ಭೀಮ-ಕೋರೆಗಾಂವ್ ಕೇಸಿನಲ್ಲಿ ಬಂಧಿಸಿರುವ ಕಾರ್ಯಕರ್ತರುಗಳ ವಿರುದ್ಧ ಇರುವ ಮೊಕದ್ದಮೆಗಳನ್ನು ಕೈಬಿಡಬೇಕು, ಮತ್ತು ಸಾಕ್ಷ್ಯವನ್ನು ಹೇಗೆ ಸೃಷ್ಟಿಸಲಾಯಿತು ಹಾಗೂ ಇವರಲ್ಲಿ ಒಬ್ಬರಾದ ರೋನ ವಿಲಿಯಮ್ಸ್ ರವರ ಕಂಪ್ಯುಟರ್ ನಲ್ಲಿ ಹೇಗೆ ಹಾಕಲಾಯಿತು ಎಂಬ ಬಗ್ಗೆ ಅಂತರ್ -ರಾ ಷ್ಟ್ರೀಯ ಪರಿಣತರ ವಿಶ್ವಾಸಾರ್ಹ ವರದಿಗಳಲ್ಲಿ ಬಹಿರಂಗವಾಗಿರುವ ಬೆಳವಣಿಗೆಗಳ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ಸರಕಾರ ಒಂದು ವಿಶೇಷ ತನಿಖಾ ತಂಡ(ಎಸ್.ಐ.ಟಿ.)ವನ್ನು ರಚಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಗ್ರಹಿಸಿದೆ.
ರೋನ ವಿಲಿಯಮ್ಸ್ ಕಂಪ್ಯುಟರನ್ನು ಹ್ಯಾಕ್ ಮಾಡಲಾಯಿತು ಮತ್ತು ಒಂದು ದುರುದ್ದೇಶದ ತಂತ್ರಾಂಶ(ಮಾಲ್ ವೇರ್)ವನ್ನು ಅದರಲ್ಲಿ ನೆಲೆಗೊಳಿಸಲಾಯಿತು, ಅದು ಅವರ ಕಂಪ್ಯೂಟರ್ ಕಡತಗಳಲ್ಲಿ ಅವರ ಮೇಲೆ ಆರೋಪ ಹೊರಿಸಲು ಅನುವು ಮಾಡಿಕೊಡುವ ಮೇಲ್ಗಳನ್ನು ಹಾಕಿತು; ಇವನ್ನು ಅವರು ಎಂದೂ ನೋಡಿರಲೇ ಇಲ್ಲ ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ಒಂದು ಅಪರಾಧ ಪರೀಕ್ಷಣಾ(ಫೊರೆನ್ಸಿಕ್) ಪ್ರಯೋಗಾಲಯ ಕಂಡು ಹಿಡಿದಿದೆ. ಇದನ್ನು ಇತರ ಪರಿಣಿತರು ಪರೀಕ್ಷಿಸಿದ್ದಾರೆ.
ಅಲ್ಲದೆ ಈ ಮೋಸದ ಕೆಲಸ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಅವರ ಅರಿವಿಗೆ ಬರದಂತೆ ನಡೆದಿದೆ. ಈ ಮೇಲ್ ಗಳನ್ನೇ “ಪಿತೂರಿ” ಯ ಭಾಗ ಎಂದು ಎನ್.ಐ.ಎ. ಹೇಳಿಕೊಂಡಿದೆ ಎಂಬುದನ್ನು ಪೊಲಿಟ್ ಬ್ಯುರೊ ನೆನಪಿಸಿದೆ.
ಆಪಾದನಾಕಾರಿ ಮೇಲ್ ಗಳನ್ನು ಮೋಸದಿಂದ ಹಾಕಲು ಕಂಪ್ಯೂಟರನ್ನು ಹ್ಯಾಕ್ ಮಾಡುವ ಒಂದು ಮಾರಣಾಂತಿಕ ಆಯುಧವನ್ನು ಮೋದಿ ಸರಕಾರ ಬಳಸಿದೆ ಮತ್ತು ಭವಿಷ್ಯದಲ್ಲಿ ರಾಜಕೀಯ ವಿರೋಧಿಗಳ ಮೇಲೆ ಬಳಸಬಹುದು. ಇದನ್ನು ಬಯಲು ಮಾಡಿರುವುದನ್ನು, ಆರಂಭಿಕ ಅಧಿಕೃತ ಪ್ರತಿಕ್ರಿಯೆಗಳು ಸೂಚಿಸುವಂತೆ, ಮುಚ್ಚಿ ಹಾಕಲು ಅಥವ ತಳ್ಳಿ ಹಾಕಲು ಬಿಡಬಾರದು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.