ನ್ಯಾ.ಮುರಳೀಧರ ಅವರ ವರ್ಗಾವಣೆ ಜಾರಿ ಸದ್ಯಕ್ಕೆ ತಡೆದಿಡಬೇಕು

ದಿಲ್ಲಿ ಹೈಕೋರ್ಟಿನ ಅತ್ಯಂತ ಹಿರಿಯ ನ್ಯಾಯಾಧೀಶರುಗಳಲ್ಲಿ ಮೂರನೆಯ ಸ್ಥಾನದಲ್ಲಿರುವ ನ್ಯಾಯಮೂರ್ತಿ ಎಸ್.ಮುರಳೀಧರ ಆವರನ್ನು ಮಧ್ಯರಾತ್ರಿಯೇ ಪಂಜಾಬ್ ಮತ್ತು ಹರ‍್ಯಾಣ ಹೈಕೋರ್ಟಿಗೆ ವರ್ಗ ಮಾಡಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಕಳವಳ ವ್ಯಕ್ತಪಡಿಸಿದೆ.
ಈ ವರ್ಗಾವಣೆ ಸುಪ್ರಿಂ ಕೋರ್ಟ್ ಕೊಲಿಜಿಯಂ ಶಿಫಾರಸಿನ ಒಂದು ಭಾಗವಾಗಿದೆ, ಇದನ್ನು ದಿಲ್ಲಿ ಹೈಕೋರ್ಟ್ ಬಾರ್ ಅಸೋಸಿಯೇಶನ್ ತರ್ಕಬದ್ಧ ನ್ಯಾಯಾಂಗ-ಆಡಳಿತಾತ್ಮಕ ಕಾರಣಗಳನ್ನು ಕೊಟ್ಟು ಪ್ರತಿಭಟಿಸಿದೆ. ಈಗ ಈ ವರ್ಗಾವಣೆಯನ್ನು ತರಾತುರಿಯಿಂದ ಜಾರಿಗೆ ತಂದಿರುವುದು ಫೆಬ್ರುವರಿ 25 ರ ರಾತ್ರಿ ಅನಾವರಣಗೊಂಡ ಸಂಗತಿಗೆ ಒಂದು ಆಯ್ದ ಪ್ರತಿಕ್ರಿಯಾಗಿ  ಕಾಣುತ್ತದೆ ಎಂದು ಪೊಲಿಟ್ ಬ್ಯುರೊ ಅಭಿಪ್ರಾಯ ಪಟ್ಟಿದೆ.  ಅದೇನೇ ಇರಲಿ, ನ್ಯಾಯಮೂರ್ತಿ ಮುರಳೀಧರ ಅವರ ನೇತೃತ್ವದ ಪೀಠ ದಿಲ್ಲಿ ಚುನಾವಣೆಗಳಲ್ಲಿ ಮತ್ತು ನಂತರ ಬಿಜೆಪಿಯ ಉನ್ನತ ಮುಖಂಡರ ದ್ವೇಷ ಭಾಷಣಗಳಿಗೆ ರಕ್ಷಣೆ ಕೊಡುವ ದಿಲ್ಲಿ ಪೋಲೀಸರ ಮೋಸವನ್ನು ಬಯಲಿಗೆ ತಂದಿರುವುದಂತೂ ವಾಸ್ತವ ಸಂಗತಿ.
ವಿಶ್ವಾಸಾರ್ಹತೆಯ ತೀವ್ರ ಕೊರತೆ ಉಂಟಾಗಿರುವ ಈ ದಿನಗಳಲ್ಲಿ, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಜನಗಳ ವಿಶ್ವಾಸವನ್ನು ಬಲಪಡಿಸಲು ಈ ವರ್ಗಾವಣೆಯನ್ನು ಸದ್ಯಕ್ಕೆ ತಡೆಹಿಡಿಯಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಸರಕಾರವನ್ನು ಆಗ್ರಹಿಸಿದೆ.

Leave a Reply

Your email address will not be published. Required fields are marked *