ಶಾಂತಿಯುತ ಪ್ರತಿಭಟನಾಕಾರರೊಂದಿಗೆ ಪೋಲಿಸರ ಪಾಶವೀ ವರ್ತನೆ

ಎಪ್ಪತ್ತರ ದಶಕದಲ್ಲಿ ಸರ್ವಾಧಿಕಾರಶಾಹಿಯನ್ನು ಸೋಲಿಸಿದ್ದಾರೆ, ಈಗಲೂ ಸೋಲಿಸುತ್ತಾರೆ

ಉತ್ತರ ಪ್ರದೇಶ ಮತ್ತು ಇತರ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮತ್ತು ಪೋಲಿಸ್ ಇಲಾಖೆ ನೇರವಾಗಿ ಕೇಂದ್ರದ ಹತೋಟಿಯಲ್ಲಿರುವ ದಿಲ್ಲಿಯಲ್ಲಿ ಶಾಂತಿಯುತ ಪ್ರತಿಭಟನೆಗಳ ಪಾಶವೀ ದಮನ ನಡೆಸಲಾಗುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.

ಉತ್ತರಪ್ರದೇಶದಲ್ಲಿ ಸಾವುಗಳ ಸಂಖ್ಯೆ ೧೮ ತಲುಪಿದೆ, ಮತ್ತು ಇದು ಹೆಚ್ಚುತ್ತಲೇ ಇದೆ. ಬನಾರಸ್ ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರೂ ಸೇರಿದಂತೆ ೬೯ ಎಡ ಪಕ್ಷಗಳ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಇವರಲ್ಲಿ ೫೬ ಮಂದಿ ಈಗಲೂ ಪೋಲೀಸ್ ಕಸ್ಟಡಿಯಲ್ಲಿದ್ದಾರೆ. ಕೋರ್ಟ್‌ಗಳಿಗೆ ರಜಾ ಇರುವುದರಿಂದ ಜನವರಿ ೨೦೨೦ರ ವರೆಗೂ ಇವರಿಗೆ ಯಾವುದೇ ಕಾನೂನು ನೆರವು ಸಾಧ್ಯವಿಲ್ಲವಾಗಿದೆ. ಮಾಧ್ಯಮಗಳಲ್ಲೂ ಈ ದಾಳಿಗಳ ಪಾಶವೀಯತೆ ವರದಿಯಾಗಿದೆ. ವಿವಿಧ ಇಲೆಕ್ಟ್ರಾನಿಕ್ ತಾಣಗಳು ಪೋಲೀಸ್ ಬರ್ಬರತೆಯ ವೀಡಿಯೋಗಳನ್ನು ಬಿಡುಗಡೆ ಮಾಡಿವೆ. ಇವನ್ನು ಈ ಲಿಂಕ್‌ಗಳಲ್ಲಿ ನೋಡಬಹುದು ಎಂದು ಪೊಲಿಟ್ ಬ್ಯುರೊ ಹೇಳಿಕೆ ತಿಳಿಸಿದೆ.

https://indianexpress.com/article/india/report-on-amu-violence-cops-rais…

https://www.ndtv.com/india-news/citizenship-amendment-act-video-shows-co…

https://m.facebook.com/story.php?story_fbid=1617669225066926&id=31525253...

https://m.facebook.com/story.php?story_fbid=10158275276070798&id=1025270...

https://khabar.ndtv.com/video/show/prime-time/shocking-report-of-police-.

ಉತ್ತರಪ್ರದೇಶ ಸರಕಾರ ಸತ್ತವರಿಗೆ ಮತ್ತು ಗಾಯಗೊಂಡವರಿಗೆ ಪರಿಹಾರವನ್ನು ಘೋಷಿಸುವ ಬದಲು ಮುಖ್ಯಮಂತ್ರಿಗಳು ಸಾರ್ವಜನಿಕ ಆಸ್ತಿಗಳಿಗೆ ಹಾನಿಯ ವೆಚ್ಚವನ್ನು ಪ್ರತಿಭಟನಾಕಾರರಿಂದ ಕಿತ್ತುಕೊಳ್ಳಲಾಗುವುದು ಎಂಬ  ಪ್ರಚಾರವನ್ನು ಆರಂಭಿಸಿದ್ದಾರೆ. ವಾಸ್ತವವಾಗಿ ಹಾನಿಯುಂಟು ಮಾಡುತ್ತಿದ್ದವರು ಪೋಲೀಸರು, ಆದರೆ ಪ್ರತಿಭಟನಾಕಾರರ ಮೇಲೆ ಆರೋಪ ಹೊರಿಸಲಾಗುತ್ತಿದೆ ಎಂಬುದನ್ನು ವೀಡಿಯೋ ರಿಕಾರ್ಡಿಂಗ್‌ಗಳು ಸ್ಪಷ್ಟವಾಗಿ ತೋರಿಸುತ್ತಿವೆ. ದಿಲ್ಲಿಯ ಜಾಮಿಯ ಮಿಲಿಯ ವಿಶ್ವವಿದ್ಯಾಲಯದಲ್ಲಿ ಪೋಲೀಸರು ಉಂಟು ಮಾಡಿದ ಹಾನಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿವೆ ಹಾಗೂ ಅವುಗಳ ವೀಡಿಯೋಗಳನ್ನು ತೋರಿಸಲಾಗಿದೆ.

ಉತ್ತರಪ್ರದೇಶದ ಪರಿಸ್ಥಿತಿ ಕೋಮುಧ್ರುವೀಕರಣದ ಹೊಲಸು ತಿರುವು ತೆಗೆದುಕೊಳ್ಳುತ್ತಿದೆ. ಬಿಜೆಪಿ ಇದರ ಮುಂಚೂಣಿಯಲ್ಲಿದೆ. ಬಿಜೆಪಿ ಮುಖಂಡರು, ಸಂವಿಧಾನದ ಅಡಿಯಲ್ಲಿ ಪ್ರತಿಜ್ಞೆ ಕೈಗೊಂಡಿರುವ ಮಂತ್ರಿಗಳೂ ಕೂಡ ’ಗೋಧ್ರಾ ತೆರನ ಸನ್ನಿವೇಶ’ದ ಪುನರಾವರ್ತನೆಯಾಗುತ್ತದೆ ಎಂದು ಎಚ್ಚರಿಕೆಗಳನ್ನು ಕೊಡುತ್ತಿದ್ದಾರೆ. ಇಂತಹ ಪ್ರಚೋದನೆಗಳಿಗೆ ಬಲಿ ಬೀಳಬಾರದು ಎಂದು ಸಿಪಿಐ(ಎಂ) ಜನಗಳಿಗೆ ಮನವಿ ಮಾಡಿಕೊಂಡಿದೆ.

ಉತ್ತರಪ್ರದೇಶ ಸರಕಾರ ಈ ಪ್ರತಿಭಟನೆಗಳನ್ನು ಕೇವಲ ಮುಸ್ಲಿಮರೇ ನಡೆಸುತ್ತಿರುವ ಕೆಲಸಗಳು ಎಂದು ತಿರುಗಿಸಲು ಪ್ರಯತ್ನಿಸುತ್ತಿದೆ. ವಾಸ್ತವತೆಯೆಂದರೆ, ಸಂವಿಧಾನವನ್ನು ಪ್ರೀತಿಸುವ ಎಲ್ಲ ಭಾರತೀಯರೂ, ಧರ್ಮಾತೀತವಾಗಿ ಪ್ರತಿಭಟನೆಗಳಲ್ಲಿ ಸೇರಿಕೊಂಡಿದ್ದಾರೆ. ಬನಾರಸ್‌ನಲ್ಲಿ ಬಂಧಿಸಿರುವ ೬೯ ಎಡ ಕಾರ್ಯಕರ್ತರಲ್ಲಿ ಮುಸ್ಲಿಮರ ಸಂಖ್ಯೆ ಕೇವಲ ೧೩, ಉಳಿದ ೫೬ ಮುಸ್ಲಿಮೇತರರು.

ಉತ್ತರ ಪ್ರದೇಶದಲ್ಲಿ ಎಡಪಕ್ಷಗಳು ಡಿಸೆಂಬರ್ ೩೦ರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನಾ ದಿನವನ್ನು ಆಚರಿಸಲು ನಿರ್ಧರಿಸಿವೆ.

ಕರ್ನಾಟಕದಲ್ಲಿ ಮಂಗಳೂರಿನಲ್ಲಿ ಪೋಲೀಸರು ಇಬ್ಬರನ್ನು ಗುಂಡಿಟ್ಟು ಕೊಂದಿದ್ದಾರೆ. ಆರೆಸ್ಸೆಸ್/ಬಿಜೆಪಿ ಕಾರ್ಯಕರ್ತರು ಬೆಂಗಳೂರಿನಲ್ಲಿ ಸಿಪಿಐ ಕಚೇರಿಯ ಮೇಲೆ ದಾಳಿ ಮಾಡಿ ಬೆಂಕಿಯಿಟ್ಟಿದ್ದಾರೆ.

ತ್ರಿಪುರಾದ ಹಲವೆಡೆಗಳಲ್ಲಿ ಬಿಜೆಪಿ ರಾಜ್ಯ ಸರಕಾರ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಪೋಲೀಸ್ ದಾಳಿಗಳನ್ನು ಹರಿಯಬಿಟ್ಟಿದ್ದಾರೆ. ಬೆಲೊನಿಯ, ಉದಯಪುರ ಮತ್ತಿತರ ಕಡೆಗಳಲ್ಲಿ ಹಲವಾರು ಸಿಪಿಐ(ಎಂ) ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಗುಜರಾತಿನಲ್ಲಿ ೫೦ಕ್ಕೂ ಹೆಚ್ಚು ಸಿಪಿಐ(ಎಂ) ಕಾರ್ಯಕರ್ತರನ್ನು ಬಂಧಿಸಲಾಗಿದೆ. ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಅರುಣ್ ಮೆಹ್ತಾರನ್ನು ಬಂಧಿಸಲಾಗಿದೆ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಿಪಿಐ(ಎಂ) ಕಾರ್ಯಕರ್ತರ ಬಂಧನಗಳು ಮುಂದುವರೆಯುತ್ತಿವೆ.

ಭಾರತೀಯ ಸಂವಿಧಾನ ಶಾಂತಿಯುತವಾಗಿ ಸಭೆ ಸೇರುವ ಮತ್ತು ಪ್ರತಿಭಟಿಸುವ ಹಕ್ಕನ್ನು ಖಾತ್ರಿಪಡಿಸಿದೆ. ಈ ಹಕ್ಕಿನ ಮೇಲೆ ಇಂದು ಬಿಜೆಪಿ ನಿರ್ದಯವಾಗಿ ದಾಳಿ ನಡೆಸಿದೆ. ಭಾರತೀಯ ಜನತೆ ಇಂತಹ ಸರ್ವಾಧಿಕಾರಶಾಹಿ ಅತ್ಯಾಚಾರಗಳನ್ನು ಸಹಿಸಿಕೊಳ್ಳುವದಿಲ್ಲ ಎಂದು ಪೊಲಿಟ್ ಬ್ಯುರೊ ಎಚ್ಚರಿಸಿದೆ. ಭಾರತೀಯ ಜನತೆ ಒಮ್ಮೆ ೧೯೭೦ರ ದಶಕದಲ್ಲಿ ಸರ್ವಾಧಿಕಾರಶಾಹಿ ಪ್ರಹಾರಗಳ ವಿರುದ್ಧ ಹೋರಾಡಿ ಪ್ರಜಾಪ್ರಭುತ್ವವನ್ನು ಮತ್ತೆ ನೆಲೆಗೊಳಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗಳ ಮೂಲಕ ಇದನ್ನು ಮತ್ತೆ ಮಾಡಲಾಗುವುದು ಎಂದು ಅದು ಹೇಳಿದೆ.

ಪ್ರತಿಯೊಬ್ಬ ಭಾರತೀಯ ದೇಶಪ್ರೇಮಿಗೆ ಇರುವುದು ಒಂದೆ ’ಪುಸ್ತಕ’, ಅದೆಂದರೆ ಭಾರತದ ಸಂವಿಧಾನ. ಭಾರತೀಯ ಸಂವಿಧಾನವನ್ನು ಸಿಎಎ/ ಎನ್.ಆರ್.ಸಿ/ ಎನ್.ಪಿ.ಆರ್ ಮೂಲಕ ಉಲ್ಲಂಘಿಸದಂತೆ ರಕ್ಷಿಸುವುದು ಅತ್ಯುನ್ನತ ದೇಶಪ್ರೇಮದ ಕೆಲಸವಾಗಿದೆ. ಶಾಂತಿಯುತ ಪ್ರತಿಭಟನೆಗಳು ನಮ್ಮ ಸಂವಿಧಾನವನ್ನು ಮತ್ತು ಅದರ ಜಾತ್ಯತೀತ ಪ್ರಜಾಸತ್ತಾತ್ಮಕ ಬುನಾದಿಗಳನ್ನು ಕಾಪಾಡಿಕೊಳ್ಳಲು ಮತ್ತು ರಕ್ಷಿಸಲು ಮುಂದುವರೆಯುತ್ತವೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

ಭಾರತೀಯ ಕಮ್ಯುನಿಸ್ಟರು ಎಷ್ಟೋ ದಾಳಿಗಳನ್ನು ಎದುರಿಸಿದ್ದಾರೆ, ಬ್ರಿಟಿಶರ ನಿಷೇಧಗಳನ್ನು ಎದುರಿಸಿ ಅವರ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಸ್ವಾತಂತ್ರ್ಯ-ಪೂರ್ವದಲ್ಲೂ, ಸ್ವಾತಂತ್ರ್ಯದ ನಂತರವೂ ನಡೆಸಿದ ಹೋರಾಟಗಳು ಮತ್ತು ಅವುಗಳಲ್ಲಿನ ಅಗಣಿತ ಹುತಾತ್ಮರು ನಮ್ಮ ದೇಶದ ಇತಿಹಾಸದಲ್ಲಿ ಒಂದು ಭವ್ಯ ಅಧ್ಯಾಯ ಎಂದು ನೆನಪಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಶಾಂತಿಯುತವಾಗಿ ಪ್ರತಿಭಟಿಸುವುದನ್ನು ಮುಂದುವರೆಸಬೇಕು, ಯಾವುದೇ ಪ್ರಚೋದನೆಗಳಿಗೆ ಬಲಿ ಬೀಳಬಾರದು ಎಂದು ಜನತೆಗೆ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *