ಕೃಷಿ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆಗೆ ತಡೆ ಸಿಪಿಐ(ಎಂ) ಖಂಡನೆ

ರಾಷ್ಟ್ರಾದ್ಯಂತ ಕೃಷಿ ಕಾಯ್ದೆಗಳು ಕಾಮಿ೯ಕ ಸಂಹಿತೆಗಳ ರದ್ದತಿಗಾಗಿ ನಡೆದಿರುವ ಹೋರಾಟದ ಭಾಗವಾಗಿ ಮಾಚ್೯ 26 ರಂದು ಬೆಳಿಗ್ಗೆ ನಗರದ ಟೌನ್ ಹಾಲ್ ನಿಂದ ರೈತ ಕಾರ್ಮಿಕರ ಸಂಘಟನೆಗಳ ಸಂಯುಕ್ತ ಹೋರಾಟ ಕನಾ೯ಟಕ ನಡೆಸಲು ಉದ್ದೇಶಿಸಿದ್ದ ಕಾಯ್ದೆಗಳ ಶವಯಾತ್ರೆ ಪ್ರತಿಭಟನೆಗೆ ತಡೆ ಒಡ್ಡಿರುವ ರಾಜ್ಯ ಬಿಜೆಪಿ ಸಕಾ೯ರದ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ್೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ.

IMG_20210326_113916Screenshot_20210326-114700__01

 

 

 

 

 

ಶವಯಾತ್ರೆ ಪ್ರತಿಭಟನೆಗೆ ಅವಕಾಶ ನೀಡದೆ ಪ್ರತಭಟನಾಕಾರರನ್ನು ಬಂಧಿಸಿರುವ ಬಿಜೆಪಿ ರಾಜ್ಯ ಸಕಾ೯ರದ ಕ್ರಮವು ಖಂಡನೀಯ.ಪ್ರತಿಭಟನೆ ಮಾಡುವುದು ಭಾರತದ ಪ್ರಜೆಗಳ ಸಂವಿಧಾನದತ್ತ ಹಕ್ಕು ಅಂತಹ ಹಕ್ಕನ್ನು ಮೊಟಕುಗೊಳಿಸುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಅಂತಹ ಕ್ರಮಕ್ಕೆ ಪ್ರಜಾಪ್ರಭುತ್ವ ವಿರೋಧಿ ಬಿಜೆಪಿ ರಾಜ್ಯ ಸಕಾ೯ರವು ಮುಂದಾಗಿದೆ. ಕನಿಷ್ಠ ಪ್ರತಿಭಟನೆಗೂ ಅವಕಾಶ ನೀಡದ ಸವಾ೯ಧಿಕಾರಿ ಧೋರಣೆಯನ್ನು ಬಿಜೆಪಿ ರಾಜ್ಯ ಸಕಾ೯ರವು ಮುಂದಾಗಿರುವುದನ್ನು ಸಿಪಿಐ(ಎಂ) ಖಂಡಿಸಿದೆ.

ಪ್ರಜಾಪ್ರಭುತ್ವ ರೀತಿಯಲ್ಲಿ ರೈತ ಪಂಚಾಯ್ತಿಯಲ್ಲಿ ಭಾಗವಹಿಸಿದ್ದ ರೈತ ನಾಯಕರಾದ ರಾಕೇಶ್ ಟಿಕಾಯತ್ ವಿರುದ್ಧ ಮೊಕದ್ದಮೆ ದಾಖಲಿಸಿರುವ ಬಿಜೆಪಿ ರಾಜ್ಯ ಸಕಾ೯ರವು ಅದರ ಮುಂದುವರಿದ ಭಾಗವಾಗಿ ಪ್ರತಿಭಟನೆಗೆ ತಡೆ ಒಡ್ಡುವ ಪ್ರಜಾಪ್ರಭುತ್ವ ವಿರೋಧಿ ಕ್ರಮಕ್ಕೆ ಮುಂದಾಗಿದೆ.

      Screenshot_20210326-114726__02

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಂತ್ರಸ್ತ ಯುವತಿಯ ದೂರಿನ ಮೇರೆಗೆ ಕೇಸ್ ದಾಖಲಿಸದ , ಯುವತಿ ಮತ್ತವರ ಕುಟುಂಬಕ್ಕೆ ರಕ್ಷಣೆ ನೀಡಲಾಗದ, ಆಕೆಯನ್ನು ಪತ್ತೆ ಹಚ್ಚಲು ವಿಫಲವಾಗಿರುವ ರಾಜ್ಯ ಬಿಜೆಪಿ ಸಕಾ೯ರವು ಶಾಂತಿಯುತ ರೈತ ಕಾರ್ಮಿಕ ಹೋರಾಟಗಾರರನ್ನು ಬಂಧಿಸಿ ಹೋರಾಟಕ್ಕೆ ತಡೆ ಹೊಡ್ಡಿರುವ ಕ್ರಮವು, ಪ್ರಜಾಪ್ರಭುತ್ವ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಬಿಜೆಪಿ ರಾಜ್ಯ ಸಕಾ೯ರದ ವೈಫಲ್ಯವನ್ನು ತೋರುತ್ತದೆ ಎಂದು ಸಿಪಿಐ(ಎಂ) ಖಂಡಿಸಿದೆ.

(ಕೆ. ಎನ್. ಉಮೇಶ್)
ಕಾಯ೯ದಶಿ೯, ಸಿಪಿಐ(ಎಂ)
ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ.

(ಎನ್.ಪ್ರತಾಪ್ ಸಿಂಹ)
ಕಾಯ೯ದಶಿ೯, ಸಿಪಿಐ(ಎಂ)
ಬೆಂಗಳೂರು ಉತ್ತರ ಜಿಲ್ಲಾ ಸಮಿತಿ.

 

Leave a Reply

Your email address will not be published. Required fields are marked *