ಮೇ 30ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ಪತ್ರಿಕಾಗೋಷ್ಟಿಯ ಸಂರ್ಭದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ನಾಯಕ ಶ್ರೀ ರಾಕೇಶ್ ಸಿಂಗ್ ಟಿಕಾಯತ್ ಹಾಗೂ ಶ್ರೀ ಯುದ್ಧವೀರ ಸಿಂಗ್ ಮುಂತಾದ ನಾಯಕರ ಮೇಲೆ ಕೆಲ ಬಿಜೆಪಿಯ ಹಾಗೂ ಆರ್ ಎಸ್ ಎಸ್ ಮೂಲದ ಗುಂಡಾಗಳು ಧಾಳಿ ನಡೆಸಿ ಹಲ್ಲೆ ಮಾಡಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.
ಕೂಡಲೇ ದಾಳಿಯಲ್ಲಿ ತೊಡಗಿದ ಗುಂಡಾಗಳ ಮೇಲೆ ಕಾನೂನು ಕ್ರಮವನ್ನು ಜರುಗಿಸಿ, ಕಾನೂನಿನ ಕ್ರಮವಹಿಸಲು ಒತ್ತಾಯಿಸುತ್ತೇವೆ.
ದೇಶದ ರೈತ ಚಳುವಳಿಯ ಒತ್ತಡದ ಹಿನ್ನೆಲೆಯಲ್ಲಿ ಸ್ವತಃ ಪ್ರಧಾನ ಮಂತ್ರಿಗಳು ಜಗತ್ತಿನ ಮುಂದೆ ತಪ್ಪಾಗಿದೆಯೆಂದು ಕೈ ಮುಗಿದು ಲೂಟಿಕೋರ ಕಾರ್ಪೋರೇಟ್ ಕಂಪನಿಗಳ ಪರವಾದ ಮತ್ತು ರೈತ ವಿರೋಧಿಯಾದ ಕೃಷಿಕಾಯ್ದೆಗಳನ್ನು ವಾಪಾಸ್ಸು ಪಡೆದುಕೊಂಡ ನಂತರವೂ ಬಿಜೆಪಿ ಹಾಗೂ ಆರ್ಎಸ್ಎಸ್ ಹತಾಷೆಗೊಂಡಿರುವುದನ್ನು ಈ ದಾಳಿ ತೋರಿಸುತ್ತದೆ ಎಂದು ಸಿಪಿಐ(ಎಂ) ವಿಶ್ಲೇಷಿಸಿದೆ.
ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ