿಯುತ್ತದೆ, ಪ್ರತಿಪಕ್ಷಗಳು ಜನಾದೇಶವನ್ನು ಈ ರೀತಿಯಾಗಿ ಅಪಹರಿಸುವುದನ್ನು ತಡೆಯಲು ಚುರುಕುಗೊಳ್ಳಬೇಕು ಎಂದು ಪೊಲಿಟ್ ಬ್ಯುರೊ ಹೇಳಿದೆ.

ಆರ್ಥಿಕ ಹಿಂಜರಿತ ಆಳಗೊಳ್ಳುತ್ತಿರುವುದರೊಂದಿಗೆ ಜನಗಳ ಜೀವನಾಧಾರಗಳ ಮೇಲಿನ ಹೊರೆಗಳು ಹೆಚ್ಚುತ್ತಿವೆ ಎಂಬ ಗಂಭೀರ ವಸ್ತುಸ್ಥಿತಿ ಈಗ ಮುನ್ನೆಲೆಗೆ ಬರುತ್ತಿದೆ. ಇದು ಜನಗಳ ಹೆಚ್ಚುತ್ತಿರುವ ಆರ್ಥಿಕ ಸಂಕಟಗಳ ವಿರುದ್ಧ ಐಕ್ಯ ಹೋರಾಟಗಳನ್ನು ತೀವ್ರಗೊಳಿಸಬೇಕಾದ ಅಗತ್ಯವನ್ನು ಎತ್ತಿ ತೋರಿಸುತ್ತಿದೆ ಎಂದೂ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಕೇರಳದಲ್ಲಿ ಯುಡಿಎಫ್‌ನಿಂದ ಎರಡು ಸ್ಥಾನಗಳನ್ನು ಗಳಿಸಿಕೊಂಡಿರುವ  ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌ನ್ನು ಪೊಲಿಟ್ ಬ್ಯುರೊ ಅಭಿನಂದಿಸಿದೆ. ಮಹಾರಾಷ್ಟ್ರದಲ್ಲಿ ದಹಾಣು ಕ್ಷೇತ್ರದಲ್ಲಿ ಸಿಪಿಐ(ಎಂ) ಒಂದು ಮಹತ್ವದ ವಿಜಯ ಗಳಿಸಿದೆ. ಪಕ್ಷದಲ್ಲಿ ನಂಬಿಕೆ ವ್ಯಕ್ತಪಡಿಸಿರುವ ಜನತೆಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ತನ್ನ ನಮನಗಳನ್ನು ಸಲ್ಲಿಸಿದೆ.

Leave a Reply

Your email address will not be published. Required fields are marked *