ಭಾರತೀಯ ಪರಿಸ್ಥಿತಿಯಲ್ಲಿನ ವೈವಿಧ್ಯತೆಗಳನ್ನು ಪರಿಗಣಿಸಿದರೆ, ಒಂದು ರಾಷ್ಟ್ರೀಯ ಮಟ್ಟದ ರಾಜಕೀಯ ರಂಗವನ್ನು 2024 ರ ಲೋಕಸಭೆ ಚುನಾವಣೆಯ ನಂತರವೇ ರಚಿಸಲಾಗುವುದು ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಚುನಾವಣೆಯ ಮೊದಲು, ರಾಜ್ಯ ಮಟ್ಟದ ರಂಗಗಳು ಪ್ರಾಯೋಗಿಕ ಅರ್ಥದಲ್ಲಿ ಅತ್ಯುತ್ತಮ ಆಯ್ಕೆ, ಏಕೆಂದರೆ ಪ್ರತಿ ರಾಜ್ಯದಲ್ಲಿ ವಿಭಿನ್ನ ರಾಜಕೀಯ ಪಕ್ಷಗಳು ಪ್ರಬಲವಾಗಿವೆ. 1977 ರಿಂದ, ರಾಷ್ಟ್ರೀಯ ಮಟ್ಟದ ರಂಗಗಳು ಚುನಾವಣೆಯ ನಂತರವೇ ರಚನೆಯಾಗುತ್ತಿವೆ. 1989, 1996, 1998 ಮತ್ತು 2004 ರ ಬೆಳವಣಿಗೆಗಳನ್ನು ನೆನಪಿಸಿಕೊಳ್ಳಿ. ಈ ಎಲ್ಲಾ ವರ್ಷಗಳಲ್ಲಿ, ಚುನಾವಣೆಯ ನಂತರ ಸರ್ಕಾರ ರಚನೆಗೆ ರಾಜಕೀಯ ರಂಗಗಳು ಅಸ್ತಿತ್ವಕ್ಕೆ ಬಂದವು ಎಂದು ಎಪ್ರಿಲ್ 7ರಂದು ಕಣ್ಣೂರಿನಲ್ಲಿ 23 ನೇ ಪಕ್ಷದ ಮಹಾಧಿವೇಶನದ ನಡಾವಳಿಗಳನ್ನು ವಿವರಿಸುವಾಗ ಯೆಚೂರಿ ಪ್ರಶ್ನೆಯೊಂದಕ್ಕೆ ಸ್ಪಂದಿಸುತ್ತ ಹೀಗಂದರು.
ಇದನ್ನು ಓದಿ: ಕಾಂಗ್ರೆಸ್ ತನ್ನ ವಿಶ್ವಾಸಾರ್ಹತೆಯನ್ನು ತಾನೇ ಧ್ವಂಸ ಪಡಿಸಿಕೊಳ್ಳುತ್ತಿದೆ: ಪ್ರಕಾಶ ಕಾರಟ್
ಸಿಪಿಐ(ಎಂ ಬಿಜೆಪಿ ವಿರೋಧಿ ಮತಗಳನ್ನು ಕ್ರೋಢೀಕರಿಸಲು) ಪ್ರಯತ್ನಿಸುತ್ತಿದೆ ಎಂದು ಅವರು ಮುಂದುವರೆದು ಹೇಳಿದರು.. ಭಾರತೀಯ ಸಂವಿಧಾನ ಮತ್ತು ಗಣರಾಜ್ಯವನ್ನು ರಕ್ಷಿಸಲು ಬಿಜೆಪಿಯನ್ನು ಪ್ರತ್ಯೇಕಿಸುವುದು ಮತ್ತು ಸೋಲಿಸುವುದು ಪ್ರಮುಖ ಕಾರ್ಯವಾಗಿದೆ. ಅದಕ್ಕಾಗಿ ಬಿಜೆಪಿ ವಿರೋಧಿ ಶಕ್ತಿಗಳ ವಿಶಾಲವಾದ ಮೈತ್ರಿ ಇರುತ್ತದೆ. ಇಂತಹ ಮೈತ್ರಿಗಳು ಕೆಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಾತ್ಯತೀತ ಶಕ್ತಿಗಳ ಗರಿಷ್ಠ ಸಜ್ಜುಗೊಳಿಸುವಿಕೆಯನ್ನು ನಾವು ಬಯಸುತ್ತೇವೆ. ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆಗೆ ಸಾಮಾಜಿಕ ಚಳುವಳಿಗಳು ಮತ್ತು ಜನಾಂದೋಲನಗಳ ಏಕತೆಯನ್ನು ಬಲಪಡಿಸುವುದು ಮುಖ್ಯವಾಗಿದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕ್ರಿಯೆಗೆ ಅವರ ಕೊಡುಗೆ ಏನು ಎಂಬುದನ್ನು ನಿರ್ಧರಿಸುವುದು ಅವರಿಗೆ ಬಿಟ್ಟದ್ದು, ಕಾಂಗ್ರೆಸ್ ಪಕ್ಷದಿಂದ ನಾಯಕರು ನಿರಂತರವಾಗಿ ಬಿಜೆಪಿಗೆ ಹರಿದು ಬರುತ್ತಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಯೋಚಿಸಬೇಕು ಎಂದು ಹೇಳಿದರು.
ಕರಡು ರಾಜಕೀಯ ನಿರ್ಣಯದ ಮಂಡನೆ
ಎಪ್ರಿಲ್ 6ರ ಮಧ್ಯಾಹ್ನ ಪಕ್ಷದ ಪ್ರಧಾನ ಕಾರ್ಯದರ್ಶಿಯವರು ರಾಜಕೀಯ ನಿರ್ಣಯದ ಕರಡನ್ನು ಮಹಾಧಿವೇಶನದ ಮುಂದೆ ಮಂಡಿಸಿದರು. ಈ ಕುರಿತು ಪತ್ರಿಕಾಗೋಷ್ಠಿಗೆ ವಿವರ ನೀಡುತ್ತ, ಸಿಪಿಐ(ಎಂ)ನ ಆಂತರಿಕ ಪ್ರಜಾಪ್ರಭುತ್ವದ ಹುರುಪಿಗೆ ಅನುಗುಣವಾಗಿ, ಈ ಕರಡು ನಿರ್ಣಯವನ್ನು ಎರಡು ತಿಂಗಳ ಮುಂಚಿತವಾಗಿ ಬಿಡುಗಡೆ ಮಾಡಲಾಯಿತು, ಪಕ್ಷದ ಎಲ್ಲಾ ಸದಸ್ಯರು ನೇರವಾಗಿ ಕೇಂದ್ರ ಸಮಿತಿಗೆ ತಿದ್ದುಪಡಿಗಳನ್ನು ಕಳುಹಿಸುವ ಹಕ್ಕನ್ನು ಹೊಂದಿದ್ದರು ಎಂದು ಹೇಳಿದರು. ಕೇಂದ್ರ ಸಮಿತಿಯು 4,001 ತಿದ್ದುಪಡಿಗಳನ್ನು ಸ್ವೀಕರಿಸಿದೆ. ಅವೆಲ್ಲವನ್ನೂ ಪರಿಗಣಿಸಲಾಗಿದೆ ಮತ್ತು ಕೇಂದ್ರ ಸಮಿತಿಯು ಅಂಗೀಕರಿಸಿದ ಮಹಾಧಿವೇಶನ- ಪೂರ್ವ ತಿದ್ದುಪಡಿಗಳ ವರದಿಯನ್ನು ಕೂಡ ಮಹಾಧಿವೇಶನದ ಮುಂದೆ ಮಂಡಿಸಲಾಯಿತು ಎಂದು ಯೆಚೂರಿ ತಿಳಿಸಿದರು.
ಇದನ್ನು ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸಿಪಿಐ(ಎಂ) ಮಹಾಧಿವೇಶನದ ಕರೆ
ಕರಡು ರಾಜಕೀಯ ನಿರ್ಣಯದ ಮೇಲಿನ ಚರ್ಚೆ ಎಪ್ರಿಲ್ 7ರ ಬೆಳಗ್ಗೆಯಿಂದ ಆರಂಭವಾಯಿತು. ಮಧ್ಯಾಹ್ನದವರೆಗೆ ನಡೆದ ಚರ್ಚೆಯಲ್ಲಿ ಕರ್ನಾಟಕದ ಪ್ರತಿನಿಧಿ ಬಾಲಕೃಷ್ಣ ಶೆಟ್ಟಿ ಸೇರಿದಂತೆ 12 ರಾಜ್ಯಗಳ 12 ಪ್ರತಿನಿಧಿಗಳು ಭಾಗವಹಿಸಿದ್ದರು.
ಮಧ್ಯಾಹ್ನದ ಅಧಿವೇಶನದಲ್ಲಿ ಕರ್ನಾಟಕದ ಪ್ರತಿನಿಧಿ ಕೆ.ನೀಲಾ ಸೇರಿದಂತೆ 17 ಪ್ರನಿಧಿಗಳು , ಮತ್ತು ಎಪ್ರಿಲ್ 8ರ ಬೆಳಿಗ್ಯೆಯ ಅಧಿವೇಶನದಲ್ಲಿ 17 ಪ್ರತಿನಿಧಿಗಳು ಭಾಗವಹಿಸಿದರು.
ಈ ಪ್ರತಿನಿಧಿಗಳು 390 ತಿದ್ದುಪಡಿಗಳನ್ನು 12 ಸೂಚನೆಗಳನ್ನು ಮಂಡಿಸಿದರು ಎಂದು ಎಪ್ರಿಲ್ 8ರಂದು ನೀಡಿರುವ ಪಕ್ಷದ ಪತ್ರಿಕಾ ಹೇಳಿಕೆ ತಿಳಿಸಿದೆ.
ಎಪ್ರಿಲ್ 8ರ ಮಧ್ಯಾಹ್ನದ ಅಧಿವೇಶನದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಚರ್ಚೆಗೆ ಉತ್ತರಿಸುತ್ತಾರೆ ಮತ್ತು ಸಂಜೆಯ ಅಧಿವೇಶನದಲ್ಲಿ ಕರಡು ರಾಜಕೀಯ-ಸಂಘಟನಾತ್ಮಕ ವರದಿಯನ್ನು ಪೊಲಿಟ್ ಬ್ಯುರೊ ಸದಸ್ಯ ಪ್ರಕಾಶ ಕಾರಟ್ ಮಂಡಿಸುವುದಾಗಿಯೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮೂರನೇ ದಿನದ ಮಧ್ಯಾಹ್ನದ ವರೆಗಿನ ಕಲಾಪಗಳ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಕರಡು ರಾಜಕೀಯ ನಿರ್ಣಯದ ಮೇಲಿನ ಚರ್ಚೆಗಳ ಮುಖ್ಯಾಂಶಗಳನ್ನು ತಿಳಿsiದರು ಮತ್ತು ಈ ಕುರಿತ ಪತ್ರಕರ್ತರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.