ಅಕ್ಷರ ದಾಸೋಹ ಕೆಲಸಗಾರರ ಬಾಕಿ ವೇತನ ಬಿಡುಗಡೆಗೊಳಿಸಲು ಮನವಿ

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಕೆಲಸಗಾರರ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ರಾಜ್ಯದ ಬಿಜೆಪಿ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಿಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿ ಸಲ್ಲಿಸಿರುವ ಮನವಿಪತ್ರದ ಪೂರ್ಣ ಹೇಳಿಕೆಯನ್ನು ಈ ಕೆಳಗೆ ನೀಡಲಾಗಿದೆ.

ಇವರಿಗೆ,
ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು.

ಮಾನ್ಯರೆ,

ವಿಷಯ: ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಕೆಲಸಗಾರರ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಲು ಒತ್ತಾಸಿ ಮನವಿ.

ಕಳೆದ ಹಲವಾರು ದಿನಗಳಿಂದ ರಾಜ್ಯದಾದ್ಯಂತ ಅಕ್ಷರ ದಾಸೋಹದ ಕಾರ್ಮಿಕರು ಏಪ್ರಿಲ್ ತಿಂಗಳಿಂದ ಬಿಡುಗಡೆಯಾಗದ ತಮ್ಮ ವೇತನಕ್ಕಾಗಿ, ರಾಜ್ಯ ಸರಕಾರ ಕೂಡಲೆ ಬಾಕಿ ವೇತನ ನೀಡುವಂತೆ ಒತ್ತಾಸಿ ಚಳುವಳಿಯಲ್ಲಿ ತೊಡಗಿದ್ದರೂ ರಾಜ್ಯ ಸರಕಾರ ಈ ಕುರಿತು ಕ್ರಮ ವಹಿಸದಿರುವುದು ಖಂಡನೀಯವಾಗಿದೆ.

ಅತ್ಯಂತ ಕಡಿಮೆ ವೇತನಕ್ಕೆ (ಕೇವಲ ಮಾಸಿಕ 2,000 ರೂ.ಗಳು ಮಾತ್ರ ಅಂದರೆ ದಿನಕ್ಕೆ ಕೇವಲ 66 ರೂ.ಗಳು ಮಾತ್ರ) ದುಡಿಯುತ್ತಿರುವ ರಾಜ್ಯದ ಲಕ್ಷಾಂತರ ಕಾರ್ಮಿಕರು ಕಳೆದ 4-5 ತಿಂಗಳಿನಿಂದ ಕೋವಿಡ್- 19 ರ ಸಂಕಷ್ಟದಲ್ಲು ವೇತನವಿಲ್ಲದೇ ತೀವ್ರ ಬಳಲಿದ್ದಾರೆ.

ಸರಕಾರದ ಉದಾಸೀನತೆಂದ ಬೇಸತ್ತ ಕಾರ್ಮಿಕರು ಈ ದಿನ ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಲು ಮುಂದಾದಾಗ,  ಸಂಬಂಧಿಸಿದ ಸಚಿವರು ಅದರ ನಾಯಕರನ್ನು ಮಾತುಕತೆಗೆ ಕರೆದು ಶಾಂತ ರೀತಿಂದ ಸಮಸ್ಯೆ ಇತ್ಯರ್ಥ ಮಾಡುವ ಬದಲು, ಪ್ರತಿಭಟನಾಕಾರರನ್ನು ಬಂಧಿಸಿ ಬೆದರಿಸಿಲು ಮುಂದಾಗಿದೆ. ಬಂಧನಕ್ಕೊಳಗಾದವರಲ್ಲಿ ಸಿಪಿಐಎಂ ರಾಜ್ಯ ಮುಖಂಡರಾದ ಕಾಂ. ಎಸ್.ವರಲಕ್ಷ್ಮಿ, ಕಾಂ. ಮಾಲಿನಿಮೇಸ್ತಾ ಇದ್ದಾರೆ. ಸರಕಾರದ ಈ ಅಹಿತಕರ ಕ್ರಮವನ್ನು ಸಿಪಿಐಎಂ ತೀವ್ರವಾಗಿ ಖಂಡಿಸುತ್ತದೆ.

ತಕ್ಷಣವೇ, ಬಂಧಿಸಲ್ಪಟ್ಟವರನ್ನು ಯಾವುದೇ ಕೇಸುಗಳನ್ನು ದಾಖಲಿಸದೇ, ಬೇಷರತ್ತಾಗಿ ಬಿಡುಗಡೆ ಮಾಡಬೇಕು ಮತ್ತು ಕೂಡಲೇ, ಹೋರಾಟ ನಿರತ ಸಂಘದ ಮುಖಂಡರ ಜೊತೆ ರಾಜ್ಯ ಸರಕಾರ ಮಾತುಕತೆ ನಡೆಸಬೇಕು ಹಾಗೂ ಕಾರ್ಮಿಕರ ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಬಲವಾಗಿ ಆಗ್ರಹಿಸುತ್ತದೆ.

ಯು. ಬಸವರಾಜ, ಕಾರ್ಯದರ್ಶಿ

ದಿನಾಂಕ : 17.08.2020

ಬೆಂಗಳೂರು.

Leave a Reply

Your email address will not be published. Required fields are marked *