ಭಾರತದ ಪ್ರಮುಖ ಎಡಪಕ್ಷ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್ವಾದಿ)ದ 23ನೇ ಮಹಾಧಿವೇಶನ ಎಪ್ರಿಲ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಸಮ್ಮೇಳನ ಜನವರಿ 2 ರಿಂದ 4 ರ ವರೆಗೆ ಗಂಗಾವತಿಯಲ್ಲಿ ನಡೆಯಲಿದೆ. ಕರ್ನಾಟಕದ ಜನತೆಯ, ಅದರಲ್ಲೂ ಕಾರ್ಮಿಕರ, ರೈತರ ಮತ್ತು ಇತರ ದುಡಿಯುವ ಜನವಿಭಾಗಗಳ ಹಿತರಕ್ಷಣೆಯಲ್ಲಿ ಕಳೆದ ಮೂರು ವರ್ಷಗಳ ಅನುಭವಗಳು ಮತ್ತು ಅದರ ಬೆಳಕಿನಲ್ಲಿ ಮುನ್ನಡೆಯ ದಾರಿಯನ್ನು ರೂಪಿಸುವುದು ಈ ಸಮ್ಮೇಳನದ ಪ್ರಮುಖ ಕಾರ್ಯಸೂಚಿ. ದುಡಿಯುವ ಜನವಿಭಾಗಗಳ ನಡುವೆ ಕೆಲಸ ಮಾಡುತ್ತಿರುವವರ ಪ್ರತಿನಿಧಿಗಳು ಇದನ್ನು ಆಮೂಲಾಗ್ರವಾಗಿ ಚರ್ಚಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಮುಖಂಡತ್ವ ಸಿದ್ಧಪಡಿಸಿರುವ ಕರಡು ವರದಿಯ ಕೆಲವು ಅಂಶಗಳನ್ನು ಇಲ್ಲಿ ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.
ಭಾರತಕ್ಕೆ ಬರುತ್ತಿರುವ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ರಾಜ್ಯದ ಪಾಲು ಗಣನೀಯವಾಗಿದೆ. ೨೦೦೦ ರಿಂದ ೨೦೨೦ ರವರೆಗೆ (ನವೆಂಬರ್ ೨೦೨೦) ಬಂದಿರುವ ೩೮೪೧ ಕೋಟಿ ಡಾಲರ್ (ರೂ.೨,೬೮,೮೭೦ ಕೋಟಿ)ಗಳಲ್ಲಿ ರಾಜ್ಯಕ್ಕೆ ೮ ಶೇಕಡ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದು ಬಂದಿದೆ. (ಕೋಷ್ಟಕ ನೋಡಿ)
ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ವಲಯವು ಪ್ರಾಥಮಿಕ ಪ್ರೇರಕಗಳಲ್ಲಿ ಒಂದಾಗಿದೆ. ಬೆಂಗಳೂರಿನಲ್ಲಿ ಸಾಂದ್ರತೆಯೊಂದಿದ್ದ ಈ ವಲಯವು ಇತ್ತೀಚೆಗೆ ರಾಜ್ಯದ ಇತರೆ ಭಾಗಗಳಿಗೆ ವಿಸ್ತರಿಸಿದೆ. ೫೫೦೦ ಕ್ಕೂ ಹೆಚ್ಚು ಐಟಿ/ಐಟಿಇಎಸ್ ಕಂಪನಿಗಳು ರಾಜ್ಯದಲ್ಲಿದ್ದು ಸುಮಾರು ೭೫೦ ಬಹುರಾಷ್ಟ್ರೀಯ ಕಂಪನಿಗಳಿದ್ದು ೪.೦೬ ಲಕ್ಷ ಕೋಟಿ ರೂಗಳಿಗೂ ಹೆಚ್ಚು ರಫ್ತಿಗೆ ಕೊಡುಗೆ ನೀಡಿವೆ. ೧೨ ಲಕ್ಷಕ್ಕೂ ಹೆಚ್ಚು ವೃತ್ತಿಪರರಿಗೆ ನೇರ ಉದ್ಯೋಗದೊಂದಿಗೆ ೩೧ ಲಕ್ಷ ಪರೋಕ್ಷ ಉದ್ಯೋಗವನ್ನು ರಾಜ್ಯದಲ್ಲಿ ಸೃಜಿಸಿವೆ. ರಾಜ್ಯದ ಆಂತರಿಕ ಉತ್ಪನ್ನಕ್ಕೆ ಈ ಕ್ಷೇತ್ರವು ೨೨ಕ್ಕೂ ಹೆಚ್ಚು ಶೇಕಡ ಕೊಡುಗೆ ಡುತ್ತಿದೆ. ರಾಷ್ಟ್ರದ ೧೦.೮೫ ಲಕ್ಷ ಕೋಟಿ ರೂಗಳ ಮಾಹಿತಿ ತಂತ್ರಜ್ಞಾನ ರಫ್ತಿನಲ್ಲಿ ರಾಜ್ಯವು ಸುಮಾರು ೪೦ ಶೇಕಡ ಪಾಲನ್ನು ಹೊಂದಿದೆ.
ರಾಜ್ಯವು ಬಯೋಟೆಕ್ ನವೋದ್ಯಮಗಳನ್ನು ಒಳಗೊಂಡಂತೆ ೭೫೦ ಬೃಹತ್, ಮಧ್ಯಮ ಮತ್ತು ಸಣ್ಣ ಕಂಪಗಳನ್ನು ಹೊಂದಿದೆ. ೨೦೧೯-೨೦ನೇ ಸಾಲಿನಲ್ಲಿ ಕರ್ನಾಟಕದ ಜೈವಿಕ ತಂತ್ರಜ್ಞಾನ ಕ್ಷೇತ್ರದ ರಫ್ತುಗಳ ಆದಾಯವು ೨೦,೨೮೩ ಕೋಟಿ ರೂಗಳಷ್ಟಾಗಿದೆ. ಕರ್ನಾಟಕ ಜೈವಿಕ ತಂತ್ರಜ್ಞಾನ ಕಾರ್ಯನೀತಿ (೨೦೧೭-೨೨) ಯಲ್ಲಿ ೨೦೨೫ ರ ಒಳಗೆ ರಾಷ್ಟ್ರೀಯ ಜೈವಿಕ ಆರ್ಥಿಕತೆ (ಬೈಯೋ ಎಕಾನಮಿ) ತಲುಪಲು ಉದ್ದೇಶಿಸಿರುವ ೭ ಲಕ್ಷ ಕೋಟಿ ರೂಗಳಲ್ಲಿ ೪೦ ರಿಂದ ೬೦ ರಷ್ಟು ಮಾರುಕಟ್ಟೆ ಪಾಲನ್ನು ಹೊಂದುವ ಗುರಿ ಹೊಂದಲಾಗಿದೆ. ೨೦೧೯ರ ಅಂತ್ಯದ ವೇಳೆಗೆ ರಾಜ್ಯದ ಬಯೋ ಎಕಾನಮಿ ಉತ್ಪಾದನೆಯು ೧.೫೮ ಲಕ್ಷ ಕೋಟಿ ರೂಗಳಷ್ಟಾಗಿದೆ. ೨೦೧೮ ರ ಹೋಲಿಕೆಯಲ್ಲಿ ೧೭ ಶೇಕಡ ಬೆಳವಣಿಗೆ ಸಾಧಿಸಿದೆ.
ಕರ್ನಾಟಕ ಮಾಹಿತಿ ತಂತ್ರಜ್ಞಾನ ಕಾರ್ಯನೀತಿ ೨೦೨೦-೨೫ ಅನ್ನು ರಾಜ್ಯ ಸರ್ಕಾರವು ರೂಪಿಸಿದೆ. ಮಾಹಿತಿ ತಂತ್ರಜ್ಞಾನ ಕಂಪಗಳಿಗೆ ಕೈಗಾರಿಕಾ ಸಂಸ್ಥೆಗಳ ಸ್ಥಾಯಿ ಆದೇಶಗಳ ಕಾಯ್ದೆಯಿಂದ ವಿನಾಯಿತಿಯನ್ನು ಮುಂದುವರಿಸಿದೆ. ಕಾರ್ಯತಿಯ ಭಾಗವಾಗಿ ಐಟಿ ಹಬ್/ಕ್ಲಸ್ಟರ್ಗಳ ಮೂಲಸೌಕರ್ಯಕ್ಕಾಗಿ ಸ್ಥಿರ ಹೂಡಿಕೆಯ ೨೦ ಶೇಕಡರಷ್ಟರವರೆಗೆ ಗರಿಷ್ಠ ೩ ಕೋಟಿ ರೂಗಳ ಹಣಕಾಸು ನೆರವನ್ನು, ಕಾರ್ಯಸ್ಥಳಗಳ ಮೂಲ ಸೌಕರ್ಯಕ್ಕೆ ಶೇ.೩೩ ರವರೆಗೆ ಗರಿಷ್ಠ ೨ ಕೋಟಿ ರೂಗಳ ಹಣಕಾಸು ಬೆಂಬಲ, ೩ ರಿಂದ ೬ ಲಕ್ಷದವರೆಗೆ ಗುತ್ತಿಗೆ / ಬಾಡಿಗೆ ಮರುಪಾವತಿ, ರಾಜ್ಯದ ೨ ಮತ್ತು ೩ನೇ ಹಂತದ ನಗರಗಳಲ್ಲಿ ಸಂಸ್ಥೆ ಸ್ಥಾಪನೆಗೆ ಭವಿಷ್ಯಧಿ/ನೌಕರರ ರಾಜ್ಯ ವಿಮೆ ರಿಯಾಯತಿಯನ್ನು ಮುದ್ರಾಂಕ ಶುಲ್ಕ ವಿನಾಯಿತಿಯನ್ನು ಪ್ರಕಟಿಸಿದೆ. ಅಂತೆಯೇ ಕರ್ನಾಟಕದ ವಿದ್ಯುನ್ಮಾನ ವ್ಯವಸ್ಥೆಗಳ ವಿನ್ಯಾಸ ಮತ್ತು ತಯಾರಿಕಾ (ESDM) ನೀತಿ ೨೦೧೭-೨೨ ಕರ್ನಾಟಕ ಆಮೇಷನ್ ವಿಷುವಲ್ ಗೇಮಿಂಗ್ ಮತ್ತು ಕಾಮಿಕ್ಸ್ ನೀತಿ ೨೦೧೭-೨೨ ಹಾಗೂ ಕರ್ನಾಟಕ ಸ್ಟಾರ್ಟ್ ಆಫ್ ತಿ ೨೦೧೫-೨೦೨೦ ಗಳನ್ನು ಪರಿಷ್ಕರಿಸಿ ನೂತನ ನೀತಿಗಳ ರೂಪಿಸಲು ರಾಜ್ಯ ಸರ್ಕಾರ ಕ್ರಮವಹಿಸುತ್ತಿದೆ.
ʻಬೆಂಗಳೂರು ತಂತ್ರಜ್ಞಾನ ಶೃಂಗಸಭೆ ೨೦೨೦’ನ್ನು ನಡೆಸಿ ಜೈವಿಕ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಬಂಡವಾಳ ಹೂಡಿಕೆಗೆ ಅನುಕೂಲಕರವಾದ ಕ್ರಮಗಳನ್ನು ಕೈಗೊಂಡಿದೆ. ಹೂಡಿಕೆದಾರರಿಗೆ ಸಹಾಯವಾಗಲು ಕೈಗಾರಿಕಾ ಸೌಲಭ್ಯ ಕಲ್ಪಿಸುವ ಕಾಯ್ದೆ(ಕರ್ನಾಟಕ ಇಂಡಸ್ಟ್ರೀಯಲ್ ಫಸಿಲಿಟೇಷನ್ ಆಕ್ಟ್)ಯನ್ನು ಜಾರಿಗೆ ತರುವಲ್ಲಿ ಕರ್ನಾಟಕ ಮೊಟ್ಟ ಮೊದಲ ರಾಜ್ಯವಾಗಿದೆ. ಭಾರತೀಯ ರಫ್ತು ಸಂಘಟನೆಯ ಒಕ್ಕೂಟದ ಸಹಯೋಗದೊಂದಿಗೆ ರಾಜ್ಯದಲ್ಲಿ ೫ ರಫ್ತು ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ರಫ್ತು ಹಾಗೂ ಸಿದ್ದ ಉಡುಪುಗಳು, ಪೆಟ್ರೋಕೆಮಿಕಲ್ಸ್ ಮತ್ತು ಇಂಜಿಯರಿಂಗ್ ಉತ್ಪನ್ನಗಳ ರಫ್ತಿನಲ್ಲಿ ಬೆಂಗಳೂರು ಕರ್ನಾಟಕದಲ್ಲಿ ಮುಂಚೂಣಿಯಲ್ಲಿದೆ.
ವಿಶೇಷ ಆರ್ಥಿಕ ವಲಯ ಕಾಯ್ದೆ ೨೦೦೫ರ ಅನ್ವಯ SEZ ಮಂಡಳಿಯು ೭೫ SEZ ಗಳಿಗೆ ಅನುಮೋದನೆ ಡಿದ್ದರು, ೩೬ SEZ ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ೪೯೫ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ೩.೭೩ ಲಕ್ಷ ಜನರಿಗೆ ಉದ್ಯೋಗ ದೊರಕಿದೆ. ೯೯ ಸಾವಿರದ ೫೫ ಕೋಟಿ ರೂಗಳ ಬಂಡವಾಳ ಹೂಡಿಕೆಯಾಗಿದ್ದು ೨೦೨೦-೨೧ರಲ್ಲಿ ಏಪ್ರಿಲ್ಂದ ನವೆಂಬರ್ವರೆಗೆ ೬೨,೫೪೭.೪೪ ಕೋಟಿ ರೂಗಳ ರಫ್ತು ಮಾಡಲಾಗಿದೆ.
ಕಾರ್ಮಿಕ ಇಲಾಖೆಯ ೨೦೧೮ರ ಸಾಲಿನ ವಾರ್ಷಿಕ ವರದಿಯಂತೆ ೨೦೧೮ ಡಿಸೆಂಬರ್ಗೆ ರಾಜ್ಯದಲ್ಲಿ ನೋಂದಣಿಯಾಗಿರುವ ಕಾರ್ಖಾನೆಗಳ ಸಂಖ್ಯೆ ೧೭,೩೯೦. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ೧೮,೨೫,೮೬೫ ರಷ್ಟಿತ್ತು. ೨೦೨೦-೨೧ರ ಸಾಲಿನ ಕರ್ನಾಟಕ ಆರ್ಥಿಕ ಸಮೀಕ್ಷೆಯ ವರದಿಯಲ್ಲಿ ಪ್ರಕಟಿಸಿರುವಂತೆ ರಾಜ್ಯದಲ್ಲಿ ನೋಂದಾಯಿತ ಕಾರ್ಖಾನೆಗಳ ಸಂಖ್ಯೆ ೧೬,೯೯೧. ಇವುಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆ ೧೬,೯೨,೪೯೪ ಇದೆ ಎಂದು ಹೇಳುತ್ತಿದೆ. ೨೦೧೯ರಲ್ಲಿನ ಆರ್ಥಿಕ ಹಿಂಜರಿತ ಮತ್ತು ಕೋವಿಡ್ಂದ ಹಲವಾರು ಕೈಗಾರಿಕೆಗಳು ಮುಚ್ಚಲ್ಪಟ್ಟಿರುವುದು ಮತ್ತು ೧ ಲಕ್ಷಕ್ಕಿಂತ ಹೆಚ್ಚು ಕೈಗಾರಿಕಾ ಕಾರ್ಮಿಕರು ಕೆಲಸವನ್ನು ಕಳೆದು ಕೊಂಡಿರುವುದನ್ನು ಸೂಚಿಸುತ್ತದೆ. ಅದರೆ ೫,೦೯೬ ಬಾಯ್ಲರ್ಗಳ ಸಂಖ್ಯೆ ರಾಜ್ಯದಲ್ಲಿ ೫,೨೬೪ ಕ್ಕೆ ಏರಿಕೆಯಾಗಿದೆ. ಇದು ಕೋವಿಡ್ ನಂತರ ವೈದ್ಯಕೀಯ ಸಂಬಂಧಿತ ಕೈಗಾರಿಕೆಗಳ ಸಂಖ್ಯೆ ಹೆಚ್ಚಳಗೊಂಡಿರುವುದು ಗಮಸಬಹುದಾಗಿದೆ. ಇದರ ಬಹುಪಾಲು ಬೆಂಗಳೂರಿನದಾಗಿದೆ.
ಕಾರ್ಮಿಕ ಇಲಾಖೆಯು ಕಳೆದ ೨ ವರ್ಷದಿಂದ ವಾರ್ಷಿಕ ವರದಿಯನ್ನು ಪ್ರಕಟಿಸದೆ ವಿಳಂಬ ಮಾಡುತ್ತಿದೆ. ವರದಿ ಪ್ರಕಟಿಸಿದರೆ ಕೋವಿಡ್ ನಂತರ ಉದ್ಯೋಗ ಕಳೆದುಕೊಂಡ ಕಾರ್ಮಿಕರ ನಿಖರ ಸಂಖ್ಯೆ, ಮುಚ್ಚಲ್ಪಟ್ಟ ಕೈಗಾರಿಕೆಗಳು, ಕಾರ್ಮಿಕ ಕಾನೂನುಗಳ ಜಾರಿಯ ಪರಿ ಹೊರಬೀಳಲಿದೆ. ಕೋವಿಡ್ ನಂತರ ಕಾರ್ಮಿಕ ಕಾನೂನುಗಳ ಉಲ್ಲಂಘನೆ ನಿರಂತರವಾಗಿ ನಡೆದಿದೆ. ೨೦೨೦ ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಲೇ-ಆಫ್, ರಿಟ್ರೆಂಚ್ಮೆಂಟ್, ವಿಆರ್ಎಸ್, ಸೇವೆಯಿಂದ ವಜಾ, ಕ್ಲೋಸರ್ ಮುಂತಾದ ಕಾರಣಕ್ಕೆ ಸುಮಾರು ೫೫೦೦ ಅರ್ಜಿಗಳು ೨೦೨೦ ಏಪ್ರಿಲ್ ನಿಂದ ಆಗಸ್ಟ್ ಅವಧಿಯಲ್ಲಿ ಸಲ್ಲಿಕೆಯಾಗಿವ. ಈ ಅರ್ಜಿಗಳ ಇತ್ಯರ್ಥಕ್ಕೆ ಕಾರ್ಯಪಡೆ ರಚಿಸಿದರೂ ಪ್ರಯೋಜನವಾಗಲಿಲ್ಲ. ಕಾರ್ಮಿಕರು ಸರಿಯಾದ ಪರಿಹಾರವಿಲ್ಲದೆ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಗಿದೆ. ಅನೇಕ ಮಾಲೀಕರು ವೇತನ ಒಪ್ಪಂದಗಳ ಉಲ್ಲಂಘನೆ, ಕಾರ್ಮಿಕರ ವೇತನ ಕಡಿತ ಮುಂತಾದ ಕ್ರಮಗಳನ್ನು ಕೈಗೊಂಡರೂ ಕಾರ್ಮಿಕ ಇಲಾಖೆ ಯಾವುದೇ ಕ್ರಮಗಳನ್ನು ವಹಿಸಿಲ್ಲ. ಕೇಂದ್ರ ಸರ್ಕಾರ ರೂಪಿಸಿರುವ ನೂತನ ಸಂಹಿತೆಗಳ ಜಾರಿಯ ಕೆಲಸದಲ್ಲಿ ಕಾರ್ಮಿಕ ಇಲಾಖೆ ಮೂಲಕ ರಾಜ್ಯ ಸರ್ಕಾರ ತೊಡಗಿದೆ. ವಿವಿಧ ಕಾರ್ಮಿಕ ಕಾಯ್ದೆಗಳಡಿ ರಾಜ್ಯದಲ್ಲಿ ನಡೆಸಲಾದ ಒಟ್ಟು ತಪಾಸಣೆಯ ಸಂಖ್ಯೆ ೫,೮೩೮ ಆಗಿದೆ. ಹೂಡಲಾದ ಮೊಕದ್ದಮೆಗಳ ಸಂಖ್ಯೆ ಕೇವಲ ೮೮೫ ಆಗಿದೆ. ವಿಲೇವಾರಿ ಮಾಡಲಾದ ೫೪೫ ಮೊಕದ್ದಮೆಗಳಿಂದ ರೂ.೧೩,೯೩,೩೯೫ ದಂಡದ ಮೊತ್ತವಾಗಿ ಸಂಗ್ರಹವಾಗಿದೆ. ಅಂದರೆ ನಡೆಸಲಾದ ತಪಾಸಣೆ ಹೆಚ್ಚಿದ್ದರೂ ಹೂಡಲಾದ ಮೊಕದ್ದಮೆಗಳ ಸಂಖ್ಯೆ ಕಡಿಮೆ ಇರುವುದು ಕಾರ್ಮಿಕ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
೨೦೧೯ರಲ್ಲಿ ಆರ್ಥಿಕ ಹಿಂಜರಿತದಿಂದ ಹಾಗೂ ೨೦೨೦-೨೧ರಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆಟೋ ಪಾರ್ಟ್ಸ್ ತಯಾರಿಕಾ ಕಾರ್ಖಾನೆಗಳು, ಮತ್ತಿತರೆ ಉದ್ದಿಮೆಗಳಲ್ಲಿನ ಧಾನಗತಿ ಹಲವು ಕಾರ್ಖಾನೆಗಳಲ್ಲಿ ಲೇ-ಆಫ್, ರಿಟ್ರೆಂಚ್ಮೆಂಟ್, ಉತ್ಪಾದನ ರಹಿತ ದಿನಗಳಿಗೆ ನಾಂದಿ ಹಾಡಿವೆ. ಅದರ ವಿರುದ್ಧ ಕಾರ್ಮಿಕರಲ್ಲಿ ಅತೃಪ್ತಿ ಹೆಚ್ಚುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಿರುವ ಕಾರ್ಖಾನೆಗಳ ವಿಲೀನ, ಅವಿಲೀನ, ಕೊಳ್ಳುವಿಕೆಯಿಂದಾಗಿ ರಾಜ್ಯದ ಹಲವು ಕಾರ್ಖಾನೆಗಳ ಒಡೆತನ ಏಕಾಏಕಿ ಬದಲಾಗುತ್ತಿದೆ. ಆ ಮೂಲಕ ಮಾಲೀಕತ್ವದ ದೇಶದ ಮೂಲಗಳು ಬದಲಾಗುತ್ತಿವೆ. ಬಹಳ ಕಾರ್ಖಾನೆಗಳ ಮಾಲೀಕತ್ವದ ದೇಶದ ಮೂಲ ಚೀನಾ ಆಗುತ್ತಿದೆ. ಕೆಲವು ಬಹುರಾಷ್ಟ್ರೀಯ ಕಂಪನಿಗಳನ್ನು ದೇಶೀಯ ಪ್ರಾದೇಶಿಕ ಬಂಡವಾಳಗಾರರು ಕೊಳ್ಳುತ್ತಿರುವ ಬೆಳವಣಿಗೆಯು ನಡೆದಿದೆ. ಪರಿಸರ ರಕ್ಷಣೆ ಕೇಂದ್ರಿತವಾಗಿ ಭಾರತ್ ಸಂಚಾರ್ IV ರಿಂದ ಭಾರತ್ ಸಂಚಾರ್ VI ಗೆ ವಾಹನಗಳ ಮಾದರಿ ಬದಲಾವಣೆಯು ಹಲವು ಉದ್ಯೋಗಗಳನ್ನು ಇಲ್ಲದಾಗಿಸಿದೆ. ೨೦೩೦ರ ವೇಳೆಗೆ ಪೆಟ್ರೋಲ್-ಡೀಸೆಲ್ ವಾಹನ ಉತ್ಪಾದನೆ ಸರ್ಕಾರವು ವಿದ್ಯುತ್ ವಾಹನಗಳ ಉತ್ಪಾದನೆಗೆ ಅನುವುಗೊಳಿಸಿದ ಪರಿಣಾಮವಾಗಿ ಮತ್ತಷ್ಟು ಉದ್ಯೋಗ ಕಡಿತವಾಗಲಿದೆ.
ಕೋವಿಡ್-೧೯ ಲಾಕ್ಡೌನ್ ೨೦೨೦ರ ಮರುತೆರವಿನ ಬಳಿಕ ಆಗಸ್ಟ್ ಅಂತ್ಯದ ವೇಳೆಗೆ ರಾಜ್ಯದ ೬.೬ ಲಕ್ಷ ಕೈಗಾರಿಕೆಗಳಲ್ಲಿ ೯೫ ಶೇಕಡ ಕೈಗಾರಿಕೆಗಳು ಮತ್ತು ೫೩ ಲಕ್ಷ ಕಾರ್ಮಿಕರ ಬಲದಲ್ಲಿ ೪೯ ಲಕ್ಷ ಕಾರ್ಮಿಕರು ಅಂದರೆ ೯೧ ಶೇಕಡ ಕಾರ್ಮಿಕರು ಕೆಲಸಕ್ಕೆ ಹಾಜರಾಗುವ ಮೂಲಕ ಕೈಗಾರಿಕಾ ಉತ್ಪಾದನೆ ಲಾಕ್ಡೌನ್ ನಂತರ ಕೂಡಲೇ ಚೇತರಿಕೆಗೊಳ್ಳಲು ಆರಂಭವಾಗಿದೆ ಎಂದು ರಾಜ್ಯ ಸರ್ಕಾರವು ಪ್ರಕಟಿಸಿದೆ. ಜವಳಿ, ಮನೋರಂಜನೆ, ಆತಿಥ್ಯ ಮತ್ತು ರಫ್ತು ಆಧಾರಿತ ಕೈಗಾರಿಕೆಗಳು ಪುನಶ್ಚೇತನಗೊಳ್ಳಬೇಕಿದೆ ಎಂದಿದೆ. ಅಂತಿಮ ಬಳಕೆದಾರರ ಕೈಯಲ್ಲಿ ಖರ್ಚು ಮಾಡಲು ಹಣವಿರದ ಹೊರತು ಪುನಶ್ಚೇತನ ನಿಧಾನಗತಿಯನ್ನು ಎದುರಿಸಲಿದೆ, ಕೈಗಾರಿಕಾ ವಲಯವು ಮೊದಲ ಲಾಕ್ಡೌನ್ ವೇಳೆ ೨೩ ಸಾವಿರ ಕೋಟಿ ಒಟ್ಟಾರೆ ನಷ್ಟವನ್ನು ಅನುಭವಿಸಿದೆ. ಹಿಂದಿನ ವರ್ಷ ೨೭ ಸಾವಿರ ಕೋಟಿ ವಹಿವಾಟು ಹೊಂದಿದ್ದ ವ್ಯಾಪಾರಿ ರಫ್ತು ವಲಯವು ಎರಡನೆ ಲಾಕ್ಡೌನ್ ವೇಳೆ ಕೇವಲ ೯ ಸಾವಿರ ಕೋಟಿಗೆ ಸೀಮಿತವಾಗಿದೆ. ೨೦೧೯-೨೦ರಲ್ಲಿ ೧ ಲಕ್ಷ ೨೪ ಸಾವಿರ ಕೋಟಿ ಇದ್ದ ಕೈಗಾರಿಕೋದ್ಯಮದ ವಹಿವಾಟು ೨೦೨೦-೨೧ರಲ್ಲಿ ೯೭ ಸಾವಿರ ಕೋಟಿಗೆ ಕುಸಿದಿದೆ ಎಂದು ಕೈಗಾರಿಕೋದ್ಯಮ ಮತ್ತು ವಾಣಿಜ್ಯ ಸಂಘಟನೆಗಳು ಪ್ರಕಟಿಸಿವೆ. ೨೦೨೧ರ ಎರಡನೆ ಅಲೆಯ ಕಾಲಾವಧಿಯ ಲಾಕ್ಡೌನ್ ಅಂತಹ ಪುನಶ್ಚೇತನಕ್ಕೆ ಮತ್ತೊಂದು ಹಿನ್ನಡೆ ಉಂಟು ಮಾಡಿದೆ. ರಾಷ್ಟ್ರದಲ್ಲಿಯೆ ಮೊದಲು ರಾಜ್ಯದಲ್ಲಿ ೨ ಓಮೈಕ್ರಾನ್ ಕೋವಿಡ್ ಸೋಂಕಿತರ ಇತ್ತೀಚಿನ ಪತ್ತೆ ಹಾಗೂ ಏರುತ್ತಿರುವ ಕೋವಿಡ್ ಸೋಂಕಿತರ ಸಂಖ್ಯೆ ಮೂರನೇ ಅಲೆ ಉಂಟು ಮಾಡಬಹುದಾದ ಪರಿಣಾಮ ಮತ್ತದರ ನಿಯಂತ್ರಣ ಆಧರಿಸಿ ಪುನಶ್ಚೇತನವು ನಿರ್ಧಾರಿತವಾಗುವ ಸಾಧ್ಯತೆಯಿದೆ.
ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಕಾರ್ಮಿಕರ ಮುಷ್ಕರವು ದೀರ್ಘಕಾಲ ನಡೆಯಿತು. ಇದು ರಾಜಕೀಯ ಪರ-ವಿರೋಧಗಳಿಗೆ ವೇದಿಕೆಯಾಯಿತು. ಕಾರ್ಮಿಕರ ಪ್ರತಿಭಟನಾ ಸ್ಥಳದಲ್ಲಿನ ಟೆಂಟನ್ನು ಜಿಲ್ಲಾಡಳಿತವು ತೆರವುಗೊಳಿಸಿತು. ರಾಜ್ಯ ಬಿಜೆಪಿ ಸರ್ಕಾರವು ಟೊಯೋಟಾ ಮಾಲೀಕನ ಪರ ವಹಿಸಿತು. ಪಕ್ಷವು ಟೆಂಟ್ ತೆರವುಗೊಳಿಸಿರುವುದನ್ನು ಖಂಡಿಸಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಅಗತ್ಯ ಕ್ರಮವಹಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಕೋಲಾರ ವಿಸ್ಟ್ರನ್ ಕಾರ್ಖಾನೆಯ ಕಾರ್ಮಿಕರ ದಿಢೀರ್ ಹೋರಾಟ, ಹಿಂಸಾಚಾರವು ಕಾರ್ಮಿಕ ಕಾನೂನುಗಳ ಜಾರಿಗೆ ಕ್ರಮವಹಿಸದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ ಕಾರ್ಮಿಕ ಅತೃಪ್ತಿಯನ್ನು ತೋರುತ್ತದೆ.
ರಾಜ್ಯದಲ್ಲಿನ ಸಾರ್ವಜನಿಕ ಉದ್ದಿಮೆಗಳಾದ ಬಿ.ಇ.ಎಲ್, ಬಿ.ಇ.ಎಂ.ಎಲ್, ಬಿ.ಹೆಚ್.ಇ.ಎಲ್, ಹೆಚ್.ಎ.ಎಲ್. ಮುಂತಾದ ಕಾರ್ಖಾನೆಗಳನ್ನು ಖಾಸಗೀಕರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕೇಂದ್ರ ಸರ್ಕಾರದ ಜಿ.ಎಸ್.ಟಿ. ಮತ್ತಿತರ ನೀತಿಗಳಿಂದ ಜವಳಿ ಮತ್ತು ಸಿದ್ದ ಉಡುಪು ತಯಾರಿಕೆ ಉದ್ದಿಮೆಗಳು ಅವಸಾನದ ಅಂಚಿನಲ್ಲಿವೆ. ಬೆಂಗಳೂರಿನ ಬಹುತೇಕ ಪವರ್ಲೂಂಗಳು ಮುಚ್ಚಲ್ಪಟ್ಟಿದ್ದು ನೇಕಾರ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ಘನ, ಆಧುನಿಕ ಕೈಗಾರಿಕೆಗಳು ಬೆಂಗಳೂರಿನಿಂದ ಹೊರ ವಲಯಕ್ಕೆ, ಗಾರ್ಮೆಂಟ್ಸ್ ಕಾರ್ಖಾನೆಗಳು ಬೆಂಗಳೂರಿಂದ ಹೊರ ಜಿಲ್ಲೆಗಳಿಗೆ ಸ್ಥಳಾಂತರಗೊಳ್ಳುತ್ತಿವೆ. ಹಾಗಾಗಿ ಸಾವಿರಾರು ಮಹಿಳಾ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಬೃಹತ್ ಪ್ರಮಾಣದಲ್ಲಿರುವ ಕಟ್ಟಡ ಕಾಮಗಾರಿ ಮತ್ತಿತರೆ ಆರ್ಥಿಕ ಚಟುವಟಿಕೆಗಳು ಪ್ರಾರಂಭಗೊಂಡಿವೆ. ರಿಯಲ್ ಎಸ್ಟೇಟ್ ಉದ್ದಿಮೆ ಬೃಹದಾಕಾರವಾಗಿ ಬೆಳೆಯುತ್ತಿರುವುದರಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಳಲ್ಲಿ ಅಸಂಘಟಿತ ಕಾರ್ಮಿಕರು, ಅದರಲ್ಲೂ ವಲಸೆ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳು ಸೇವಾವಲಯದ ಮಾಲ್ಗಳು, ಮಲ್ಟಿಪ್ಲೆಕ್ಸ್ಗಳು, ಫುಡ್ ಶಾಪ್ಗಳು ಅರಂಭವಾಗುವುದು ಹೆಚ್ಚುತ್ತಿದ. ಇಲ್ಲಿ ಉದ್ಯೋಗ ಮಾಡುವ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ.
ಏರೋಸ್ಪೇಸ್ ನೀತಿ
ರಾಜ್ಯದ ಏರೋಸ್ಪೇಸ್ ನೀತಿ ೨೦೧೩-೨೦೨೩ ಯನ್ನು ತಿದ್ದುಪಡಿ ಮಾಡಿ ಬೆಂಗಳೂರು ಸುತ್ತಮುತ್ತಲಿನ ವಲಯ-೪ ರಲ್ಲಿ ಸ್ಥಾಪಿಸಲಾಗುವ ಏರೋಸ್ಪೇಸ್ ಉದ್ದಿಮೆಗಳಿಗೆ ವಿಶೇಷ ರಿಯಾಯಿತಿಗಳನ್ನು ನೀಡಲಾಗುವುದೆಂದು ಹೇಳಲಾಗಿದೆ. ಬೆಂಗಳೂರನ್ನು ಕೇಂದ್ರೀಕರಿಸಿ ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಅಂಡ್ ಮ್ಯಾನುಫ್ಯಾಕ್ಚರಿಂಗ್ (ಇ.ಎಸ್.ಡಿ.ಎಂ.) ಕ್ಷೇತ್ರದಲ್ಲಿ ಹೊಸ ಕಂಪನಿಗಳು ಬೆಳೆಯುತ್ತಿವೆ. ಕರ್ನಾಟಕವು ಈಗಾಗಲೇ ಚಿಪ್ ಡಿಸೈನ್ ಕ್ಷೇತ್ರದಲ್ಲಿ ದೇಶದಲ್ಲಿ ೨ ನೇ ಸ್ಥಾನದಲ್ಲಿದೆ. ೫ ವರ್ಷಗಳಲ್ಲಿ ೧೫ ಸಾವಿರ ಯುವಜನರಿಗೆ ಈ ಕ್ಷೇತ್ರದಲ್ಲಿ ತರಬೇತಿಯನ್ನು ನೀಡಲಾಗುವುದು ಎಂದು ಸರ್ಕಾರ ಹೇಳಿದೆ. ಡಿಸೈನಿಂಗ್, ಪ್ರೋಟೊಟೈಪಿಂಗ್, ಟೆಸ್ಟಿಂಗ್, ಕ್ಯಾರೆಕ್ಟರೈಸೇಷನ್ ಮುಂತಾದವುಗಳಿಗಾಗಿ ವಿಶ್ವ ದರ್ಜೆಯ ಎರಡು ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಆರ್ಥಿಕ ಸಮೀಕ್ಷೆಯಲ್ಲಿ ಸರ್ಕಾರ ಪ್ರಕಟಿಸಿದೆ. ಜೊತೆಗೆ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ವಿನ್ಯಾಸ ವ್ಯವಸ್ಥೆ ಉತ್ಪಾದನೆಯ ಪ್ರಧಾನ ಕ್ಷಸ್ಟರ್ನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
ಕೃತಕ ಬುದ್ದಿಮತ್ತೆ (AI-Artificial Intelligence)
ಅನಾಲಿಟಿಕ್ಸ್, ಇಂಟರ್ನೆಟ್ ಆಫ್ ಥಿಂಗ್ಸ್, ರೋಬೋಟಿಕ್ಸ್, ಕಂಪ್ಯೂಟರ್ ವಿಷನ್, ಎಆರ್, ವಿಆರ್, ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ ಮುಂತಾದ ನೂತನ ಕೃತಕ ಬುದ್ದಿಮತ್ತೆ ತಂತ್ರಜ್ಞಾನಗಳ ಮೂಲಕ ಆರೋಗ್ಯ, ಕೃಷಿ, ಶಿಕ್ಷಣ, ಸಾರ್ವಜನಿಕ ಸೇವೆಗಳು, ಸುರಕ್ಷತೆ, ಸ್ಮಾರ್ಟ್ ಸಿಟಿ, ಸಾರಿಗೆ, ಆಡಳಿತ, ಕಸ ನಿರ್ವಹಣೆ ಮುಂತಾದ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಹೆಸರಿನಲ್ಲಿ ಕರ್ನಾಟಕ ಸರ್ಕಾರ ನಾಸ್ಕಾಂ ಜೊತೆಗೂಡಿ “ಎ.ಐ. ಫಾರ್ ಗುಡ್” ಒಳಿತಿಗಾಗಿ ಕೃತಕ ಬುದ್ಧಿಮತ್ತೆ” ಎಂಬ ಯೋಜನೆಯನ್ನು ರೂಪಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಿಗೆ ಎಲ್ಲಾ ಅವಕಾಶಗಳನ್ನು ಮತ್ತು ವಿವಿಧ ರಿಯಾಯಿತಿಗಳನ್ನು ಸರ್ಕಾರ ನೀಡುತ್ತಿದೆ. ಅತ್ಯಂತ ಉನ್ನತ ತಂತ್ರಜ್ಞಾನದ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ರಕ್ಷಣೆಗೆ ಬೇಕಾದ ಯಾವ ಕಾನೂನುಗಳೂ ಇಲ್ಲ ಎಂಬುದನ್ನು ಗಮನಿಸಬೇಕಾಗಿದೆ.