ಲಡಾಖ್‍ನಲ್ಲಿ ವಾಸ್ತವ ಹತೋಟಿ ರೇಖೆಯಲ್ಲಿ ಸನ್ನಿವೇಶವನ್ನು ತಿಳಿಗೊಳಿಸುವ ಪ್ರಕ್ರಿಯೆಯ ವೇಳೆಯಲ್ಲಿಯೇ ಗಾಲ್ವಾನ್ ಕಣಿವೆಯಲ್ಲಿ ಒಂದು ಘರ್ಷಣೆ ನಡೆದಿರುವುದು ದುರದೃಷ್ಟಕರ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಇದು ಜೂನ್ 6ರಂದು ಘರ್ಷಣೆಯನ್ನು ತಪ್ಪಿಸುವ ಪ್ರಕ್ರಿಯೆಯನ್ನು ಚರ್ಚಿಸಲು ಎರಡೂ ಕಡೆಯಿಂದ ಉನ್ನತ ಮಿಲಿಟರಿ ಮಟ್ಟದಲ್ಲಿ ಮಾತುಕತೆಗಳು ಆರಂಭವಾದ ನಂತರ ನಡೆದಿದೆ. ಎರಡೂ ಕಡೆಗಳಿಂದ ಸಾವು-ನೋವುಗಳು ವರದಿಯಾಗಿದೆ.
ಒಬ್ಬ ಭಾರತೀಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಸಾವಿಗೀಡಾಗಿರುವ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ಆಳವಾದ ಸಂತಾಪ ವ್ಯಕ್ತಪಡಿಸಿದೆ.
ಈ ಸ್ಥಳದಲ್ಲಿ ಎರಡೂ ಕಡೆಯ ಮಿಲಿಟರಿ ಅಧಿಕಾರಿಗಳು ಪರಿಸ್ಥಿತಿಯನ್ನು ಶಮನ ಮಾಡಲು ಸಭೆ ನಡೆಸುತ್ತಿದ್ದಾರೆ ಎಂಬ ಭಾರತೀಯ ಸೇನೆಯ ಹೇಳಿಕೆ ಶಾಂತಿಯ ಕೈಮೇಲಾಗುತ್ತದೆ ಎಂಬುದನ್ನು ಖಾತ್ರಿ ಪಡಿಸಬೇಕು.
ನಿಜವಾಗಿ ಏನು ನಡೆಯಿತು ಎಂಬುದರ ಬಗ್ಗೆ ಭಾರತ ಸರಕಾರ ಒಂದು ಆಧಿಕಾರಿಕ ಹೇಳಿಕೆಯನ್ನು ಪ್ರಕಟಿಸಬೇಕಾಗಿದೆ. ಸನ್ನಿವೇಶವನ್ನು ತಿಳಿಗೊಳಿಸಲು ಮತ್ತು ಗಡಿಯಲ್ಲಿ ಶಾಂತಿ ಹಾಗೂ ಪ್ರಶಾಂತತೆಯನ್ನು ಕಾಯ್ದುಕೊಳ್ಳುವ ಬಗ್ಗೆ ಒಂದು ಪರಸ್ಪರ ಒಪ್ಪಿಗೆಯಾದ ತಿಳುವಳಿಕೆಯ ಆಧಾರದಲ್ಲಿ ಘರ್ಷಣೆಯನ್ನು ತಪ್ಪಿಸುವ ಪ್ರಕ್ರಿಯೆಯನ್ನು ಮುಂದುವರೆಸಲು ಎರಡೂ ಸರಕಾರಗಳು ತಕ್ಷಣವೇ ಉನ್ನತ ಮಾತುಕತೆಗಳನ್ನು ಆರಂಭಿಸುವುದು ಅಗತ್ಯವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.