ದೀರ್ಘ ಕಾಲದ ಅಯೋಧ್ಯಾ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಿದೆ. 2.77 ಎಕರೆ ವಿವಾದಿತ ಜಾಗವನ್ನು ಟ್ರಸ್ಟ್ ಮೂಲಕ ದೇವಸ್ಥಾನ ನಿರ್ಮಿಸಲು ಹಿಂದೂ ಕಡೆಯವರಿಗೆ ಕೋರ್ಟ್ ನೀಡಿದೆ. 5 ಎಕರೆ ಪರ್ಯಾಯ ಜಾಗವನ್ನು ಮುಸ್ಲಿಂ ವಕ್ಫ್ ಮಂಡಳಿಗೆ ಮಸೀದಿ ನಿರ್ಮಿಸಲು ಮಂಜೂರು ಮಾಡಬೇಕೆಂದು ನಿರ್ದೇಶನ ನೀಡಿದೆ.
ಈ ಆದೇಶದ ಮೂಲಕ ಸುಪ್ರೀಂಕೋರ್ಟಿನ ಪಂಚಪೀಠವು, ಕೋಮುವಾದಿ ಶಕ್ತಿಗಳು ದುರ್ಬಳಕೆ ಮಾಡಿಕೊಂಡು ಅಪಾರ ಹಿಂಸೆ ಮತ್ತು ಜೀವಹಾನಿಗೆ ಕಾರಣವಾಗಿದ್ದ ಬಹುಕಾಲದ ವಿವಾದವೊಂದನ್ನು ಕೊನೆಗೊಳಿಸಿದೆ.
ಮಾತುಕತೆಯ ಮೂಲಕ ಸಾಧ್ಯವಾಗದಿದ್ದರೆ
ಡಿಸೆಂಬರ್ 1992 ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿದ್ದು ಕಾನೂನು ಬಾಹಿರ ಕೃತ್ಯವೆಂದು ಕೋರ್ಟ್ ತೀರ್ಪೇ ಹೇಳಿದೆ. ಅದೊಂದು ಅಪರಾಧ ಕೃತ್ಯ ಹಾಗೂ ಜಾತ್ಯತೀತ ತತ್ವದ ಮೇಲಿನ ದಾಳಿಯಾಗಿದೆ. ಮಸೀದಿ ಧ್ವಂಸಕ್ಕೆ ಸಂಬಂಧಪಟ್ಟ ಪ್ರಕರಣಗಳ ಇತ್ಯರ್ಥ ತ್ವರಿತಗೊಳ್ಳಬೇಕು
ಧಾರ್ಮಿಕ ಪೂಜಾ ಸ್ಥಳಗಳ ಕಾಯಿದೆ -1991 ಕುರಿತು ನ್ಯಾಯಾಲಯ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ಕಾನೂನಿಗೆ ಬದ್ಧರಾಗಿ ಧಾರ್ಮಿಕ ಸ್ಥಳಗಳ ಬಗ್ಗೆ ಮತ್ತೆ ಇಂತಹ ವಿವಾದಗಳನ್ನು ಎತ್ತಿ ಬಳಸದಂತೆ ಖಾತರಿಪಡಿಸಬೇಕು.
ಈ ತೀರ್ಪನ್ನು ಬಳಸಿ ಪ್ರಚೋದನಕಾರಿ ಕೃತ್ಯಗಳ ಮೂಲಕ ಕೋಮು ಸಾಮರಸ್ಯವನ್ನು ಕದಡದಿರುವಂತೆ ಸಿಪಿಐ(ಎಂ) ಮನವಿ ಮಾಡುತ್ತದೆ.