ಲಿಂಗಸೂಗುರಿನ ನಿಲೋಗಲ್ ಗ್ರಾಮದಲ್ಲಿ ದೇಶ ಕಾಯುವ ಯೋಧನ ತಾಯಿಯನ್ನು ಕೊಲೆ ಮಾಡಿದ ಬಿಜೆಪಿ ಮುಖಂಡ ಶರಣಪ್ಪಗೌಡನನ್ನು ಬಂಧಿಸಬೇಕೆಂದು ಒತ್ತಾಯಿಸಿ ಇಂದು(ಫೆ.22) ಲಿಂಗಸ್ಗೂರಿನಲ್ಲಿರುವ ಪೊಲೀಸ್ ಠಾಣೆ ಮುಂದೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಬಿಎಸ್ಎಫ್ ಸೈನಿಕ ಅಮರೇಶ ರವರ ಮನೆಯ ಮುಂದಿರುವ ಚರಂಡಿ ವಿಷಯಕ್ಕೆ ಅದೇ ಗ್ರಾಮದ ಸುಮಾರು 20ಕ್ಕೂ ಹೆಚ್ಚು ಜನ ಕೂಡಿಕೊಂಡು ಮಾರಾಣಾಂತಿಕ ಹಲ್ಲೆ ನಡೆಸಿ ಯೋಧನ ತಾಯಿ ಈರಮ್ಮ ಅವರನ್ನು ಕೊಲೆ ಮಾಡಿದ್ದಾರೆ.
ಹಂತಕರನ್ನು ರಾಜಕೀಯ ಪ್ರಭಾವದಿಂದಾಗಿ ಬಂಧಿಸುವ ಬದಲಾಗಿ ಕೊಲೆಗಡುಕರಿಗೆ ರಕ್ಷಣೆ ನೀಡಲಾಗುತ್ತಿದೆ. ದೇಶದ ರಕ್ಷಣೆ ಮಾಡುವ ವೀರಯೋಧರ ಬಗ್ಗೆ ಡೊಂಗೀ ಭಾಷಣ ಮಾಡುವ ಬಿಜೆಪಿ ಈಗ ದೇಶ ಕಾಯೋ ಯೋಧನ ಕುಟುಂಬದ ಮೇಲೆ ಅಕ್ರಮ ಗುಂಪು ಕಟ್ಟಿಕೊಂಡು ಕೊಲೆ ಮಾಡಲಾಗಿದೆ. ಆದರೆ ಬಿಜೆಪಿ ಈ ಬಗ್ಗೆ ತುಟಿಯೂ ಬಿಚ್ಚದೇ ಮೌನವಾಗಿದೆ. ಇದರಿಂದ ಬಿಜೆಪಿಯ ನಕಲೀ ದೇಶಪ್ರೇಮ ಎಂದು ಸಾಬೀತಾದಂತಾಗಿದೆ. ಯೋಧನ ಕುಟುಂಬದ ಮೇಲೆಯೇ ಕೊಲೆಗಡುಕರು ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಸಿಪಿಐ(ಎಂ) ದೇವದುರ್ಗ ತಾಲೂಕು ಸಮಿತಿ ತೀವ್ರವಾಗಿ ಖಂಡಿಸಿದೆ.
ಕೊಲೆ ಮಾಡಿದ ಪ್ರಮುಖ ಆರೋಪಿ ಬಿಜೆಪಿ ಸ್ಥಳೀಯ ಮುಖಂಡ ಶರಣಪ್ಪ ಹಾಲಾಪೂರವರನ್ನು ಬಂಧಿಸದೇ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಕೊಲೆ ಪ್ರಕರಣವನ್ನು ದಿಕ್ಕು ತಪ್ಪಿಸುವ ಉದ್ದೇಶ ಇದಾಗಿದೆ. ಕೊಲೆಯ ಆರೋಪಿಗಳು ಯೋಧನ ಕುಟುಂಬದ ಮೇಲೆ ಸುಳ್ಳು ಪ್ರಕಣ ದಾಖಲಿಸಿರುವುದನ್ನು ನೋಡಿದರೆ ಪೋಲಿಸ್ ಇಲಾಖೆಯ ಮೇಲೆ ಅನುಮಾನಕ್ಕೆ ದಾರಿಯಾಗಿದೆ.
ಕೊಲೆ ನಡೆದು ವಾರ ಕಳೆದರೂ ಪ್ರಮುಖ ಆರೋಪಿಯನ್ನು ಬಂದಿಸಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಶರಣಪ್ಪ ಹಾಲಾಪೂರವರನ್ನೊಳಗೊಂಡಂತೆ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನ ಕ್ರಮ ಜರುಗಿಸಬೇಕು ಹಾಗೂ ಯೋಧನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ಸಿಪಿಐ(ಎಂ) ಪಕ್ಷವು ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಪಕ್ಷದ ತಾಲೂಕ ಕಾರ್ಯದರ್ಶಿ ರಮೇಶ ವೀರಾಪೂರು, ತಾಲೂಕು ಸಮಿತಿ ಸದಸ್ಯರಾದ ಮಹ್ಮದ್ ಹನೀಫ್, ಆಂಜನೇಯ ನಾಗಲಾಪೂರು, ಹತ್ಯಗೀಡಾದ ಈರಮ್ಮ ಅವರ ಮಗ ಯೋಧ ಅಮರೇಶ ನಿಲೋಗಲ್, ಬಾಬಾಜಾನಿ, ಜಾಫರ್ ಫೂಲವಾಲೆ, ನಿಂಗಪ್ಪ ಎಂ, ತಿಪ್ಪಣ್ಣ ನಿಲೋಗಲ್, ಹಸೇನ್ ಸಾಬ್, ವೆಂಕಟೇಶ, ಇಸ್ಮಾಯಿಲ್, ಅಲೀಮ್ ಪಾಷಾ, ಹೈದರ್ ಪಾಷಾ, ಮಣಿಸಿಂಗ್, ಶಬ್ಬೀರ್, ಹಸನ್, ರಮೇಶ ನಿಲೋಗಲ್, ಅಕ್ಬರ್ ಪಾಷಾ ಸೇರಿದಂತೆ ಮುಂತಾದವರು ಇದ್ದರು.