ಅನುರಾಗ್ ಠಾಕುರ್ಮತ್ತು ಪರ್ವೆಶ್ ವರ್ಮ ವಿರುದ್ಧ ಎಫ್ಐಆರ್ ಏಕೆ ದಾಖಲಿಸಿಲ್ಲ ಎಂಬ ಬಗ್ಗೆ ವರದಿ ಸಲ್ಲಿಸುವಂತೆ ದಿಲ್ಲಿಯ ಅಡಿಶನಲ್ ಚೀಫ್ ಮೆಟ್ರೊಪೊಲಿಟನ್ ಮ್ಯಾಜಿಸ್ಟೇಟ್ ವಿಶಾಲ್ ಪಹುಜ ನವದೆಹಲಿಯ ಡಿಸಿಪಿ ಯವರಿಗೆ ನೋಟೀಸು ಕಳಿಸಿದ್ದಾರೆ. ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಮತ್ತು ದಿಲ್ಲಿ ರಾಜ್ಯಸಮಿತಿಯ ಕಾರ್ಯದರ್ಶಿ ಕೆ.ಎಂ.ತಿವಾರಿ ಈ ಇಬ್ಬರೂ ಬಿಜೆಪಿ ಮುಖಂಡರು ಚುನಾವಣಾ ಸಂದರ್ಭದಲ್ಲಿ ದ್ವೇಷ ಭಾಷಣ ಮಾಡಿದ್ದರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಡಿಸಿಪಿಗೆ ಆಗ್ರಹಿಸಿದ್ದರು.
ಆದರೆ ಡಿಸಿಪಿ ಈ ಬಗ್ಗೆ ಏನೂ ಕ್ರಮ ಕೈಗೊಳ್ಳದ್ದರಿಂದ ಇವರಿಬ್ಬರು ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಲಯ ಡಿಸಿಪಿಗೆ ಈ ನೋಟೀಸು ಕಳಿಸಿದೆ, ಡಿಸಿಪಿ ಫ್ರಬ್ರುವರಿ ೧೧ರ ಒಳಗೆ ತನ್ನ ಉತ್ತರವನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಈ ಇಬ್ಬರು ಎಂಪಿಗಳ ಪ್ರಚೋದನಕಾರಿ ಹೇಳಿಕೆಗಳಿಂದಾಗಿ ಎರಡು ಕಡೆ ಮೂರು ಗೋಲೀಬಾರಿನ ಘಟನೆಗಳು ನಡೆದವು.