ಕೋವಿಡ್-19 ನಿಂದಾಗಿ ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವ ಜನತೆಯ ಮೇಲೆ ಮತ್ತೊಂದು ಸಂಕಷ್ಟಕ್ಕೆ ಎಡೆ ಮಾಡುವಂತೆ ರಾಜ್ಯದಲ್ಲಿ ಸರಿಯಾದ ಮುಂಜಾಗೃತೆಯನ್ನು ಕೈಗೊಳ್ಳದೇ ಏಕಾಏಕಿಯಾಗಿ ಎರಡು ತಿಂಗಳುಗಳ ವಿದ್ಯುತ್ ಬಿಲ್ ಗಳನ್ನು ನೀಡಿ ಮತ್ತಷ್ಟು ಹೊರೆ ನೀಡಿರುವ ಕ್ರಮವನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಮನವಿ ಪತ್ರದ ಪೂರ್ಣ ಪಾಠ ಈ ಕೆಳಗಿನಂತಿವೆ:
ಇವರಿಗೆ,
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರಕಾರ, ವಿಧಾನಸೌಧ, ಬೆಂಗಳೂರು.
ಮಾನ್ಯರೇ,
ಲಾಕ್ ಡೌನ್ ಅವಧಿಯಲ್ಲಿ ವಿದ್ಯುತ್ ಬಿಲ್ ಗಳನ್ನು ನೀಡದ ರಾಜ್ಯದ ವಿವಿಧ ವಿದ್ಯುತ್ ಕಂಪನಿಗಳು ಇದೀಗ ಕಳೆದೆರಡು ತಿಂಗಳ ಬಿಲ್ ಗಳನ್ನು ಒಟ್ಟಾಗಿ ನೀಡುತ್ತಿವೆ. ಹಾಗೆ ಎರಡೂ ತಿಂಗಳ ಬಿಲ್ ಒಂದೇ ಬಾರಿ ನೀಡುವಾಗ,ಎರಡೂ ತಿಂಗಳ ವಿದ್ಯುತ್ ಬಳಕೆಯ ಯುನಿಟ್ಗಳನ್ನು ಒಟ್ಟಿಗೆ ಪರಿಗಣಿಸಲಾಗುತ್ತಿದೆ. ಇದರಿಂದಾಗಿ, ಹೆಚ್ಚುವರಿ ಸ್ಲ್ಯಾಬ್ ದರವನ್ನೂ ಗ್ರಾಹಕರು ನೀಡುವಂತಾಗಿದೆ ಸಾಮಾನ್ಯವಾಗಿ ಬರುತ್ತಿದ್ದ ಮಾಸಿಕ ವಾದ ವಿದ್ಯುತ್ ಬಿಲ್ ಗಿಂತಲೂ ಹೆಚ್ಚಿನ ಬಿಲ್ ಗ್ರಾಹಕರನ್ನು ಕಂಗಾಲಾಗಿಸಿದೆ. ಮಾಸಿಕ ಬಿಲ್ ಗಿಂತಲೂ ಹೆಚ್ಚಾಗಿ ಬಂದಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಠ ಎದುರಿಸಿದ ಜನತೆಗೆ ನೆರವು ನೀಡಬೇಕಾದುದು ನ್ಯಾಯವಾಗಿದೆ, ಆದರೇ, ವಿದ್ಯುತ್ ಕಂಪನಿಗಳು ಸದರಿ ಸಂಕಷ್ಠದ ಸಂದರ್ಭದಲ್ಲಿ ಹೆಚ್ಚುವರಿ ಬಿಲ್ ವಸೂಲಿಗೆ ನಿಂತಿರುವುದು ಖಂಡನೀಯವಾಗಿದೆ.
ಆದ್ದರಿಂದ, ರಾಜ್ಯ ಸರಕಾರ ಕೂಡಲೇ ಮದ್ಯ ಪ್ರವೇಶಿಸಿ , ವಿದ್ಯುತ್ ಕಂಪನಿಗಳ ಹೆಚ್ಚುವರಿ ವಸೂಲಾತಿಯನ್ನು , ಗ್ರಾಹಕರ ಕೊಳ್ಳೆಯನ್ನು ತಡೆಯಲು ಮತ್ತು ಗ್ರಾಹಕರಿಂದ ಅದಾಗಲೇ ವಸೂಲಿ ಮಾಡಲಾದ ಮೊತ್ತವನ್ನು ವಾಪಾಸು ನೀಡುವಂತೆ ಅಗತ್ಯ ಕ್ರಮ ವಹಿಸಲು ವಿನಂತಿ.
ಯು. ಬಸವರಾಜ ಕಾರ್ಯದರ್ಶಿ