ದೇಶದ ರಾಜಧಾನಿಯಲ್ಲಿ ಅತ್ಯಂತ ಪ್ರಕ್ಷುಬ್ಧ ಪರಿಸ್ಥಿತಿ ಬಗ್ಗೆ, ಭೇಟಿಗೆ ಅವಕಾಶ ಕೇಳಿ ರಾಷ್ಟ್ರಪತಿಗಳಿಗೆ ಯೆಚುರಿ ಪತ್ರ
ದೇಶದ ರಾಜಧಾನಿಯಲ್ಲಿ ಅತ್ಯಂತ ಪ್ರಕ್ಷುಬ್ಧ ಪರಿಸ್ತಿತಿ ಇದೆ. ಈ ಬಗ್ಗೆ ಭಾರತದ ಸಂಸತ್ತಿನಲ್ಲಿ ಪ್ರತಿನಿಧಿಸಲ್ಪಟ್ಟಿರುವ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಅಭಿಪ್ರಾಯಗಳನ್ನು ರಾಷ್ಟ್ರಪತಿಗಳು ಕೇಳಲು ಅವಕಾಶ ಮಾಡಿಕೊಡಬೇಕು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಅವರಿಗೆ ಪತ್ರ ಬರೆದಿದ್ದಾರೆ.
“ನಾನು, ಜತೆಗೆ ಭಾರತ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ. ರಾಜ, ಲೋಕತಾಂತ್ರಿಕ್ ಜನತಾ ದಳದ ಅಧ್ಯಕ್ಷ ಶರದ್ ಯಾದವ್, ಸಮಾಜವಾದಿ ಪಾರ್ಟಿಯ ಅಧ್ಯಕ್ಷ ಅಖಿಲೇಶ್ ಯಾದವ್, ಮತ್ತು ಡಿಎಂಕೆ, ಎನ್ಸಿಪಿ ಹಾಗೂ ಇತರೆ ಪಕ್ಷಗಳ ಪ್ರಮುಖ ಮುಖಂಡರು ತಮ್ಮೊಡನೆ ಮಾತಾಡಲು ಆದಷ್ಟು ಬೇಗನೇ ಅವಕಾಶ ನೀಡಬೇಕು ಎಂದು ಕೋರುತ್ತೇವೆ, ೨೮ ಫೆಬ್ರುವರಿ ೨೦೨೦ ರಂದು ಅಪೇಕ್ಷಣೀಯ” ಎಂದು ಯೆಚುರಿ ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.