ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯದ ಸೂಚಕ ಕೊರೋನ ಆಪಾಯದ ಹಿನ್ನೆಲೆಯಲ್ಲಿ ಇಡೀ ರಾಜ್ಯ ಹಾಗೂ ದೇಶ ಲಾಕೌನ್ ಆಗಿರುವುದರಿಂದ ಬದುಕು ಕಳೆದುಕೊಂಡಿರುವ ಅಸಂಘಟಿಶರಿಗೆ ಆರಂಭದಲ್ಲಿ ಮೂರು ಹೊತ್ತು ಉಚಿತ ಆಹಾರ ನೀಡುವ ಕ್ರಮ ಜರುಗಿಸಿ ಒಂದೇ ದಿನದಲ್ಲಿ ಅದನ್ನು ಹಿಂಪಡೆದಿರುವ ಕ್ರಮವು ರಾಜ್ಯ ಬಿಜೆಪಿ ಸರ್ಕಾರದ ಕ್ರಿಮಿನಲ್ ಹೊಣೆಗೇಡಿತನವಾಗಿದೆ ಎಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಖಂಡಿಸಿದೆ.
ದಿನ ಒಂದಕ್ಕೆ ಸರಾಸರಿ ೧.೭೬ ಲಕ್ಷ ಬಡ ಜನತೆ ಪ್ರತಿನಿತ್ಯ ಬೆಂಗಳೂರಿನಲ್ಲಿ ಆಹಾರ ಸೇವಿಸುತ್ತಿದ್ದರು. ೨೩ ಮಾರ್ಚ್ ಒಂದು ದಿನ ಲಾಕೌನ್‌ನಿಂದಾಗಿ ಆ ಸಂಖ್ಯೆ ೨.೫ ಲಕ್ಷಕ್ಕೆ ಏರಿತ್ತು ಎಂಬ ವರದಿಯಿದೆ, ಆಹಾರ ಪಡೆಯುವವರು ಮುಗಿಬಿದ್ದರು ಆದರಿಂದ ಸೋಷಿಯಲ್ ಡಿಸೆಂಸಿಂಗ್‌ಗೆ ತೊಡಕಾಗುತ್ತದೆ, ಕೋರೋನ ಹರಡುವಿಕೆಗೆ ಸಹಾಯವಾಗುತ್ತದೆ ಎಂಬ ಕುಂಟು ನೆಪ ನೀಡಿ ಇಂದಿರಾ ಕ್ಯಾಂಟಿನ್ ಮುಚ್ಚಿರುವುದು ಬಿಜೆಪಿ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಎತ್ತಿ ತೋರುತ್ತದೆ.
ರಾಜ್ಯ ಸರ್ಕಾರ ಅನುದಾನ ನೀಡಿಲ್ಲ ಎಂಬ ನೆಪ ನೀಡಿ ಈ ಹಿಂದೆಯೇ ಬಿಬಿಎಂಪಿ ಯಲ್ಲಿನ ಬಿಜೆಪಿ ಆಡಳಿತ ಇಂದಿರಾ ಕ್ಯಾಂಟೀನ್ ಮುಚ್ಚಲು ಮುಂದಾಗಿತ್ತು. ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅವುಗಳನ್ನು ಮುಚ್ಚಲು ಹವಣಿಸುತ್ತಿತ್ತು. ಇದೀಗ ಕೊರೋನ ಭೀತಿಯ ನೆಪ ನೀಡಿ ತನ್ನ ರಾಜಕೀಯ ಹಿತಾಸಕ್ತಿಗೆ ಪೂರಕವಾಗಿ ಇಂದಿರಾ ಕ್ಯಾಂಟೀನ್ ಮುಚ್ಚಿ ಬಡ ಜನತೆಗೆ ಅಸಂಘಟಿತರಿಗೆ ದೋಹ ಎಸಗಿದೆ ಎಂದು ಸಿಪಿಐ(ಎಂ) ಖಂಡಿಸಿದೆ.
ಕೂಡಲೇ ಇಂದಿರಾ ಕ್ಯಾಂಟಿನ್ ತೆರೆದು ಮೂರು ಹೊತ್ತು ಉಚಿತ ಆಹಾರ ಒದಗಿಸಬೇಕು ಮಾತ್ರವಲ್ಲ ಅಗತ್ಯವುಳ್ಳವರ ಮನೆಗೆ ಸರಬರಾಜು ಮಾಡಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಕೆ.ಎನ್. ಉಮೇಶ್, ಕಾರ್ಯದರ್ಶಿ
ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ