ಆನಂದ ತೆಲ್ತುಂಬ್ಡೆ ಮತ್ತು ಗೌತಮ್ ನವ್ಲಖ ಅವರನ್ನು ಭೀಮ-ಕೋರೆಗಾಂವ್ ಪ್ರಶ್ನೆಯಲ್ಲಿ ಸಂಪೂರ್ಣವಾಗಿ ಕೃತಕವಾಗಿ ಸೃಷ್ಟಿಸಿದ ಆರೋಪಗಳ ಮೇಲೆ ಬಂಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ಕೊವಿಡ್-೧೯ ಮಹಾಮಾರಿಯ ಹಿನ್ನೆಲೆಯಲ್ಲೂ ಮಾನ್ಯ ಸುಪ್ರಿಂ ಕೋರ್ಟ್ ಅವರ ಬಂಧನಗಳನ್ನು ಮುಂದೂಡದಿರುವುದು ಕಳವಳಕಾರೀ ಸಂಗತಿ ಎಂದು ಅದು ಹೇಳಿದೆ.
ಆನಂದ ತೇಲ್ತುಂಬ್ಡೆ ಜಾತಿ ಮತ್ತು ವರ್ಗಗಳ ಪ್ರಶ್ನೆಗಳ ಕುರಿತ ಒಬ್ಬ ರಾಜಕೀಯ ವಿದ್ವಾಂಸರು, ಮತ್ತು ಬಾಬಾಸಾಹೇಬರ ಕುಟುಂಬದ ಒಬ್ಬ ಸದಸ್ಯರು, ಹಾಗೂ ಗೌತಮ್ ನವ್ಲಖ ಒಬ್ಬ ಮಾನವ ಹಕ್ಕುಗಳ ಮತ್ತು ರಾಜಕೀಯ ಕಾರ್ಯಕರ್ತರು. ಇವರಿಬ್ಬರನ್ನು ಅಂಬೇಡ್ಕರ್ ಜಯಂತಿಯ ದಿನದಂದೇ ಬಂಧಿಸಿರುವುದು ನಮ್ಮ ದೇಶದಲ್ಲಿನ ಈಗಿನ ಪರಿಸ್ಥಿತಿಯ ಮೇಲೆ ಒಂದು ಅರ್ಥಪೂರ್ಣ ಟಿಪ್ಪಣಿ.
ಸುಪ್ರಿಂ ಕೋರ್ಟ್ ಈ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಮನವಿ ಮಾಡಿಕೊಂಡಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಒಂದು ನ್ಯಾಯಪೂರ್ಣ ವಿಚಾರಣೆ ನಡೆಯಬೇಕು ಎಂದು ಒತ್ತಾಯಿಸಿದೆ.