ದೇಶದಾದ್ಯಂತ ಕರೋನಾ ವೈರಸ್ ಹಾವಳಿಯು ಮೂರನೇ ಹಂತ ತಲುಪುವ ಸಂಕಷ್ಠದಲ್ಲಿ ನಾವಿದ್ದೇವೆ. ಅದು ನಿಯಂತ್ರಣಕ್ಕೆ ಬಾರದಿದ್ದಲ್ಲಿ ನಾಲ್ಕನೇ ಹಂತಕ್ಕೆ ಸಾಗ ಬಹುದೆನ್ನಲಾಗಿದೆ. ಈ ರೀತಿಯಲ್ಲಿ ದೇಶಕ್ಕೆ ದೇಶವೇ ಸಂಕಷ್ಟಕ್ಕೆ ಹಾಗೂ ಆತಂಕಕ್ಕೆ ಸಿಲುಕುತ್ತಿರುವಾಗ ಜನಗಣತಿಯನ್ನು ಹೇಗೆ ಮುನ್ನಡೆಸುವುದು. ಆದ್ದರಿಂದ ಜನಗಣತಿಯನ್ನು ಮತ್ತು ಅದರ ಸಿದ್ಧತೆಯನ್ನು ಮುಂದೂಡಲು ವಿನಂತಿಸುವೆವು.
ಮಾತ್ರವಲ್ಲಾ, ಭಾರತದ ಜಾತ್ಯತೀತ ಪ್ರಜಾ ಸತ್ತೆಗೆ ಧಕ್ಕೆ ತರುವ ಮತ್ತು ಧರ್ಮದ ಆದಾರದಲ್ಲಿ ದೇಶವನ್ನು ಒಡೆಯುವ ಸಂಚಿನ ಭಾಗವಾಗಿ ಬಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ – ೨೦೧೯ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ- ೨೦೧೩ ರ ರೂಲ್ಸ್ ನಂಬರ್ 3,4,5,5,(a)(b) ಮತ್ತು 6 (a),(b)(c) ಇವುಗಳನ್ನು ಕೈ ಬಿಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಮತ್ತು ರಾಷ್ಟ್ರೀಯ ಪೌರತ್ವ ನೊಂದಾವಣೆ ಮಾಡುವ ರಾಷ್ಟ್ರೀಯ ಜನಸಂಖ್ಯಾ ದಾಖಲಾತಿ (NPR) ಯು ಅಗತ್ಯವಲ್ಲ.
ಇದರ ವಿರುದ್ದ ದೇಶ ಹಾಗೂ ರಾಜ್ಯದಾದ್ಯಂತ ವ್ಯಾಪಕ ಪ್ರತಿರೋಧ ಬಂದಿದೆ. ರಾಜ್ಯದ ಬಹುತೇಕ ದಲಿತರು, ಬಡವರು, ರೈತರು ಕಾರ್ಮಿಕರು, ಹಿರಿಯ ನಾಗರೀಕರು ಅಸ್ಸಾಂ ನ ಅನುಭವದಿಂದ ಆತಂಕಿತರಾಗಿದ್ದಾರೆ. ಎನ್ಪಿ ಆರ್ ನಲ್ಲಿನ ಪ್ರಶ್ನೆಗಳು ಆನಂತರ ಎನ್ಆರ್ಸಿ ಪಟ್ಟಿಯಲ್ಲಿ ಹೆಸರಿನ ಮುಂದೆ ಇರಬಹುದಾದ ಅನುಮಾನಾಸ್ಪದರೆಂಬ ಕಪ್ಪು ಚುಕ್ಕೆಯಿಂದ ಭೀತರಾಗಿದ್ದಾರೆ. ಬೇರೆ ದೇಶಗಳ ನಿರಾಶ್ರಿತರಿಗೆ ಪೌರತ್ವ ನೀಡುವ ಉದ್ದೇಶದಿಂದ ಜಾರಿಗೊಳಿಸಲಾಗುತ್ತಿದೆಯೆಂಬ ಈ ಕೆಲಸವು ಸಾವಿರಾರು ವರ್ಷಗಳಿಂದ ಇರುವ ಇಲ್ಲಿನ ಮೂಲ ನಿವಾಸಿಗಳನ್ನು ದೇಶ ಭ್ರಷ್ಟರನ್ನಾಗಿಸಿ ಡಿಟೆನ್ಷನ್ ಸೆಂಟರ್ ಗೆ ತಳ್ಳಲಿದೆಯೆಂಬ ಆತಂಕ ವ್ಯಾಪಕವಾಗಿದೆ. ಆದ್ದರಿಂದ ಈ ಜನವಿರೋದಿ ಎನ್ಪಿಆರ್ ಗಣತಿಯನ್ನು ರಾಜ್ಯದಲ್ಲಿ ಜಾರಿಗೆ ತರಬಾರದೆಂದು ಮತ್ತು ಅದನ್ನು ಕೂಡಲೇ ರದ್ದು ಪಡಿಸಬೇಕೆಂದು ಒತ್ತಾಯಿಸುವೆವು.
ಯು. ಬಸವರಾಜ ರಾಜ್ಯ ಕಾರ್ಯದರ್ಶಿ