ದಿಲ್ಲಿಯ ಕೋಮು ಹಿಂಸಾಚಾರ ಪೀಡಿತರಿಗೆ ಪರಿಹಾರ ಸಂಗ್ರಹ

 
ದಿಲ್ಲಿಯಲ್ಲಿ ನಡೆದಿರುವ ಕೋಮುವಾದಿ ಹಿಂಸಾಚಾರದಿಂದ ಪೀಡಿತರಾದವರಿಗೆ ಪರಿಹಾರ ಮತ್ತು ಮರುವಸತಿಗಾಗಿ ನಿಧಿ ಸಂಗ್ರಹಗಳನ್ನು ಮಾಡಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಜನಗಳಿಗೆ, ಪಕ್ಷದ ಎಲ್ಲ ರಾಜ್ಯ ಸಮಿತಿಗಳಿಗೆ, ಹಿತೈಷಿಗಳಿಗೆ ಹಾಗೂ ಬೆಂಬಲಿಗರಿಗೆ ಮನವಿ ಮಾಡಿದೆ. ಈ ಉದ್ದೇಶದಿಂದ ಸಿಪಿಐ(ಎಂ)ನ ದಿಲ್ಲಿ ರಾಜ್ಯ ಸಮಿತಿ ಒಂದು ಸೌಹಾರ್ದ ಪರಿಹಾರ ಸಮಿತಿಯನ್ನು ರಚಿಸಲಿದೆ.
ದಿಲ್ಲಿಯಲ್ಲಿನ ಕೋಮುವಾದಿ ಹಿಂಸಾಚಾರದಿಂದಾಗಿ ಹಲವು ಪ್ರಾಣಹಾನಿಗಳಾಗಿವೆ, ಜೀವನಾಧಾರಗಳು, ಮನೆಗಳು ಮತ್ತು ಆಸ್ತಿಗಳ ನಾಶ ಉಂಟಾಗಿದೆ. ಹಿಂಸಾಚಾರ ನಡೆದ ಈಶಾನ್ಯ ದಿಲ್ಲಿಯ ಪ್ರದೇಶಗಳಲ್ಲಿ ಎರಡೂ ಸಮುದಾಯಗಳ ಅಸಂಘಟಿತ ಕಾರ್ಮಿಕರು, ಕಾರ್ಮಿಕ ವರ್ಗ ಮತ್ತು ಕೆಳ ಮಧ್ಯಮವರ್ಗದ ಕುಟುಂಬಗಳು ದೊಡ್ಡ ಸಂಖ್ಯೆಯಲ್ಲಿ ಇವೆ. ಸಾವಿರಾರು ಮಂದಿಯನ್ನು ಹಿಂಸಾಚಾರ ವಿವಿಧ ರೀತಿಗಳಲ್ಲಿ ಬಾಧಿಸಿದೆ. ಈ ಬಾಧಿತ ಪ್ರದೇಶಗಳಲ್ಲಿ ನೋವು ಮತ್ತು ಸಂಕಟ ವ್ಯಾಪಕವಾಗಿದೆ.
ಇಂತಹ ಸನ್ನಿವೇಶದಲ್ಲಿ ಪರಿಹಾರಕಾರ್ಯವು ಕೋಮುಗ್ರಸ್ತಗೊಳ್ಳಬಾರದು, ಜಾತ್ಯತೀತ ನಿಲುವಿನಿಂದ ತಲುಪಬೇಕು ಮತ್ತು ಎಲ್ಲ ಬಾಧಿತ ವಿಭಾಗಗಳಿಗೆ, ಅವರು ಯಾವುದೇ ಧಾರ್ಮಿಕ ನಂಬಿಕೆಗಳವರಾಗಿರಲಿ, ನೆರವು ಒದಗಿಸುವ ಗುರಿಯಿಂದ ನಡೆಯುವಂತೆ ಖಾತ್ರಿಪಡಿಸಬೇಕಾಗಿದೆ. ಈ ಕರೆಯನ್ನು ತುರ್ತಾಗಿ ಪರಿಗಣಿಸಬೇಕು ಮತ್ತು ಉದಾರವಾಗಿ ಕೊಡುಗೆ ನೀಡಬೇಕು ಎಂದು ಪೊಲಿಟ್‌ಬ್ಯುರೊ ಮನವಿ ಮಾಡಿದೆ. ಚೆಕ್‌ಗಳನ್ನು Communist Party of India(Marxist)ಗೆ ಬರೆಯಬೇಕು ಎಂದು ಅದು ಹೇಳಿದೆ.

Leave a Reply

Your email address will not be published. Required fields are marked *