ಜೂನ್ 10ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದ ಅಭಿವೃದ್ಧಿ ಹಾಗೂ ಸೌಹಾರ್ಧತೆಯ ಕುರಿತು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮಗೆ ಯಾವುದೇ ರೀತಿಯ ಹೊಣೆಗಾರಿಕೆಯಿಲ್ಲವೆಂದು, ಜವಾಬ್ದಾರಿ ಹೀನ ಸಂಕುಚಿತ ಅಧಿಕಾರದಾಹಿ ರಾಜಕಾರಣಕ್ಕೆ ಅಂಟಿಕೊಂಡುದುದೇ, ಮೂರು ರಾಜ್ಯಸಭಾ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲು ಕಾರಣವಾಗಿದೆ.
ಬಿಜೆಪಿ ಗೆಲುವಿನಿಂದ ಮತ್ತು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹೊಣೆಗೇಡಿ ರಾಜಕಾರಣದಿಂದ ರಾಜ್ಯದ ಜನತೆ ಆತಂಕಕ್ಕೀಡಾಗುವಂತಾಗಿದೆ.
ರಾಜ್ಯ ಹಾಗೂ ಒಕ್ಕೂಟ ಸರಕಾರಗಳ ಮತ್ತು ಬಿಜೆಪಿ ಹಾಗೂ ಆರ್ಎಸ್ಎಸ್ ಗಳ ಸರ್ವಾಧಿಕಾರ, ಜನ ವಿರೋಧಿ ನೀತಿಗಳು ಮತ್ತು ಕೋಮುವಾದವು ರಾಜ್ಯದ ಜನತೆಯಲ್ಲಿ ತೀವ್ರ ಅಸಮಾಧಾನ ಉಂಟು ಮಾಡಿರುವಾಗ, ಜಾತ್ಯಾತೀತ ಶಕ್ತಿಗಳು ಜವಾಬ್ದಾರಿಯುತವಾಗಿ, ಜನತೆಯ ಆತಂಕ ನಿವಾರಣೆಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಸಿಪಿಐ(ಎಂ) ಎಚ್ಚರಿಸುತ್ತದೆ.
ಯು.ಬಸವರಾಜ, ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ