ಚೆನ್ನೈ: ಇದೇ ಮೊದಲ ಬಾರಿಗೆ ದೃಷ್ಟಿಯಿಲ್ಲದ ವ್ಯಕ್ತಿಗೆ ಪ್ರಮುಖ ರಾಜಕೀಯ ಪಕ್ಷದ ಜಿಲ್ಲಾ ಮಟ್ಟದಲ್ಲಿ ಮುನ್ನಡೆಸುವ ಅವಕಾಶ ಪ್ರಾಪ್ತವಾಗಿದೆ. ತಮಿಳುನಾಡಿನ ಚೆಂಗಲ್ ಪಟ್ಟುವಿನಲ್ಲಿ ಬಿ.ಎಸ್. ಭಾರತಿ ಅಣ್ಣ ಎಂಬುವವರನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
51 ವರ್ಷದ ಬಿ.ಎಸ್.ಭಾರತಿ ಅಣ್ಣ ಅವರು ವೃತ್ತಿಯಲ್ಲಿ ವಕೀಲರಾಗಿದ್ದು ದಶಕಗಳಿಂದ ಕಮ್ಯೂನಿಸ್ಟ್ ಸದಸ್ಯರಾಗಿದ್ದಾರೆ. ಕುರುಡುತನ ಅವರಿಗೆ ಹುಟ್ಟಿನಿಂದ ಬಂದಿಲ್ಲದಿದ್ದರೂ, ಅವರಿಗೆ ಹುಟ್ಟಿನಿಂದಲೂ ದೃಷ್ಟಿ ಸಮಸ್ಯೆಯಿತ್ತು. ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್‌ಎಫ್‌ಐ) ಮೂಲಕ ಸಾರ್ವಜನಿಕ ಸೇವೆಯನ್ನು ಆರಂಭಿಸಿದ ಭಾರತಿ ಅಣ್ಣ ಚೆನ್ನೈನ ಡಾ. ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು. ನಂತರ ಅವರು ಚೆಂಗಲ್ಪಟ್ಟುವಿನಲ್ಲಿ ಅಭ್ಯಾಸವನ್ನು ಮುಂದುವರೆಸಿದರು. “ನನಗೆ ಮೂರು ವರ್ಷದವರೆಗೂ ದೃಷ್ಟಿ ಇತ್ತು. ನಂತರ, ದೂರದೃಷ್ಟಿ ಎಂದು ಹೇಳಿದರು. 2014ರಲ್ಲಿ ಸಂಪೂರ್ಣ ಕುರುಡುತನಕ್ಕೆ ಒಳಗಾದೆ” ಎಂದು ಅವರು ಹೇಳಿದರು.
ತಮಿಳುನಾಡು ಅಸ್ಪೃಶ್ಯತೆ ನಿರ್ಮೂಲನೆ ಫ್ರಂಟ್‌ನ ಉಪ ಕಾರ್ಯದರ್ಶಿಯಾಗಿ ಅವರು ಕಾರ್ಯನಿರ್ವಹಿಸಿದ್ದಾರೆ. “ಕಣ್ಣಿನ ಸಂಪೂರ್ಣ ನಷ್ಟವು ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡಲಿಲ್ಲ. ಹಾಗಾಗಿ ಅವರು ರಾಜೀನಾಮೆ ನೀಡಿದರು. ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತೆ ಜನಪರ ಕೆಲಸಗಳನ್ನು ಮಾಡಲು ಮುಂದಾಗುತ್ತಾರೆ. ಅವರು ತಮಿಳುನಾಡು ಅಸೋಸಿಯೇಷನ್ ಫಾರ್ ದಿ ರೈಟ್ಸ್ ಆಫ್ ಆಲ್ ಟೈಪ್ಸ್ ಆಫ್ ಡಿಫರೆಂಟ್ಲಿ ಏಬಲ್ಡ್ ಮತ್ತು ಕೇರ್‌ಗಿವರ್ಸ್‌ನ ಉಪಾಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದ್ದಾರೆ.
ಸಿಪಿಐ(ಎಂ) ಪಕ್ಷದ ಸಾಧಾರಣ ಕಾರ್ಯಕರ್ತನಾಗಿದ್ದ ತಾವು ಈಗ ಉನ್ನತ ಸ್ಥಾನ ಅಲಂಕರಿಸಿರುವುದು ಸಮಾಜಕ್ಕೆ ದೊಡ್ಡ ಸಂದೇಶ ರವಾನಿಸುತ್ತದೆ. ಸಾಮಾಜಿಕವಾಗಿ ತುಳಿತಕ್ಕೊಳಗಾದ, ಅಂಧ ವ್ಯಕ್ತಿ ಇಂದು ನಾಯಕತ್ವ ಹುದ್ದೆಗೆ ಏರಿರುವುದು ಸಂತಸ ತಂದಿದೆ ಎಂದು ಭಾರತಿ ಅಣ್ಣ ಅವರು ಸಂತಸ ಹಂಚಿಕೊಂಡಿದ್ದಾರೆ.