ಜನರಲ್ ಬಿಪಿನ್ ರಾವತ್‌ರ ಅಸಂವಿಧಾನಿಕ ಅಬ್ಬರ

“ಸೇನೆಯ ಪಾತ್ರದ ರಾಜಕೀಯಕರಣದ ವಿರುದ್ಧ  ಸಾಮೂಹಿಕ ದನಿಯನ್ನು ಎತ್ತಬೇಕು”

ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮತ್ತು ದೇಶಾದ್ಯಂತ ರಾಷ್ಟ್ರೀಯ ನಾಗರಿಕರ ನೋಂದಣಿಯತ್ತ ಸಾಗುವುದನ್ನು ವಿರೋಧಿಸುತ್ತಿರುವ ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಖಂಡಿಸುವಲ್ಲಿ ನೇರವಾಗಿ ತೊಡಗಿಕೊಂಡಿದ್ದಾರೆ. ಇದನ್ನು ತಾನು ನಿಸ್ಸಂಗಿದ್ಧವಾಗಿ ಖಂಡಿಸುವುದಾಗಿ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಸೇನಾಧಿsಪತಿಗಳ ಹೇಳಿಕೆ ಮೋದಿ ಸರಕಾರದ ಅಡಿಯಲ್ಲಿ ಪರಿಸ್ಥಿತಿ ಎಷ್ಟರ ಮಟ್ಟಿಗೆ ಅವನತಿಗೊಂಡಿದೆ ಎಂಬುದನ್ನು ಎತ್ತಿ ತೋರುತ್ತದೆ. ಸಮವಸ್ತ್ರದಲ್ಲಿರುವ ಅತ್ಯುನ್ನತ ಅಧಿಕಾರಿ ತನ್ನ ಸಂವಿಧಾನಿಕ ಪಾತ್ರದ ಮಿತಿಗಳನ್ನು ಇಷ್ಟೊಂದು ಭಂಡತನದಿಂದ ಮೀರಲು ಅವಕಾಶವಾಗಿದೆ. ಆದ್ದರಿಂದ ನಾವು ಮಿಲಿಟರಿಯನ್ನು ರಾಜಕೀಯಕರಣಗೊಳಿಸುವಲ್ಲಿ ಪಾಕಿಸ್ತಾನದ ಹಾದಿ ಹಿಡಿಯುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಎತ್ತುವುದು ಅಗತ್ಯವಾಗಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ, ಈ ರೀತಿ ಉನ್ನತ ಮಿಲಿಟರಿ ಅಧಿಕಾರಿಗಳು ಪ್ರಜಾಪ್ರಭುತ್ವ ಹೋರಾಟಗಳ ವಿಷಯಗಳಲ್ಲಿ ಅಸಹ್ಯಕರ ರೀತಿಯ ಹಸ್ತಕ್ಷೇಪ ನಡೆಸುವುದನ್ನು ಹಿಂದೆಂದೂ ಕೇಳಿಲ್ಲ.

ಸೇನಾಧಿಪತಿಗಳು ತನ್ನ ಈ ವಿವೇಚನಾಶೂನ್ಯತೆಗೆ ದೇಶದ ಕ್ಷಮೆ ಕೇಳಬೇಕು, ಇದರಲ್ಲಿ ದೇಶದಲ್ಲಿನ  ಸಂವಿಧಾನಿಕ ಏರ್ಪಾಟಿಗೆ ಅತ್ಯಂತ ಪ್ರತಿಕೂಲವಾದ ಅಂಶಗಳಿವೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ. ಸರಕಾರ ಇಂತಹ ಮಿತಿಭಂಗವನ್ನು ಗಮನಕ್ಕೆ ತಗೊಳ್ಳಬೇಕು ಮತ್ತು ಅವರಿಗೆ ವಾಗ್ದಂಡನೆ ವಿಧಿಸಬೇಕು ಎಂದೂ ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಭಾರತದ ಸಂವಿಧಾನವನ್ನು ಅತ್ಯಂತ ಗೌರವಭಾವದಿಂದ ನೋಡುವ ದೇಶದ ಎಲ್ಲ ದೇಶಪ್ರೇಮಿಗಳು ಸೇನೆಯ ಪಾತ್ರವನ್ನು ಈ ರೀತಿ ಭಂಡವಾಗಿ ರಾಜಕೀಯಕರಣಗೊಳಿಸುವುದರ ವಿರುದ್ಧ ತಮ್ಮ ಸಾಮೂಹಿಕ ದನಿಯನ್ನು ಎತ್ತಬೇಕು ಎಂದು ನಿರೀಕ್ಷಿಸುವುದಾಗಿಯೂ ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *