ತ್ರಿಪುರ ಸರ್ಕಾರದ ಅವಧಿ ಮುಗಿಯುವ ಕೆಲವು ತಿಂಗಳುಗಳ ಮೊದಲು ಮುಖ್ಯಮಂತ್ರಿಯನ್ನು ಬದಲಾಯಿಸುವ ಬಿಜೆಪಿಯ ನಿರ್ಧಾರವು ಬಿಜೆಪಿ ರಾಜ್ಯ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂಬ ಅಂಶವನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಹೇಳಿದೆ.
ಆಡಳಿತ ಹದಗೆಟ್ಟಿದೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಜಾರಿಗೆ ತರಲಾಗಿಲ್ಲ ಮತ್ತು ಅದರ ನೀತಿಗಳು ಸಂಪೂರ್ಣವಾಗಿ ಜನವಿರೋಧಿಯಾಗಿ ಜನರ ಮೇಲೆ ಅಭೂತಪೂರ್ವ ಆರ್ಥಿಕ ಹೊರೆಗಳನ್ನು ಹೇರುತ್ತಿವೆ. ಬಿಜೆಪಿ ಸರ್ಕಾರ ನಡೆಸಿದ ಭಯೋತ್ಪಾದನೆ ಮತ್ತು ಹಿಂಸಾಚಾರದ ರಾಜಕೀಯವು ಪ್ರಜಾಪ್ರಭುತ್ವವನ್ನು ನಾಶಪಡಿಸಿ ಚುನಾವಣೆಯನ್ನು ಪ್ರಹಸನದ ಮಟ್ಟಕ್ಕೆ ಇಳಿಸಿದೆ. ಫ್ಯಾಸಿಸ್ಟ್ ತೆರನ ದಾಳಿಗಳು ಸಾಂವಿಧಾನಿಕ ಖಾತರಿಗಳು ಮತ್ತು ಕಾನೂನಿನ ಆಳ್ವಿಕೆಯನ್ನು ಧ್ವಂಸ ಮಾಡಿವೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯಂತಹ ಚತುರ ತಂತ್ರಗಳು ಅದರ ಸಂಪೂರ್ಣ ವೈಫಲ್ಯವನ್ನು ಅಳಿಸಲು ಸಾಧ್ಯವಿಲ್ಲ. ತ್ರಿಪುರಾದ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಪಿಐ(ಎಂ) ಎಚ್ಚರಿಸಿದೆ.