ಬಾಬ್ರಿ ಮಸೀದಿ ಧ್ವಂಸ ತೀರ್ಪು -ನ್ಯಾಯದ ಅಪಹಾಸ್ಯ

ಬಾಬ್ರ ಮಸೀದಿ ಧ್ವಂಸ ಪ್ರಕರಣದ ಎಲ್ಲ 32 ಆಪಾದಿತರ ಖುಲಾಸೆ ಮಾಡಿರುವ ಲಕ್ನೌನ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪು ನ್ಯಾಯದ ಅಪಹಾಸ್ಯವೇ ಆಗುತ್ತದೆ. ಈ ತೀರ್ಪು ನೀಡಲು 28 ದೀರ್ಘ ವರ್ಷಗಳೇ ಹಿಡಿದವು, ಆದರೆ ನ್ಯಾಯ ನೀಡಿಲ್ಲ. ಈ ಕ್ರಿಮಿನಲ್‍ ಕೃತ್ಯದ ಜಾಗದಲ್ಲಿ ಅದಕ್ಕೆ ಮಾರ್ಗದರ್ಶನ ನೀಡಲು ಹಾಜರಿದ್ದ ಎಲ್ಲ ಉನ್ನತ ಆರೆಸ್ಸೆಸ್‍-ಬಿಜೆಪಿ-ವಿಹೆಚ್‍ಪಿ ಮುಖಂಡರು ಮಸೀದಿ ಧ್ವಂಸದ ಪಿತೂರಿಯ ಆಪಾದನೆಯಲ್ಲಿ ಅಮಾಯಕರು ಎಂದು ಕಂಡು ಬಂದಿದೆಯಂತೆ.

ಕಳೆದ ವರ್ಷ ನವಂಬರ್‍ 8ರಂದು ಅಯೋಧ್ಯಾ ತೀರ್ಪಿನಲ್ಲಿ ಸುಪ್ರಿಂ ಕೋರ್ಟ್‍ ಈ ಧ್ವಂಸಕಾರ್ಯ ಕಾನೂನಿನ ಘೋರ ಉಲ್ಲಂಘನೆ ಎಂದಿತ್ತು. ಈಗ ಲಕ್ನೌ ನ್ಯಾಯಾಲಯ ಈ ಅಪರಾಧವನ್ನು ಎಸಗಿದ ಪ್ರಮುಖರು ನಿರಪರಾಧಿಗಳು ಎಂದಿದೆ.

ಈ ತೀರ್ಪು ಸಂವಿಧಾನದ ಆಳ್ವಿಕೆಗೆ ಒಳಗಾಗಿರುವ ಒಂದು ಜಾತ್ಯತೀತ ಪ್ರಜಾಸತ್ತಾತ್ಮಕ ದೇಶ ಎಂಬ ಭಾರತದ ಪ್ರತಿಷ್ಠೆಗೆ ಕಳಂಕ ತರುತ್ತದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸಿಬಿಐ ಕೂಡಲೇ ಈ ತೀರ್ಪಿನ ವಿರುದ್ಧ ಅಪೀಲು ಹೋಗಬೇಕು ಎಂದು ಆಗ್ರಹಿಸಿದೆ.

 

Leave a Reply

Your email address will not be published. Required fields are marked *