ಮೇ 22ರಂದು ಪ್ರತಿಪಕ್ಷಗಳ ಮುಖಂಡರ ಸಭೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದ್ದು ಇದರಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಭಾಗವಹಿಸಲಿದ್ದಾರೆ.
ಕೇಂದ್ರ ಸರಕಾರ ತಕ್ಷಣ ಜಾರಿಗೊಳಿಸುವಂತೆ ಪ್ರತಿಪಕ್ಷಗಳು ಜಂಟಿಯಾಗಿ ಎತ್ತಿಕೊಳ್ಳಬೇಕೆಂದು ಯೆಚುರಿಯವರು ಈ ಕೆಳಗಿನ ಪ್ರಶ್ನೆಗಳನ್ನು ಮಂಡಿಸಲಿದ್ದಾರೆ.
- ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ ಮಹಾಮಾರಿಯ ಅವಧಿಯಲ್ಲಿ ತಿಂಗಳಿಗೆ ರೂ.7500 ನೇರ ನಗದು ವರ್ಗಾವಣೆ
- ತಿಂಗಳಿಗೆ 10 ಕೆ.ಜಿ.ಆಹಾರಧಾನ್ಯಗಳನ್ನು ಅಗತ್ಯವಿರುವ ಎಲ್ಲ ವ್ಯಕ್ತಿಗಳಿಗೆ ಮುಂದಿನ ಆರು ತಿಂಗಳು ಉಚಿತವಾಗಿ ಕೊಡಬೇಕು.
- ಎಲ್ಲ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳನ್ನು ತಲುಪಲು ಉಚಿತ ಸಾರಿಗೆ ವ್ಯವಸ್ಥೆ.
- ಎಲ್ಲ ಏಕಪಕ್ಷೀಯ ನಿರ್ಧಾರಗಳನ್ನು, ನಿರ್ದಿಷ್ಟವಾಗಿ ಕಾರ್ಮಿಕ ಕಾನೂನುಗಳ ರದ್ಧತಿಯ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು.
- ತಕ್ಷಣವೇ ಹಿಂಗಾರು ಬೆಳೆಗಳನ್ನು ಮತ್ತು ಸಣ್ಣ ಅರಣ್ಯ ಉತ್ಪನ್ನಗಳನ್ನು ಕನಿಷ್ಟ ಬೆಂಬಲ ಬೆಲೆಗಳಲ್ಲಿ ಖರೀದಿಸಬೇಕು. ಮುಂಗಾರು ಬೆಳೆಗೆ ಸಿದ್ಧರಾಗುತ್ತಿರುವ ರೈತರಿಗೆ ಬೀಜಗಳು, ರಸಗೊಬ್ಬರ ಮತ್ತಿತರ ಲಾಗುವಾಡುಗಳನ್ನು ಒದಗಿಸಬೇಕು.
- ಮಹಾಮಾರಿಯನ್ನು ಎದುರಿಸುವ ಸಮರದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಸರಕಾರಗಳಿಗೆ ಗಮನಾರ್ಹ ಪ್ರಮಾಣದಲ್ಲಿ ನಿಧಿಗಳನ್ನು ಬಿಡುಗಡೆ ಮಾಡಬೇಕು.
- ಶಾಂತಿಯುತ ಪ್ರತಿಭಟನಾಕಾರರು ಮತ್ತು ಭಿನ್ನಾಭಿಪ್ರಾಯಗಳನ್ನು ವ್ಯಕ್ತಮಾಡುವವರನ್ನು ಗುರಿಮಾಡುವುದನ್ನು, ಕೋಮು ಆಧಾರದಲ್ಲಿ ಗುರುತಿಸುವುದನ್ನು ಮತ್ತು ಬಂಧಿಸುವುದನ್ನು ನಿಲ್ಲಿಸಬೇಕು.
- ಎಲ್ಲ ರಾಜಕೀಯ ಬಂಧಿಗಳನ್ನು, ನಿರ್ದಿಷ್ಟವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಂಧಿಸಿ ಆ ರಾಜ್ಯದ ಒಳಗೆ ಮತ್ತು ಹೊರಗೆ ಜೈಲುಗಳಲ್ಲಿ ಇಟ್ಟಿರುವವರನ್ನು ಬಿಡುಗಡೆ ಮಾಡಬೇಕು.