ಪ್ರಧಾನ ಮಂತ್ರಿಗಳು, ಬಿಜೆಪಿ ಪಕ್ಷದ ಕಚೇರಿಯಿಂದ ಅದರ 40ನೇ ಸ್ಥಾಪನಾ ದಿನದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರಿಗೆ ಲಾಕ್ಡೌನನ್ನು ಉಲ್ಲಂಘಿಸಲು ಒಂದು ಬಹಿರಂಗ ಕರೆ ನೀಡಿರುವುದು ಖೇದಕರ ವಿಚಾರವಾಗಿದೆ.
ಒಂದೆಡೆ ದೇಶದಾದ್ಯಂತ ಜನತೆ ಮನೆಯಲ್ಲಿಯೇ ಉಳಿಯಲು ಹೇಳುವುದು ಇನ್ನೊಂದೆಡೆ ತನ್ನ ಪಕ್ಷದ ಕಾರ್ಯಕರ್ತರಿಗೆ ಉಲ್ಲಂಘಿಸುವ ಆದೇಶ ನೀಡುವುದು ಪ್ರಧಾನ ಮಂತ್ರಿಗಳ ದ್ವಂದ್ವ ನಡೆಯಾಗಿದೆ.
ಮೊದಲನೆಯದಾಗಿ, ಅವರು ತಾನು ಸೃಷ್ಟಿಸಿದ ನಿಧಿಗೆ ಉದಾರವಾಗಿ ದೇಣಿಗೆ ನೀಡಬೇಕು ಮತ್ತು ಇತರರಿಂದ ದೇಣಿಗೆಗಳನ್ನು ಸಂಗ್ರಹಿಸಬೇಕು ಎಂದು ಕರೆ ನೀಡಿದರು. ಎರಡನೆಯದಾಗಿ, ಪ್ರತಿ ಮತಗಟ್ಟೆ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಅಗತ್ಯ ಸೇವೆಗಳು ಮತ್ತು ಆರೋಗ್ಯ ಪಾಲನೆಯಲ್ಲಿ ತೊಡಗಿರುವ ಕನಿಷ್ಟ 40 ಜನಗಳನ್ನು ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ಹೇಳಲು, ಮೂರನೆಯದಾಗಿ, ಆಹಾರ, ಆಶ್ರಯ ಮತ್ತು ಕೂಲಿಗಳನ್ನು ಒದಗಿಸಬೇಕಾದ ತನ್ನ ಹೊಣೆಗಾರಿಕೆಯನ್ನು ನಿಭಾಯಿಸದ ಸರಕಾರದ ಪ್ರಧಾನ ಮಂತ್ರಿಗಳು, ಈಗ ತಮ್ಮ ಕಾರ್ಯಕರ್ತರು ಲಾಕ್ಡೌನನ್ನು ಉಲ್ಲಂಘಿಸಿ ಪರಿಹಾರವನ್ನು ಒದಗಿಸಬೇಕು ಎಂದು ಕರೆ ನೀಡಿದ್ದಾರೆ.
ಇದು ಪ್ರಧಾನ ಮಂತ್ರಿಗಳು ತಾವೇ ಪ್ರಕಟಿಸಿದ 21 ದಿನಗಳ ಲಾಕ್ಡೌನ್ನನ್ನು ತಾವೇ ಬಹಿರಂಗವಾಗಿ ಉಲ್ಲಂಘಿಸಿದಂತಾಗಿದೆ ಮತ್ತು ಆಳುವ ಪಕ್ಷ ಕ್ಕೆ ಬಹಿರಂಗ ಪ್ರೋತ್ಸಾಹ ನೀಡುವುದಲ್ಲದೆ ಬೇರೇನೂ ಅಲ್ಲ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಠೀಕಿಸಿದೆ. ಇದು ಆಕ್ಷೇಪಾರ್ಹ ಮಾತ್ರವೇ ಅಲ್ಲಾ, ಕೊವಿಡ್-19 ಮಹಾಮಾರಿಯ ವಿರುದ್ಧ ದೇಶದಾದ್ಯಂತ ಜನತೆಯು ಒಟ್ಟಾಗಿ ನಡೆಸುತ್ತಿರುವ ಹೋರಾಟವು ಯಶಸ್ವಿಯಾಗಬೇಕಾದರೆ ಇಂತಹ ಉಲ್ಲಂಘನೆಯನ್ನು ಕೂಡಲೇ ತಡೆಯಬೇಕು.
ಆದ್ದರಿಂದ ಪ್ರಧಾನ ಮಂತ್ರಿಗಳು ತಕ್ಷಣವೇ ಇದನ್ನು ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಕರೆ ನೀಡಿದೆ.