ಹಲಸೂರು ಪೋಲಿಸ್ ಇನ್ಸಪೆಕ್ಟರ್ ಶಿವಪ್ರಸಾದ್ ಮೇಲೆ ಕ್ರಮಕ್ಕೆ ಆಗ್ರಹ

ಕಾಮಿ೯ಕ ಮುಖಂಡರ ಮೇಲೆ ಪೋಲಿಸ್ ಠಾಣೆಯಲ್ಲೆ

ಹಲ್ಲೆ ನಡೆಸಿ ಅನುಚಿತವಾಗಿ ವತಿ೯ಸಿರುವ ಬೆಂಗಳೂರಿನ ಹಲಸೂರು ಠಾಣೆ ಇನ್ಸಪೆಕ್ಟರ್ ಶಿವಪ್ರಸಾದ್ ಮೇಲೆ ಕೂಡಲೆ ಕ್ರಮ ವಹಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಕಾಮಿ೯ಕ ಇಲಾಖೆಯು ಹಮ್ಮಿಕೊಂಡಿರುವ ಕಾಮಿ೯ಕರಿಗೆ ಪರಿಹಾರವನ್ನು ಸಮ೯ಪಕವಾಗಿ ಜಾರಿಗೆ ತರುವ ನಿಟ್ಟಿನಲ್ಲಿ ಕಾಮಿ೯ಕ ಇಲಾಖೆಯ ಕಾಯದಶಿ೯ಗಳು ಕೇಂದ್ರ ಕಾಮಿ೯ಕ ಸಂಘಟನೆಗಳ ಜೊತೆ ಸಭೆ ನಡೆಸಿ ಬೆಂಗಳೂರಿನ ಡಿಸಿಪಿ ವಲಯವಾರು ಕಾಮಿ೯ಕ ಸಂಘಟನೆಗೆ ಸಂಯೋಜನೆ ಜವಾಬ್ದಾರಿ ನೀಡಿದ್ದಾರೆ.

ಅದರಂತೆ 2.4.2020 ರಂದು ವಿವಿಧ ವಲಯದ ಕಾಮಿ೯ಕ ಸಂಘಟನೆಳು ಪ್ರತ್ಯೇಕ ವಲಯವಾರು ಸಭೆ ನಡೆಸಿ ಸಂತ್ರಸ್ತರ ಪಟ್ಟಿ ಮಾಡಿ ವಲಯವಾರು ಡಿಸಿಪಿ ಮತ್ತು ಬಿಬಿಎಂಪಿ ಜಂಟಿ ಆಯುಕ್ತರ ಜೊತೆಗೆ ಜವಾಬ್ದಾರಿ ನೀಡಲಾಗಿರುವ ಕಾಮಿ೯ಕ ಅಧಿಕಾರಿಗಳನ್ನು ಒಳಗೊಂಡು ಚಚಿ೯ಸಲು ಮುಂದಾಗಿದ್ದಾರೆ.

ಈ ಪ್ರಯತ್ನದ ಭಾಗವಾಗಿ ಪೂವ೯ ವಲಯದ ಕಾಮಿ೯ಕ ಕಾಮಿ೯ಕ ಸಂಘಟನೆಗಳ ಸಂಯೋಜಕರಾದ ಎಐಸಿಸಿಟಿಯು ಅಪ್ಪಣ್ಣ ಜೊತೆ ಸಿಐಟಿಯು ರಾಜ್ಯ ನಾಯಕರಾದ ಹೆಚ್.ಎನ್.ಗೋಪಾಲಗೌಡ, ಎನ್.ಪ್ರತಾಪ್ ಸಿಂಹಾ ಹಾಗು ಕಾಮಿ೯ಕ ಅಧಿಕಾರಿ ಹಲಸೂರು ಪೋಲಿಸ್ ಠಾಣೆಗೆ ಬೆಂಗಳೂರು ಪೂವ೯ವಯ ಡಿಸಿಪಿಯವರ ಸಮಯಾವಕಾಶ ಕೋರಿ ಅವರು ನೀಡಿದ ಸಮಯಕ್ಕೆ ಅವರನ್ನು ಬೇಟಿ ಮಾಡಲು ಹೋದಾಗ ಕಾಮಿ೯ಕ ಅಧಿಕಾರಿಗಳನ್ನು ಮಾತನಾಡಲು ಬಿಡದೆ ಡಿಸಿಪಿಯವರು ಠಾಣೆಗೆ ಬರುವ ಮುನ್ನ ಪೋಲಿಸ್ ಇನ್ಸಪೆಕ್ಟರ್ ಈ ರೀತಿ ನೆಡೆದುಕೊಂಡಿದ್ದಾರೆ. ಇಂತಹ ನಡೆ ಅಕ್ಷಮ್ಯ ಎಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ಖಂಡಿಸುತ್ತದೆ.

Leave a Reply

Your email address will not be published. Required fields are marked *