ಕೇರಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗಕ್ಕೆ ಸ್ಪಷ್ಟ ಬಹುಮತ ನೀಡಿದ ಕೇರಳದ ಸಮಸ್ತ ಜನತೆಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯಿಂದ ಅಭಿನಂದನೆ ಸಲ್ಲಿಸುತ್ತದೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಿಣರಾಯ್ ವಿಜಯನ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗವು ಸ್ಪಷ್ಟ ಬಹುಮತವನ್ನು ಪಡೆದು ಇತಿಹಾಸ ನಿರ್ಮಿಸಿದೆ. ನುಡಿದಂತೆ ನಡೆದು ಜನತೆಯ ಬೆಂಬಲ ಮರಳಿ ಪಡೆದ ಎಲ್ಡಿಎಫ್ ಸರಕಾರವನ್ನು ಅಧಿಕಾರಕ್ಕೆ ತಂದು ಪ್ರತಿ ಐದು ವರ್ಷಕ್ಕೆ ಸರ್ಕಾರ ಬದಲಾಯಿಸುವ ಸಂಪ್ರದಾಯವನ್ನು ಮುರಿದಿದ್ದಾರೆ.
ಪಿಣರಾಯ್ ವಿಜಯನ್ ಸರ್ಕಾರ ನೆರೆ ಪ್ರವಾಹ ಬಂದಾಗ ನಿರ್ವಹಿಸಿದ ಪಾತ್ರ, ಸಾಂಕ್ರಾಮಿಕ ರೋಗಗಳು ಬಂದಾಗ ಜನತೆ ಜೀವ ರಕ್ಷಣೆಗೆ ತೆಗೆದುಕೊಂಡು ದಿಟ್ಟತನದ ಕೆಲಸ, ಕೇರಳದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಮಾನವ ಅಭಿವೃದ್ಧಿಗೆ ತೆಗೆದುಕೊಂಡ ಕ್ರಮಗಳು ಕೇರಳದ ಜನತೆಯ ಹುಮ್ಮಸ್ಸನ್ನು ಇಮ್ಮಡಿ ಮಾಡಿದೆ.
ಅತ್ಯಂತ ಐತಿಹಾಸಿಕ ಗೆಲುವಿಗೆ ಕಾರಣರಾದ ಕೇರಳ ರಾಜ್ಯದ ಮಹಾಜನತೆಗೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ವಸಂತ ಆಚಾರಿ ಕಾರ್ಯದರ್ಶಿ
ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ