ನ್ಯಾಯಾಲಯವನ್ನು ತಪ್ಪುದಾರಿಗೆಳೆದಿರುವ ದಿಲ್ಲಿ ಪೋಲೀಸ್

ತಕ್ಷಣವೇ ಸರಿಯಾದ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಪೊಲಿಸ್‍ ಕಮಿಶನರ್‍ ಗೆ ಬೃಂದಾಕಾರಟ್‍ ಪತ್ರ

ದಿಲ್ಲಿಯಲ್ಲಿ ಫೆಬ್ರುವರಿ 2020ರಲ್ಲಿ ನಡೆದ ಕೋಮು ಗಲಭೆಯಲ್ಲಿ ಕೊಲ್ಲಲ್ಪಟ್ಟಿರುವವರ ಸಂಖ್ಯೆಯ ಬಗ್ಗೆ ನ್ಯಾಯಾಲಯದಲ್ಲಿ ದಿಲ್ಲಿ ಪೋಲೀಸ್ ಸಲ್ಲಿಸಿರುವ ಲೆಕ್ಕಾಚಾರಲ್ಲಿ ನಿಖರತೆಯಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾದ  ಬೃಂದಾ ಕಾರಟ್‍ ದಿಲ್ಲಿ ಪೋಲೀಸ್‍ ಕಮಿಶನರ್ ಎಸ್.ಎನ್.ಶ್ರೀವಾಸ್ತವ ಅವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ದಿಲ್ಲಿ ಪೋಲೀಸರು ವಿವಿಧ ಅಫಿಡವಿಟ್‍ಗಳಲ್ಲಿ ಮತ್ತು ಸಾರ್ವಜನಿಕ ಹೇಳಿಕೆಗಳಲ್ಲಿ ಸತ್ತವರ ಸಂಖ್ಯೆ 53 ಎಂದು ಹೇಳಿಕೊಂಡು ಬಂದಿದ್ದಾರೆ. ಇದರಲ್ಲಿ ಈ ಹಿಂದೆ ಗುರುತಿಸಿರದ, ಆದರೆ ನಂತರ ಗುರುತಿಸಿದವರ ಹೆಸರುಗಳೂ ಇವೆ.

ಆದರೆ ಕೊಲ್ಲಲ್ಪಟ್ಟವರಲ್ಲಿ ಒಬ್ಬರಾದ ಸಿಕಂದರ್ ಬಿನ್ ಮುಹಮ್ಮದ್ ಮುಲ್ಲಕ್ ಅವರ ಹೆಸರು ಇಲ್ಲ. ಇವರನ್ನು 27/2 ರಂದು ಅಪರಿಚಿತ ಎಂದು ನಮೂದಿಸಲಾಗಿತ್ತು. ಆದರೆ 19/3 ರಂದು ಸಿಕಂದರ್‍ ಎಂದು ದಾಖಲು ಮಾಡಲಾಗಿದೆ.

ಅವರು ಗಂಭೀರ ತಲೆಗಾಯಗಳಿಂದ ಸತ್ತರು ಎಂದು ಮರಣೋತ್ತರ ಪರೀಕ್ಷೆ ಹೇಳುತ್ತದೆ.

ಸಿಕಂದರ್‍ ನ ತಮ್ಮ ಮಹಮ್ಮದ್ ಇಷ್ಫಾಕ್ ಎಫ್ ಐ ಆರ್‍ ಪ್ರತಿ ಪಡೆಯಲು ಖಜುರಿ ಖಾಸ್ ಪೋಲೀಸ್‍ ಸ್ಟೇಷನ್ನಿಗೆ ಹಲವು ಬಾರಿ ಅಲೆದಿದ್ದಾರೆ. ಎಫ್‍ ಐ ಆರ್ ಸಲ್ಲಿಸಿಲ್ಲ, ಆದರೆ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿ ‘ಹೇಗಾದರೂ ಪರಿಹಾರ ಕೊಡಿಸೋಣ’ ಪೋಲೀಸ್‍ ಸಿಬ್ಬಂದಿ ಹೇಳಿರುವುದಾಗಿ ವರದಿಯಾಗಿದೆ.

ಈ ಕುಟುಂಬ ಭೀತಿಯ ವಾತಾವರಣದಲ್ಲಿ ಬದುಕುತ್ತಿದೆ. ಭಜನಪುರದಲ್ಲಿದ್ದ ಇಷ್ಫಾಕನ ಅಂಗಡಿ ಸುಟ್ಟುಹೋಗಿದೆ, ಲೂಟಿಯಾಗಿದೆ. ಘೊಂಡದಲ್ಲಿ ಆಕೆಯ ಸೋದರಿಯ ಮನೆ ಲೂಟಿಯಗಿದೆ. ಇಂತಹ ಕುಟುಂಬದ ಬಗ್ಗೆ ಸಹಾನುಭೂತಿಯಿದ ವರ್ತಿಸುವ ಬದಲು, ದಿಲ್ಲಿ ಪೋಲೀಸ್ ಸಿಕಂದರನನ್ನು ಹಿಂಸಾಚಾರಕ್ಕೆ ಬಲಿಯಾದವರೆಂದು ಗುರುತಿಸದೆ ಅವರ ಕಷ್ಟಕಾರ್ಪಣ್ಯಗಳನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಹಿನ್ನೆಲೆಯಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ

1. ಹೈಕೋರ್ಟಿಗೆ ಸಲ್ಲಿಸಿರುವ ಸತ್ತವರ ಪಟ್ಟಿಯ ಸಂಖ್ಯೆಯನ್ನು ಸರಿಪಡಿಸಬೇಕು, ಸಿಕಂದರ್ ಹೆಸರಿನ ಸೇರ್ಪಡೆಯೊಂದಿಗೆ ಅದು 54 ಆಗುತ್ತದೆ;

2. ಎಫ್‍ ಐ ಆರ್ ನ ಒಂದು ಪ್ರತಿಯನ್ನು ಸಿಕಂದರನ ಕುಟುಂಬದವರಿಗೆ ಕೊಡಬೇಕು ಮತ್ತು

3. ಈ ಅನಿಖರತೆಗೆ,  ಹಿಂಸಾಚಾರಕ್ಕೆ ಬಲಿಯಾದ ಕುಟುಂಬಕ್ಕೆ ಕಿರುಕುಳ ಕೊಟ್ಟಿರುವ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು

ಎಂದು ಬೃಂದಾ ಕಾರಟ್‍ ದಿಲ್ಲಿ ಪೋಲೀಸ್‍ ಕಮಿಶನರ್‍ ಅವರನ್ನು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *