ದಿಲ್ಲಿಯಲ್ಲಿ ಭೀಕರ ಬೆಂಕಿ ಅನಾಹುತ: ಆಘಾತ ಮತ್ತು ಆತಂಕ

ಉತ್ತರ ದಿಲ್ಲಿಯ ಅನಾಜ್ ಮಂಡಿಯಲ್ಲಿ ಲಗ್ಗೇಜ್ ಕಾರ್ಖಾನೆಯೊಂದರಲ್ಲಿ ನಡೆದಿರುವ ಭೀಕರ ಬೆಂಕಿ ಅನಾಹುತದ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಆಘಾತ ಮತ್ತು ಆತಂಕವನ್ನು ವ್ಯಕ್ತಪಡಿಸಿದೆ.

ಇದು ಈಗಾಗಲೇ 43 ಜೀವಗಳನ್ನು ಬಲಿ ತೆಗೆದುಕೊಂಡಿದೆ, ಹತ್ತಾರು ಇತರರು ವಿವಿಧ ಆಸ್ಪತ್ರೆಗಳಲ್ಲಿ ತೀವ್ರ ಸುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಾಣ ಕಳಕೊಂಡವರೆಲ್ಲರೂ ಕಾರ್ಮಿಕರು. ಅವರು ಕಾಖಾನೆಯ ಆವರಣದಲ್ಲೇ ಮಲಗಿದ್ದರು, ಬೆಂಕಿಯಿಂದ ತಪ್ಪಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಬೆಂಕಿ ತಗುಲಲು ಕಾರಣವೇನು ಎಂದು ಪತ್ತೆ ಹಚ್ಚಬೇಕು ಮತ್ತು ಬೆಂಕಿ ಸುರಕ್ಷಿತತೆಯಲ್ಲಿನ ಲೋಪಗಳಿಗೆ ಹೊಣೆಯಾದವರನ್ನು ಶಿಕ್ಷಿಸಬೇಕು.

ಮುಂದೆ ಇಂತಹ ದುರಂತಗಳು ನಡೆಯದಂತೆ ಬೆಂಕಿ ಸುರಕ್ಷಿತತೆಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಾತ್ರಿ ಪಡಿಸಬೇಕು ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ತನ್ನ ಆಳವಾದ ಸಂತಾಪಗಳನ್ನು ವ್ಯಕ್ತಪಡಿಸಿದೆ, ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ತಕ್ಷಣವೇ ಆಸ್ಪತ್ರೆಯಲ್ಲಿರುವವರ ಜೀವಗಳನ್ನು ಉಳಿಸಲು ಕ್ರಮ ಕೈಗೊಳ್ಳಬೇಕು ಮತ್ತು ಸಾವಿಗೀಡಾದವರ ಕುಟುಂಬಗಳಿಗೆ ಸಾಕಷ್ಟು ಪರಿಹಾರವನ್ನು ಪ್ರಕಟಿಸಬೇಕು ಎಂದು ಕರೆ ನೀಡಿದೆ.

Leave a Reply

Your email address will not be published. Required fields are marked *