ಬಿಹಾರದ ಹಿರಿಯ ಕಮ್ಯುನಿಸ್ಟ್ ನೇತಾರ ಗಣೇಶ ಶಂಕರ ವಿದ್ಯಾರ್ಥಿ ಜನವರಿ 11ರಂದು ಪಾಟ್ನಾದಲ್ಲಿ ನಿಧನರಾದರು. ಅವರಿಗೆ 96 ವರ್ಷಗಳಾಗಿದ್ದವು.
ಗಣೇಶ್ದಾ ಎಂದು ಹೆಸರಾಗಿದ್ದ ಇವರು 17 ವರ್ಷದವರಾಗಿದ್ದಾಗಲೇ ಸ್ವಾತಂತ್ರ್ಯ ಆಂದೋಲನಕ್ಕೆ ಧುಮುಕಿ ಸುಮಾರು ಎಂಟು ದಶಕಗಳ ಸಾರ್ವಜನಿಕ ಜೀವನವನ್ನು ನಡೆಸಿದವರು. 1942ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ ಅವರು ಹಲವು ವರ್ಷಗಳ ಕಾಲ ಪಕ್ಷದ ಬಿಹಾರ ರಾಜ್ಯ ಕಾರ್ಯದರ್ಶಿಯಾಗಿದ್ದರು ಮತ್ತು ಕೇಂದ್ರ ಸಮಿತಿ ಸದಸ್ಯರೂ ಅಗಿದ್ದರು.
ಭೂಮಾಲಕರ ಕುಟುಂಬದಿಂದ ಬಂದಿದ್ದರೂ ಕಾಂ.ವಿದ್ಯಾರ್ಥಿ , ಭೂಹೀನರು ಮತ್ತು ಅಂಚಿನಲ್ಲಿರುವ ರೈತರ ಹಕ್ಕುಗಳಿಗಾಗಿ ಹೋರಾಡಿದವರು. ಈ ಹೋರಾಟಗಳಲ್ಲಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಸ್ವಾತಂತ್ರ್ಯ ದ ನಂತರವೂ ಆರು ವರ್ಷಗಳ ಜೈಲುವಾಸ ಅನುಭವಿಸಿದ್ದರು.
ಎರಡು ಬಾರಿ ವಿಧಾನಸಭಾ ಸದಸ್ಯರಾಗಿ ಮತ್ತು ಒಂದು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಅವರು ಆಯ್ಕೆಯಾಗಿದ್ದರು.
ಸರಳ ಜೀವಿಯಾದ ಅವರ ನಿಧನ ಬಿಹಾರದ ಎಡ ಆಂದೋಲನಕ್ಕೆ ಒಂದು ದೊಡ್ಡ ನಷ್ಟ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತ ಹೇಳಿದೆ.