ಕೇರಳ ಬಾಂಬ್‍ ಸ್ಫೋಟದ ಬಗ್ಗೆ ಕೇಂದ್ರ ಮಂತ್ರಿಗಳ ಸತ್ಯಾಸತ್ಯ ವಿವೇಚನೆಯಿಲ್ಲದ ಟಿಪ್ಪಣಿಗಳು- ಸಿಪಿಐ(ಎಂ) ಕೇಂದ್ರ ಸಮಿತಿ ಖಂಡನೆ

ಕೇರಳದ ಎರ್ನಾಕುಲಂನ ಕನ್ವೆನ್ಷನ್ ಸೆಂಟರ್‌ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳಲ್ಲಿ ಮೂವರು ಸತ್ತಿದ್ದಾರೆ, ಹಲವರಿಗೆ ಗಾಯಗಳಾಗಿವೆ. ಇದನ್ನು ಬಲವಾಗಿ ಖಂಡಿಸಿರುವ ಕೇಂದ್ರ ಸಮಿತಿಯು, ರಾಜ್ಯ ಪೊಲೀಸರು ಈಗಾಗಲೇ ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ ಎಂದು ಗಮನಿಸುತ್ತಲೇ,  ಕೇಂದ್ರ ಸಂಪುಟ ಸಚಿವರೊಬ್ಬರು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳದೆ ಸಾಮಾಜಿಕ ಮಾಧ್ಯಮದಲ್ಲಿ ಕೇರಳ ಮತ್ತು ಅದರ ಜನರ ವಿರುದ್ಧ ಕೋಮು ದೂಷಣೆಗಳನ್ನು ತೂರಿದ್ದಾರೆ ಎಂದು ಖಂಡಿಸಿದೆ. ಕೇರಳದ ವಿಶಿಷ್ಟವಾದ ಮತ್ತು ಸರಿಸಾಟಿಯಿಲ್ಲದ ಸಾಮಾಜಿಕ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಅಂಶಗಳ ವಿರುದ್ಧ ರಾಜ್ಯದ ಜನರು ಎಂದಿನಂತೆ ಎದ್ದು ನಿಲ್ಲಬೇಕು  ಕೇರಳದ ಜನತೆಗೆ ಕೇಂದ್ರ ಸಮಿತಿಯು ಕರೆ ನೀಡಿದೆ.

ಅಕ್ಟೋಬರ್‍ 27ರಿಂದ 29 ರ ವರೆಗೆ ನವದೆಹಲಿಯಲ್ಲಿ ನಡೆದ ಕೇಂದ್ರ ಸಮಿತಿಯ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಇದನ್ನು ತಿಳಿಸಿದೆ.

ಇದಲ್ಲದೆ ಸಿಪಿಐ(ಎಂ) ಕೇಂದ್ರ ಸಮಿತಿಯು ಪ್ಯಾಲೆಸ್ತೀನ್ ಜನರು ತಾಯ್ನಾಡಿಗಾಗಿ ಮತ್ತು ಇಸ್ರೇಲಿ ನರಮೇಧದ ಆಕ್ರಮಣದ ವಿರುದ್ಧ ನಡೆಸುತ್ತಿರುವ ಹೋರಾಟದೊಂದಿಗೆ ಸೌಹಾರ್ದ ವ್ಯಕ್ತಪಡಿಸುವ ಕಾರ್ಯಾಚರಣೆಗಳನ್ನು ಹೆಚ್ಚಿಸಬೇಕು ಎಂದು ಪಕ್ಷದ ಎಲ್ಲಾ ಘಟಕಗಳಿಗೆ ಕರೆ ನೀಡಿದೆ.

ಕೇಂದ್ರ ಸಮಿತಿಯ ಹೇಳಿಕೆಯ ಇತರ ಅಂಶಗಳನ್ನು ಈ ಮುಂದೆ ಕೊಡಲಾಗಿದೆ:

ಪ್ಯಾಲೆಸ್ಟೀನಿಯನ್ನರ ಮೇಲೆ ಇಸ್ರೇಲ್‍ನ ನರಮೇಧದ ಆಕ್ರಮಣಗಳು

ಮಾನವೀಯ ದೃಷ್ಟಿಯ ಕದನ ವಿರಾಮ, ಎಲ್ಲಾ ನಾಗರಿಕರಿಗೆ ರಕ್ಷಣೆ ಮತ್ತು ತಕ್ಷಣದ ಮಾನವೀಯ ನೆಲೆಯಲ್ಲಿ ನೆರವಿಗೆ ಕರೆ ನೀಡುವ ವಿಶ್ವ ಸಂಸ್ಥೆಯ ನಿರ್ಣಯಕ್ಕೆ ಮತ ನೀಡಲು ಮೋದಿ ಸರ್ಕಾರ ನಿರಾಕರಿಸಿದ್ದನ್ನು ಕೇಂದ್ರ ಸಮಿತಿ ತೀವ್ರವಾಗಿ ಖಂಡಿಸಿದೆ. ಮೋದಿ ಸರ್ಕಾರದ ಗೈರುಹಾಜರಿ ಮತ್ತು ಸಾಮ್ರಾಜ್ಯಶಾಹಿ ಯುದ್ಧಕೋರರ ಪಕ್ಷ ವಹಿಸಿರುವುದು  ಪ್ಯಾಲೆಸ್ತೀನ್ ಗುರಿಸಾಧನೆಗೆ  ಭಾರತದ ಬೆಂಬಲದ ಇತಿಹಾಸ ಮತ್ತು ಪರಂಪರೆಗೆ ವಿರುದ್ಧವಾಗಿದೆ. ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ನಿಲ್ಲುವುದಾಗಿ ಹೇಳಿರುವ ಕೇಂದ್ರ ಸಮಿತಿಯು, ಇಸ್ರೇಲ್  ಎಲ್ಲಾ ಅಂತರರಾಷ್ಟ್ರೀಯ ಕಾನೂನುಗಳನ್ನು ನಿರ್ಲಜ್ಜವಾಗಿ ಉಲ್ಲಂಘಿಸಿ ನಡೆಸುತ್ತಿರುವ ನರಮೇಧಕಾರೀ ಯುದ್ಧದ ವಿರುದ್ಧ ಪ್ಯಾಲೆಸ್ಟೈನಿನ ನರಳುತ್ತಿರುವ ಜನರಿಗೆ ಸಿಪಿಐ(ಎಂ)ನ ಸೌಹಾರ್ದವನ್ನು  ವ್ಯಕ್ತಪಡಿಸಿತು. ಇಲ್ಲಿಯವರೆಗೆ, ಅಧಿಕೃತವಾಗಿ, 8000 ಜನರು ಕೊಲ್ಲಲ್ಪಟ್ಟಿದ್ದಾರೆ, ಅವರಲ್ಲಿ 4000 ಮಕ್ಕಳು ಮತ್ತು ಗಾಜಾದಲ್ಲಿ ಮಾತ್ರವಲ್ಲದೆ ಪಶ್ಚಿಮ ದಂಡೆಯಲ್ಲಿಯೂ ಸಹ ಹತ್ಯೆಗಳು ವರದಿಯಾಗುತ್ತಿದ್ದು, ಪ್ರತಿದಿನವೂ ಸತ್ತವರ, ಗಾಯಗೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಬೆಳೆಯುತ್ತಿರುವ ಬೃಹತ್ ಜಾಗತಿಕ ಸಾರ್ವಜನಿಕ ಪ್ರತಿಭಟನೆಗಳ ಭಾಗವಾಗಿ, ಸಿಪಿಐ(ಎಂ) ಕೂಡ ಇಸ್ರೇಲ್ ತಕ್ಷಣವೇ ಕದನ ವಿರಾಮವನ್ನು ಘೋಷಿಸಬೇಕು ಮತ್ತು 1967ರ ಮೊದಲಿನ ಪೂರ್ವದ ಗಡಿಗಳೊಂದಿಗೆ, ರಾಜಧಾನಿಯಾಗಿ ಪೂರ್ವ ಜೆರುಸಲೆಮನ್ನು ರಾಜಧಾನಿಯಾಗಿ ಹೊಂದಿರುವ ಪ್ಯಾಲೆಸ್ಟೀನಿಯನ್ ಪ್ರಭುತ್ವ ಸ್ಥಾಪನೆಯಾಗಬೇಕು ಎಂದು ಆದೇಶಿಸುವ ವಿಶ್ವಸಂಸ್ಥೆಯ 2-ಪ್ರಭುತ್ವ  ಪರಿಹಾರದ ಅನುಷ್ಠಾನವಾಗಬೇಕು ಎಂದು ಆಗ್ರಹಿಸಿದೆ .

ವಿಧಾನಸಭೆ ಚುನಾವಣೆಗಳು

ವಿಧಾನಸಭೆ ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಪರಿಸ್ಥಿತಿ ಕುರಿತು ಕೇಂದ್ರ ಸಮಿತಿ ಚರ್ಚೆ ನಡೆಸಿತು. ರಾಜಸ್ಥಾನದಲ್ಲಿ ಇಬ್ಬರು ಹಾಲಿ ಸಿಪಿಐ(ಎಂ) ಶಾಸಕರನ್ನು ಒಳಗೊಂಡಂತೆ ರಾಜ್ಯ ಸಮಿತಿಯು ಪ್ರಸ್ತಾಪಿಸಿದ 17 ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಸಮಿತಿ ಅನುಮೋದಿಸಿತು. ಛತ್ತೀಸ್‌ಗಢದಲ್ಲಿ ಪಕ್ಷವು ಮೂರು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ; ಮಧ್ಯಪ್ರದೇಶದಲ್ಲಿ ಪಕ್ಷವು ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ತೆಲಂಗಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.

ಮಣಿಪುರ

ಮಣಿಪುರದಲ್ಲಿ ಪರಿಸ್ಥಿತಿ ಹದಗೆಡುತ್ತಲೇ ಇದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ಮತ್ತು ಬಿಜೆಪಿಯ ಡಬಲ್ ಇಂಜಿನ್ ಸರ್ಕಾರದ ಸಂಪೂರ್ಣ ವೈಫಲ್ಯವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಇಂತಹ ಧ್ರುವೀಕರಣವನ್ನು ಧಾರ್ಮಿಕ ಅಸ್ಮಿತೆಗಳೊಂದಿಗೆ ಬೆರೆಸುವ ಮೂಲಕ ರಾಜ್ಯದಲ್ಲಿ ಜನಾಂಗೀಯ ಧ್ರುವೀಕರಣಕ್ಕೆ ಕೋಮು ಬಣ್ಣ ನೀಡಲಾಗುತ್ತಿದೆ.

ಅಧಿಕೃತವಾಗಿ, ರಾಜ್ಯ ಪೊಲೀಸರು ಸಾವಿನ ಸಂಖ್ಯೆ 175 ಎಂದು ಘೋಷಿಸಿದ್ದಾರೆ (ವಾಸ್ತವದಲ್ಲಿ, ಈ ಸಂಖ್ಯೆ ಇನ್ನೂ  ಹೆಚ್ಚಾಗಿದೆ.) ಮತ್ತು ಕನಿಷ್ಠ 96 ದೇಹಗಳು ದಾವೇದಾರರು ಇಲ್ಲದೆ ಉಳಿದಿವೆ, ಇದಲ್ಲದೆ ಇನ್ನೂ ಮಂದಿ 32 ಮಂದಿ ಕಾಣೆಯಾಗಿದ್ದಾರೆ ಎಂದು ಅಧಿಕೃತವಾಗಿ ಪಟ್ಟಿ ಮಾಡಲಾಗಿದೆ. ಅಧಿಕೃತ ದಾಖಲೆಗಳು 4,786 ಮನೆಗಳು ಮತ್ತು 386 ಧಾರ್ಮಿಕ ಸ್ಥಳಗಳು ಸೇರಿದಂತೆ 5,172 ಬೆಂಕಿ ಹಚ್ಚಿದ  ಪ್ರಕರಣಗಳು ನಡೆದಿವೆ ಎಂದು ತೋರಿಸುತ್ತವೆ. ಒಟ್ಟು 5,668 ಬಂದೂಕುಗಳನ್ನು ಲೂಟಿ ಮಾಡಲಾಗಿದ್ದು, ಇವುಗಳಲ್ಲಿ 1,329 ಮಾತ್ರ ವಾಪಾಸು ಪಡೆಯಲಾಗಿದೆ.

ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ತಕ್ಷಣವೇ ತೆಗೆದುಹಾಕಬೇಕು ಮತ್ತು ಮಣಿಪುರದಲ್ಲಿ ನಡೆಯುತ್ತಿರುವ ಧ್ವಂಸಕಾರ್ಯವನ್ನು  ನಿಲ್ಲಿಸಬೇಕು.

ಜನರ ಮೇಲೆ ಆರ್ಥಿಕ ಹೊರೆಗಳು ಬೆಳೆಯುತ್ತಿವೆ

ಮೋದಿ ಪ್ರಚಾರ ಯಂತ್ರ ಸೃಷ್ಟಿಸಿರುವ  ಸುಳ್ಳು ದಾವೆಗಳನ್ನು ಭೇದಿಸಿ, ಹತೋಟಿಗೆ ಬಾರದ ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದಾಗಿ  ಜನಗಳ ವರಮಾನ ಮತ್ತು ಹಣಕಾಸು ಆಸ್ತಿಗಳು 2020-21 ಮತ್ತು 2022-23 ರ ನಡುವೆ ಜಿಡಿಪಿಯ ಶೇಕಡಾ 11.5 ರಿಂದ ಶೇಕಡಾ 5.1 ಕ್ಕೆ ಕುಸಿದಿವೆ. ಇದರಿಮದ ಕುಟಂಬಗಳ ಸಾಲದ ಹೊರೆ ತೀವ್ರ ಏರುವಂತಾಗಿದೆ.

ಈರುಳ್ಳಿ ಬೆಲೆಗಳು ಗಗನಕ್ಕೇರುತ್ತಿವೆ, MGNREGA ಮನರೇಗಕ್ಕೆ ಹಣನೀಡಿಕೆಯ ಅಭಾವ ಮುಂದುವರೆಯುತ್ತಿರುವುದು ಗ್ರಾಮೀಣ ಸಂಕಷ್ಟಕ್ಕೆ ಕಾರಣವಾಗುತ್ತಿದೆ ಮತ್ತು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತದ ಸ್ಥಾನಮಾನವು 125 ದೇಶಗಳಲ್ಲಿ 111 ರ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಒಂದು ರಾಷ್ಟ್ರ-ಒಂದು ಚುನಾವಣೆ

ಈ ಪ್ರಸ್ತಾವನೆಯನ್ನು ಜಾರಿಗೆ ತರಲು ಭಾರತದ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯು ಕೆಲವು ತಿಂಗಳಲ್ಲಿ ನಡೆಯಬೇಕಾಗಿರುವ 2024 ಸಾರ್ವತ್ರಿಕ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಈಗ ಜನವರಿ 18 ರೊಳಗೆ ಅಭಿಪ್ರಾಯವನ್ನು ಲಿಖಿತವಾಗಿ ಕೊಡುವಂತೆ ರಾಜಕೀಯ ಪಕ್ಷಗಳನ್ನು ಕೇಳಿದೆ. ಈ ಪ್ರಸ್ತಾವನೆ ವಿರುದ್ಧ ಕೇಂದ್ರ ಸಮಿತಿ ಸ್ಪಷ್ಟ ನಿಲುವು ತಳೆದಿದೆ. ಈ ಪ್ರಸ್ತಾವನೆಯು ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ತತ್ವದ ಮೇಲಿನ ಅವಳಿ ದಾಳಿಯಾಗಿದೆ. ಇದಕ್ಕೆ ಸಂವಿಧಾನಕ್ಕೆ ಗಮನಾರ್ಹ ತಿದ್ದುಪಡಿಗಳಲ್ಲದೆ, ಲೋಕಸಭೆ ಚುನಾವಣೆಗಳೊಂದಿಗೆ ಏಕಕಾಲದಲ್ಲಿ ನಡೆಸುವಂತಾಗಲು ರಾಜ್ಯವಿಧಾನ ಸಭೆಗಳ ಕಾರ್ಯಾವಧಿಯನ್ನು  ಮೊಟಕುಗೊಳಿಸಬೇಕಾಗುತ್ತದೆ ಅಥವಾ ವಿಸ್ತರಿಸಬೇಖಾಗುತ್ತದೆ. ಸದನದಲ್ಲಿ ಸರ್ಕಾರವು ತನ್ನ ಬಹುಮತವನ್ನು ಕಳೆದುಕೊಂಡಾಗ, ಅದರ ಮುಂದುವರಿಕೆ ಕಾನೂನುಬಾಹಿರವಾಗಿರುತ್ತದೆ. ಸರ್ಕಾರವನ್ನು ಆಯ್ಕೆ ಮಾಡುವ ಜನರ ಹಕ್ಕನ್ನು ನಿರಾಕರಿಸುವ ಕೇಂದ್ರದ ಆಡಳಿತವನ್ನು ಹೇರಿದರೆ ಅದು ಪ್ರಜಾಪ್ರಭುತ್ವ ವಿರೋಧಿಯಾಗಿದೆ.

ಜಾತಿ ಗಣತಿ

2021 ರ ಈಗಾಗಲೇ ಬಹಳ ಹಿಂದೆಯೇ ನಡೆಯಬೇಕಾಗಿದ್ದ ಸಾಮಾನ್ಯ ಜನಗಣತಿಯೊಂದಿಗೆ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಲೆಕ್ಕ ಹಾಕುವ ಜಾತಿ ಗಣತಿಯನ್ನು ನಡೆಸುವಂತೆ ಕೇಂದ್ರ ಸಮಿತಿಯು ಮೋದಿ ಸರ್ಕಾರವನ್ನು ಕೇಳಿದೆ. ಮೀಸಲಾತಿ ಸೇರಿದಂತೆ ಕಾನೂನಾತ್ಮವಾಗಿ ದೊರೆಯಬೇಕಾದವುಗಳು  ಅವಕ್ಕೆ  ಹೆಚ್ಚು ಅರ್ಹರಾದ ಎಲ್ಲರಿಗೂ ತಲುಪುವಂತೆ ಮಾಡಲು ಇಂತಹ ಜಾತಿ ಗಣತಿ ಅಗತ್ಯವಾಗಿದೆ.

ಬಿಹಾರವು ರಾಜ್ಯ ಮಟ್ಟದ ಜಾತಿ ಸಮೀಕ್ಷೆಯನ್ನು ನಡೆಸಿದೆ ಮತ್ತು ಕೆಲವು ಇತರ ರಾಜ್ಯಗಳು ಹಾಗೆ ಮಾಡುವ ಉದ್ದೇಶವನ್ನು ಘೋಷಿಸಿವೆ. ರಾಜ್ಯ ಮಟ್ಟದ ಸಮೀಕ್ಷೆಗಳನ್ನು ನಡೆಸುವ ನಿರ್ಧಾರವು ಚುನಾಯಿತ ರಾಜ್ಯ ಸರ್ಕಾರಗಳ ಪರಮಾಧಿಕಾರವಾಗಿದೆ. ಆದಾಗ್ಯೂ, ಇವುಗಳು ಅಖಿಲ ಭಾರತ ಜಾತಿ ಗಣತಿಗೆ ಪರ್ಯಾಯವಾಗಲು ಸಾಧ್ಯವಿಲ್ಲ, ಇದು ಅರ್ಹ ಸೌಲಭ್ಯಗಳ ವಿನೀಡಿಕೆಯನ್ನು ನಿರ್ಧರಿಸಲು ಅತ್ಯಗತ್ಯ ಆಧಾರವಾಗಿದೆ.

ಕೇಂದ್ರ ಸಮಿತಿ  ಕರೆಗಳು

• ತಾಯ್ನಾಡಿಗಾಗಿ ಮತ್ತು ಇಸ್ರೇಲಿ ನರಮೇಧದ ಆಕ್ರಮಣದ ವಿರುದ್ಧ ಪ್ಯಾಲೆಸ್ತೀನ್ ಜನರ ಹೋರಾಟದೊಂದಿಗೆ ಸೌಹಾರ್ದ ಕಾರ್ಯಾಚರಣೆಗಳನ್ನು ಹೆಚ್ಚಿಸಬೇಕು ಎಂದು ಪಕ್ಷದ ಎಲ್ಲಾ ಘಟಕಗಳಿಗೆ ಕೇಂದ್ರ ಸಮಿತಿಯು ಕರೆ ನೀಡಿದೆ.

• ವಿದ್ಯುಚ್ಛಕ್ತಿಯನ್ನು ಖಾಸಗೀಕರಣಗೊಳಿಸುವ ಪ್ರಯತ್ನದಲ್ಲಿ, ಮೋದಿ ಸರ್ಕಾರವು ವಿದ್ಯುತ್ ಗ್ರಾಹಕರಿಗೆ ಪ್ರಿಪೇಯ್ಡ್ ವ್ಯವಸ್ಥೆಗಳೊಂದಿಗೆ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಮುಂದಾಗಿದೆ. ಈ ಮೂಲಕ ಹೆಚ್ಚಿನ ದರಗಳ ಮೂಲಕ ಜನತೆಯ ಮೇಲೆ ತೀವ್ರ ಸಂಕಷ್ಟಗಳನ್ನು ಹೇರಿ, ವಿದ್ಯುತ್ ಉತ್ಪಾದನೆಯನ್ನು ಬರಿಷ್ಟ ಲಾಭ ಗಳಿಕೆಗಾಗಿ ಖಾಸಗಿ ಸಂಸ್ಥೆಗಳಿಗೆ  ಹಸ್ತಾಂತರಿಸಲು ಅದು ಮುಂದಾಗಿದೆ. ಇದರಿಂದ ಬಡವರು ಮತ್ತು ರೈತರ ಮೇಲೆ ಅಸಹನೀಯ ಹೊರೆ ಬೀಳಲಿದೆ. ಎಲ್ಲೆಲ್ಲಿ ಇಂತಹ ಮೀಟರ್ ಅಳವಡಿಕೆ ಜಾರಿಯಾಗುತ್ತಿದೆಯೋ ಅಲ್ಲಲ್ಲಿ ಅದರ ಅಳವಡಿಕೆಯನ್ನು ತಡೆಯಲು ಪ್ರತಿಭಟನಾ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು.

• ನವೆಂಬರ್ 26-28 ರ ನಡುವೆ ದೇಶಾದ್ಯಂತ ನಡೆಯುವ ಕಿಸಾನ್-ಮಜ್ದೂರ್ ಮಹಾಪಡಾವ್‌ಗೆ ಪಕ್ಷದ ಬೆಂಬಲವನ್ನು ವ್ಯಕ್ತಪಡಿಸಲು ಕೇಂದ್ರ ಸಮಿತಿಯು ನಿರ್ಧರಿಸಿದೆ.

• ಡಿಸೆಂಬರ್ 4, 2023 ರಂದು ದಲಿತ ಸಂಘಟನೆಗಳು ಮತ್ತು ವೇದಿಕೆಗಳು ನೀಡಿದ ಸಂಸದ್‍ ಚಲೋ ಕರೆಗೆ ಬೆಂಬಲ ಮತ್ತು ಸೌಹಾರ್ದವನ್ನು ನೀಡಲು ಕೇಂದ್ರ ಸಮಿತಿಯು ನಿರ್ಧರಿಸಿದೆ.

Leave a Reply

Your email address will not be published. Required fields are marked *