ದಕ್ಷಿಣ ತ್ರಿಪುರಾದ ಶಾಂತಿಬಝಾರ್ ನಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ) ಪೊಲಿಟ್ ಬ್ಯುರೊ ಸದಸ್ಯರಾದ ಮಾಣಿಕ್ ಸರ್ಕಾರ್ ಮೇಲೆ ಬಿಜೆಪಿ ಗೂಡಾಗಳು ದಾಳಿ ಮಾಡಿರುವುದನ್ನು ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.
ತ್ರಿಪುರಾ ಪೋಲೀಸ್ ಮತ್ತು ಆಡಳಿತ ಅನುಮತಿ ನೀಡಿದ್ದ ಒಂದು ಕಾರ್ಯಕ್ರಮದಲ್ಲಿ ಮಾಣಿಕ್ ಸರ್ಕಾರ್ ಮತ್ತು ಪ್ರತಿಪಕ್ಷದ ತಂಡದ ಮೇಲೆ ದೈಹಿಕ ಹಲ್ಲೆ ನಡೆಸಿ ಅವರು ಈ ಮೊದಲು ಹಲ್ಲೆಗೊಳಗಾಗಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಬೆಂಬಲಿಗರ ಮನೆಗಳಿಗೆ ಭೇಟಿ ನೀಡುವುದನ್ನು ತಡೆದರು.
ತನ್ನ ನಿಜವಾದ ಬಣ್ಣವನ್ನು ಮತ್ತು ಚಾರಿತ್ರ್ಯವನ್ನು ತೋರಿಸುತ್ತಿರುವ ಬಿಜೆಪಿ ತ್ರಿಪುರಾದಲ್ಲಿ ಪ್ರತಿಪಕ್ಷದ ಪ್ರಜಾಸತ್ತಾತ್ಮಕ ಚಟುವಟಿಕೆಗೆ ಅವಕಾಶ ಕೊಡುತ್ತಿಲ್ಲ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಇದನ್ನು ಪ್ರತಿರೋಧಿಸಲಾಗುವುದು, ಹಿಮ್ಮೆಟ್ಟಿಸಲಾಗುವುದು ಎಂದು ಪೊಲಿಟ್ ಬ್ಯುರೊ ಎಚ್ಚರಿಸಿದೆ.