ಇರಾನಿನ ಉನ್ನತ ಸೇನಾಧಿಕಾರಿ ಕಾಸ್ಸೀಮ್ ಸೊಲೈಮನಿಯವರನ್ನು ಅಮೆರಿಕಾ ಸಂಯುಕ್ತ ಸಂಸ್ಥಾನ ಬಾಗ್ದಾದ್ ವಿಮಾನ ನಿಲ್ದಾಣದ ಹೊರಗೆ ಡ್ರೋನ್ ದಾಳಿ ನಡೆಸಿ ಕೊಂದಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ಒಂದು ಸಾರ್ವಭೌಮ ದೇಶದ ಸಶಸ್ತ್ರ ಪಡೆಗಳ ಮುಖ್ಯಸ್ಥರ ಹತ್ಯೆ ಟ್ರಂಪ್ ಆಡಳಿತದ ಒಂದು ಅಂತರ್ರಾಷ್ಟ್ರೀಯ ದರೋಡೆಕೋರ ಕೃತ್ಯ. ಇದು ಪಶ್ಚಿಮ ಏಶ್ಯ ಮತ್ತು ಕೊಲ್ಲಿ ಪ್ರದೇಶದ ಮೇಲೆ ಅಗಣಿತ ಪರಿಣಾಮಗಳನ್ನು ಉಂಟು ಮಡುತ್ತದೆ. ಇದರಿಂದಾಗಿ ಉಂಟಾಗುವ ಯಾವುದೇ ಸಂಘರ್ಷ ಮತ್ತು ಹಿಂಸಾಚಾರಕ್ಕೆ ಅಮೆರಿಕಾವೇ ಹೊಣೆಯಾಗುತ್ತದೆ ಎಂದು ಪೊಲಿಟ್ ಬ್ಯುರೊ ಹೇಳಿದೆ.
ಮೋದಿ ಸರಕಾರ “ಒಬ್ಬ ಹಿರಿಯ ಇರಾನೀ ಮುಖಂಡರನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಕೊಂದಿದೆ ಎಂಬುದನ್ನು ಗಮನಿಸಿದೆ” ಯಷ್ಟೇ. ಈ ಹೀನ ಕೃತ್ಯಕ್ಕೆ ಅಸಮ್ಮತಿಯನ್ನು ಕೂಡ ಅದು ವ್ಯಕ್ತಪಡಿಸದಿರುವುದು ದುರದೃಷ್ಟಕರ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಈ ಸರಕಾರ ಹೇಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಒಂದು ವಿನಮ್ರ ಮಿತ್ರನಾಗಿ ಬಿಟ್ಟಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಟೀಕಿಸಿದೆ.