ಕಾಮ್ರೇಡ್ ಪುರುಷೋತ್ತಮ ಕಲಾಲ್ ಬಂಡಿರವರಿಗೆ ಸಿಪಿಐ(ಎಂ) ಶ್ರದ್ದಾಂಜಲಿ

ಕಟ್ಟಡ ಕಾಮಿ೯ಕರ ಸಂಘದ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷರು ಮತ್ತು ವಿಜ್ಞಾನ ಚಳುವಳಿಯ ಸಕ್ರಿಯ ಕಾಯ೯ಕತ೯ರಾಗಿದ್ದ ಕಾಮ್ರೇಡ್ ಪುರುಷೋತ್ತಮ ಕಲಾಲಬಂಡಿರವರಿಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯು ಶ್ರದ್ದಾಂಜಲಿ ಸಲ್ಲಿಸುತ್ತದೆ.

ರಾಯಚೂರು ಜಿಲ್ಲೆಯಲ್ಲಿ ಸಿಪಿಐ(ಎಂ) ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಕಾಮ್ರೇಡ್ ಪುರುಷೋತ್ತಮ ಕಲಾಲಬಂಡಿ ಅವರು ಇಂದು ದಿನಾಂಕ 20-8-20 ರಂದು ಮಹ್ಯಾದ್ನ 4.30 ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ರಾಯಚೂರು ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆಗೆ ಮತ್ತು 1980- 85 ಕಾಲಘಟ್ಟದಲ್ಲಿ ಸಿಪಿಐ(ಎಂ)ಪಕ್ಷದ ನೇತೃತ್ವದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆ ಗಳ ವಿರುದ್ಧ ಮತ್ತು ಸ್ದಳಿಯರಿಗೆ ಕೆ ಪಿ ಸಿ ಯಲ್ಲಿ ಉದೋಗ ನೀಡುವಂತೆ ಅಂದು ಡಿವೈಎಫ್‌ಐ ಯುವಜನ ಸಂಘಟನೆ ನೇತೃತ್ವದಲ್ಲಿ ಚಳುವಳಿಯ ನಡೆಸಿದರ ಭಾಗವಾಗಿ ಜಿಲ್ಲೆಯ ನೂರಾರು ಜನರಿಗೆ ಉದ್ಯೋಗ ಕಲ್ಪಿಸುವಲ್ಲಿ ಪ್ರಮುಖ ಹೋರಾಟಗಾರರಾಗಿದ್ದರು.

ಜೊತೆಗೆ ಅಗಿನ ಕಾಲದಲ್ಲಿ ಸೈಕಲ್‌ ರೀಕ್ಷಾ,ಆಟೋ ಚಾಲಕರ ಕಾರ್ಮಿಕರ ಸಂಘಗಳ ಕಟ್ಟಿ ಮತ್ತು ರಾಯಚೂರು ನಗರದ ಜಲಾಲ್ ನಗರ, ಎಲ್‌ ಬಿ ಎಸ್‌ ನಗರ ಮಡ್ಡಿಪೇಟೆ ಸಿಯಾತಲಾಬ್ ಹರಿಜನವಾಡ ಹೀಗೆ ಹಲವಾರು ವಾರ್ಡಗಳ ಜನರ ಮೂಲಭೂತ ಸೌಕರ್ಯ ಗಳಿಗೆ ಮತ್ತು ವಸತಿ ಹೀನರಿಗೆ ವಸತಿಗಾಗಿ ಮತ್ತು ಹಕ್ಕು ಪತ್ರಗಳಿಗಾಗಿ ಅಂದು ಪಕ್ಷ ನಡೆಸಿದ ಚಳುವಳಿಯಲ್ಲಿ ಪ್ರಮುಖವಾಗಿ ತೋಡಗಿಸಿಕೂಂಡು ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆ ಕ್ರಮವಹಿಸಿದ್ದರು.

ಇತ್ತೀಚೆಗೆ ಅವರು ಕುಟುಂಬದ ಸಮೇತ ಬೆಂಗಳೂರುನಲ್ಲಿ ನೆಲ್ಲೆಸಿದ್ದರು.ಬೆಂಗಳೂರಿನಲ್ಲಿ ಕೂಡ ಅವರು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯಡಿ ಕಟ್ಟಡ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷರಾಗಿ ಮತ್ತು ವಿಜ್ಞಾನ ತಂತ್ರಜ್ಞಾನಗಳ ಸಂಘಟನೆಯಲ್ಲಿ ತೊಡಗಿಸಿಕೊಂಡು ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು ಮತ್ತು ನಿರಂತರವಾಗಿ ಚುಳುವಳಿಯಲ್ಲಿ ತೂಡಗಿದ್ದರು.

ಲಾಕ್ ಡೌನ್ ಕಾಲಾವಧಿಯಲ್ಲಿ ಜ್ಞಾನ ಭಾರತಿ ವಾಡ್೯ನಲ್ಲಿ ಸಿಐಟಿಯು ಪರವಾಗಿ ಕರೋನ ವಾರಿಯರ್ ಆಗಿ ಕಾಮಿ೯ಕ ಇಲಾಖೆಯ ಸಿದ್ದ ಆಹಾರವನ್ನು ಕಟ್ಟಡ ಕಾಮಿ೯ಕರಿಗೆ ಒದಗಿಸುವ ಕಾಯ೯ದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.ಕಾಮಿ೯ಕ ಇಲಾಖೆಯು ನೀಡಿದ್ದ ಫುಡ್ ಕಿಟ್ಗಳನ್ನು ಸಾವಿರಾರು ಕಟ್ಟಡ ಕಾಮಿ೯ಕರಿಗೆ ವಿತರಿಸಲು ಶ್ರಮಿಸಿದ್ದರು. ಹಲವು ಯುವಕರಿಗೆ ಸ್ಪೂಥಿ೯ ಯಾಗಿದ್ದರು. ಅವರು ಇದ್ದಕ್ಕಿದ್ದಂತೆ ನಿಧನರಾದದ್ದು ಅತ್ಯಂತ ದು:ಖಕರ ಮತ್ತು ಅವರ ಅಗಲ್ಲಿಕೆಯಿಂದ ರಾಜ್ಯದ ದುಡಿಯುವ ವರ್ಗದ ಚಳುವಳಿಗೆ ತುಂಬ ನಷ್ಟವಾಗಿದೆ ಎಂದು ಸಿಪಿಐ(ಎಂ) ಕಂಬನಿ ಮಿಡಿದಿದೆ.

ಕೆ.ಎನ್.ಉಮೇಶ್, ಸಿಪಿಐ (ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ

Leave a Reply

Your email address will not be published. Required fields are marked *