ಪ್ರಧಾನ ಮಂತ್ರಿಗಳು ಬಿಜೆಪಿ ಪಕ್ಷದ ಕಚೇರಿಯಿಂದ ಅದರ 40ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿದ ಮಾಡಿದ ಭಾಷಣದಲ್ಲಿ ಅವರಿಗೆ ಲಾಕ್ಡೌನನ್ನು ಉಲ್ಲಂಘಿಸಲು ಒಂದು ಬಹಿರಂಗ ಕರೆ ನೀಡಿದರು.
ಮೊದಲನೆಯದಾಗಿ, ಅವರು ತಾನು ಸೃಷ್ಟಿಸಿದ ನಿಧಿಗೆ ಉದಾರವಾಗಿ ದೇಣಿಗೆ ನೀಡಬೇಕು ಮತ್ತು 40 ಇತರರಿಂದ ದೇಣಿಗೆಗಳನ್ನು ಸಂಗ್ರಹಿಸಬೇಕು ಎಂದರು.
ಎರಡನೆಯದಾಗಿ, ಪ್ರತಿ ಮತಗಟ್ಟೆ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಅಗತ್ಯ ಸೇವೆಗಳು ಮತ್ತು ಆರೋಗ್ಯ ಪಾಲನೆಯಲ್ಲಿ ತೊಡಗಿರುವ ಕನಿಷ್ಟ 40 ಜನಗಳನ್ನು ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ಹೇಳಲು ಭೇಟಿಯಾಗಬೇಕು.
ಮೂರನೆಯದಾಗಿ, ಆಹಾರ, ಆಶ್ರಯ ಮತ್ತು ಕೂಲಿಗಳನ್ನು ಒದಗಿಸಬೇಕಾದ ತನ್ನ ಹೊಣೆಗಾರಿಕೆಯನ್ನು ನಿಭಾಯಿಸದ ಸರಕಾರದ ಪ್ರಧಾನ ಮಂತ್ರಿಗಳು, ಈಗ ತಮ್ಮ ಕಾರ್ಯಕರ್ತರು ಲಾಕ್ಡೌನನ್ನು ಉಲ್ಲಂಘಿಸಿ ಪರಿಹಾರವನ್ನು ಒದಗಿಸಬೇಕು ಎಂದು ಕರೆ ನೀಡಿದ್ದಾರೆ.
ಇದು ಪ್ರಧಾನ ಮಂತ್ರಿಗಳು ತಾನೇ ಪ್ರಕಟಿಸಿದ 21 ದಿನಗಳ ಲಾಕ್ಡೌನನ್ನು ತಾನೇ ಬಹಿರಂಗವಾಗಿ ಉಲ್ಲಂಘಿಸುತ್ತಿರುವುದಲ್ಲದೆ, ಮತ್ತು ಆಳುವ ಪಕ್ಷಕ್ಕೆ ಬಹಿರಂಗ ಪ್ರೋತ್ಸಾಹ ನೀಡುವುದಲ್ಲದೆ ಬೇರೇನೂ ಅಲ್ಲ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಇದು ಆಕ್ಷೇಪಾರ್ಹ ಮಾತ್ರವೇ ಅಲ್ಲ, ಕೊವಿಡ್-19 ಮಹಾಮಾರಿಯ ವಿರುದ್ಧ ದೇಶದ ಮತ್ತು ಜನತೆಯ ಹೋರಾಟ ಯಶಸ್ವಿಯಾಗಬೇಕಾದರೆ ಅದನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.
ಪ್ರಧಾನ ಮಂತ್ರಿಗಳು ತಕ್ಷಣವೇ ಇದನ್ನು ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ನೀಡಿದೆ.