ಭಾರತ ಬಂದ್‌ಗೆ ಜನತೆಯ ಅಭೂತಪೂರ್ವ ಬೆಂಬಲ: ಎಡಪಕ್ಷಗಳ ಅಭಿನಂದನೆ

ರೈತ ಸಂಘಟನೆಗಳ ಸಂಯುಕ್ತ ವೇದಿಕೆಯು  ಭಾರತ-ವಿರೋದಿ, ರೈತ-ವಿರೋಧಿ ಕೃಷಿ ಕಾಯ್ದೆಗಳನ್ನು  ಹಿಂತೆಗೆದುಕೊಳ್ಳಲು ಕೇಂದ್ರ ಸರಕಾರ ನಿರಾಕರಿಸಿದ್ದಕ್ಕೆ ಎದುರಾಗಿ ನೀಡಿದ ಭಾರತ್  ಬಂದ್‍ ಕರೆಗೆ ಭಾರತದಾದ್ಯಂತ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಜನಗಳ ಸ್ವಯಂಸ್ಫೂರ್ತ ಸ್ಪಂದನೆ ಭಾರತದ ರೈತರ ಹೋರಾಟಕ್ಕೆ ಎಷ್ಟರ ಮಟ್ಟಿನ ಜನತೆಯ ಬೆಂಬಲ ಇದೆ ಎಂಬುದನ್ನು ತೋರಿಸಿದೆ ಎಂದು ಐದು ಎಡಪಕ್ಷಗಳು ಹೇಳಿವೆ.

ಅದಕ್ಕಾಗಿ ಅವು ಭಾರತದ ರೈತರನ್ನು ಮತ್ತು ಜನತೆಯನ್ನು ಅಭಿನಂದಿಸಿವೆ. ರೈತರು ತಮ್ಮ ದೃಢವಾದ ಹೋರಾಟಕ್ಕೆ ಮತ್ತು ತ್ಯಾಗಕ್ಕೆ ಅಭಿನಂದನಾರ್ಹರು  ಮತ್ತು ಜನತೆ ಇಂದು ಅವರಿಗೆ ತೋರಿಸಿದ ಬೃಹತ್‍ ಬೆಂಬಲ ಮತ್ತು ಸೌಹಾರ್ದಕ್ಕಾಗಿ, ಎಂದು ಜಂಟಿ ಹೇಳಿಕೆಯೊಂದರಲ್ಲಿ ಎಡಪಕ್ಷಗಳು ಹೇಳಿವೆ.

 ಕೇಂದ್ರ ಸರಕಾರ ಈ  ರೈತ ಹೋರಾಟದ ನ್ಯಾಯಬದ್ಧ ಆಗ್ರಹಗಳನ್ನು ಸ್ವೀಕರಿಸಬೇಕು ಎಂದು ಎಡಪಕ್ಷಗಳು ಹೇಳಿಕೆಯೊಂದರಲ್ಲಿ ಕರೆ ನೀಡಿವೆ.

ಸಿ.ಪಿ.ಐ.(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ, ಸಿ.ಪಿ.ಐ. ಪ್ರಧಾನ ಕಾರ್ಯದರ್ಶಿ ಡಿ.ರಾಜ, ಸಿ.ಪಿ.ಐ.(ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ, ಎ.ಐ.ಎಫ್‍.ಬಿ.ಯ ಪ್ರಧಾನ ಕಾರ್ಯದರ್ಶಿ ದೇಬಬ್ರತ ಬಿಸ್ವಾಸ್ ಮತ್ತು ಆರ್‍.ಎಸ್..ಪಿ.ಯ ಪ್ರಧಾನ ಕಾರ್ಯದರ್ಶಿ ಮನೋಜ್ ‍ಭಟ್ಟಾಚಾರ್ ಈ ಜಂಟಿ  ಹೇಳಿಕೆಯನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *