ಮೋದಿ ಸರ್ಕಾರದ ಸುಳ್ಳು, ಹಸಿಸುಳ್ಳು ಮತ್ತು ಭರ್ಜರಿ ಸುಳ್ಳು-2 : ನಿರುದ್ಯೋಗ : ಎರಡು ಕೋಟಿ ಉದ್ಯೋಗಗಳು ಎಲ್ಲಿ?

ಘೋಷಣೆಗಳು

2014 ರ ಲೋಕಸಭಾ ಚುನಾವಣೆಗಳ ಪ್ರಚಾರದ ಸಂದರ್ಭದಲ್ಲಿ ಮೋದಿ ಅವರು ತಾವು ಚುನಾಯಿತರಾದರೆ ದೇಶದಲ್ಲಿ ವರ್ಷಕ್ಕೆ 2 ಕೋಟಿಯಷ್ಟು ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು.  

2019 ರ್ ಏಪ್ರಿಲ್ 27 ರಂದು ಟಿ ವಿ ಯಲ್ಲಿ ಮೋದಿಯವರು  ಹೇಳಿದ್ದು: ‘ ಉದ್ಯೋಗಿಗಳ ಪ್ರಾವಿಡೆಂಟ್ ಫಂಡ್ (ಇ.ಪಿ.ಎಫ್.ಒ) ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ  ಪ್ರತಿ ವರ್ಷ 2.5 ಕೋಟಿಯಷ್ಟು ಉದ್ಯೋಗಗಳು ಸೃಷ್ಟಿ ಆಗಿವೆ’.

ವಾಸ್ತವ

2016-17 ರಲ್ಲಿ ಇಡೀ ದೇಶದಲ್ಲಿ 41.27 ಕೋಟಿಯಷ್ಟು ಜನ ಎಲ್ಲ ಬಗೆಯ ಉದ್ಯೋಗಗಳಲ್ಲಿ- ಕೃಷಿಯಿಂದ ಹಿಡಿದು ಕೈಗಾರಿಕೆ ಮತ್ತು ಸೇವೆಗಳಲ್ಲಿ ತೊಡಗಿಸಿಕೊಂಡವರು, ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಸೇರಿ ಇದ್ದರು. 2022-23 ರಲ್ಲಿ ಈ ಸಂಖ್ಯೆ 40.57 ಕೋಟಿಗೆ  ಇಳಿದಿದೆ ಅಂದರೆ ಸುಮಾರು 70 ಲಕ್ಷಗಳಷ್ಟು ಉದ್ಯೋಗಗಳ ನಷ್ಟ ಆಗಿದೆ ಎಂದು ಅರ್ಥ.

Text Box: ದೇಶದಲ್ಲಿ ನೀರುದ್ಯೋಗದ ಪ್ರಮಾಣ ಮತ್ತು ಅದರಿಂದ ಯುವ ಜನತೆಯಲ್ಲಿ ಮೂಡಿರುವ ಹತಾಶೆ ಈ ಕೆಳಗಿನ ಉದಾಹರಣೆಯಿಂದ ಸ್ಪಷ್ಟವಾಗುತ್ತದೆ. ಉತ್ತರ ಪ್ರದೇಶದ ಸರಕಾರ ಫೆಬ್ರುವರಿ ಮಧ್ಯದಲ್ಲಿ 60 ಸಾವಿರ  ಪೊಲೀಸ್ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ನೀಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ 48 ಲಕ್ಷ ಯುವಜನರು ತುಂಬಿದ ಟ್ರೈನು, ಬಸ್ಸುಗಳಲ್ಲಿ ಪ್ರಯಾಣಿಸಿ ಪ್ಲಾಟ್ ಫಾರಂಗಳಲ್ಲಿ ಮಲಗಿ  ಪರೀಕ್ಷಾ ಕೇಂದ್ರಗಳಿಗೆ ಬಂದರು. ಹೇಗೆಹೇಗೋ ಪರೀಕ್ಷೆ ಬರೆದ ನಂತರ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್  ಆಗಿರುವುದು ಗೊತ್ತಾಯಿತು. ಸರಕಾರ ಮತ್ತೊಮ್ಮೆ ಪರೀಕ್ಷೆ ನಡೆಸುವುದಾಗಿ ಘೋಷಿಸುವಂತೆ ಮಾಡಲು ಇವರು ಹಲವು ದಿನಗಳ ಕಾಲ ಪ್ರತಿಭಟನೆ  ನಡೆಸಬೇಕಾಯಿತು. ಈ ಪ್ರಕ್ರಿಯೆಯಲ್ಲಿ ಈ ಯುವ ಜನತೆ ಎಂತಹ ನೋವು ಅನುಭವಿಸಿದರೆಂಬುದು ಊಹಾತೀತ!!

ಪ್ರತಿ ವರ್ಷ ಸರಿ ಸುಮಾರು 80 ಲಕ್ಷ ಯುವಕರು ಪ್ರಾಯ ತುಂಬಿ ಉದ್ಯೋಗಾರ್ಥಿಗಳ ಪಡೆ ಸೇರುತ್ತಾರೆ. ಉದ್ಯೋಗಗಳು ಕಡಿಮೆಯಾಗುತ್ತಿರುವ  ಸ್ಥಿತಿಯಲ್ಲಿ ಈ ಯುವಜನತೆ ನಿರುದ್ಯೋಗಿಗಳ ಗುಂಪಿಗೆ ಸೇರುತ್ತಾರೆ.

ಉದ್ಯೋಗ ರಹಿತತೆ 2022-23 ರಲ್ಲಿ ಶೇ 7.6 ರಷ್ಟು ಇದೆ. ಇದರ ಅರ್ಥ ಏನೆಂದರೆ ಸುಮಾರು 3 ಕೋಟಿಯಷ್ಟು  ಜನ ನೀರುದ್ಯೋಗಿಗಳು ಎಂದು ಅರ್ಥ. ಈ ಸಂಖ್ಯೆಯಲ್ಲಿ ಸಾಂಕ್ರಾಮಿಕದ ಭಯಂಕರ ದಿನಗಳಲ್ಲಿ ಏರಿದ  ಶೇ 25 ರ ನಿರುದ್ಯೋಗ ಪ್ರಮಾಣ ಸೇರಿಲ್ಲ.

ಈ ವೈಫಲ್ಯಗಳನ್ನು ಮುಚ್ಚಿ ಹಾಕಲು ಮೋದಿ ಮತ್ತು ಅವರ ಮಂತ್ರಿಗಳು ದಾರಿ ತಪ್ಪಿಸುವ ಅಂಕೆ ಸಂಖ್ಯೆ ಗಳನ್ನು ಉದುರಿಸುತ್ತಾ ಉದ್ಯೋಗ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಉದಾಹರಣೆಗೆ, ಪ್ರೋವಿಡೆಂಟ್ ಫಂಡ್ ಯೋಜನೆಯಲ್ಲಿನ ಸೇರ್ಪಡೆ ಮತ್ತು ಹೆಚ್ಚಳವು, ಹೊಸ ಉದ್ಯೋಗಗಳ ಸೃಷ್ಟಿಯ ಪರಿಣಾಮ ಎಂಬುದು ಶುದ್ಧ ಸುಳ್ಳು. ಯಾಕೆಂದರೆ ಸರಕಾರ ಈ ರೀತಿಯ ಪ್ರೋವಿಡೆಂಟ್ ಫಂಡ್ ಸೇರ್ಪಡೆಗೆ ಪ್ರೋತ್ಸಾಹ ನೀಡಿದಾಗ ಇರುವ ಉದ್ಯೋಗಿಗಳು ಫಂಡ್ ಗೆ ಸೇರ್ಪಡೆ ಆದರು. ಅಲ್ಲದೆ ಉಚ್ಚ ನ್ಯಾಯಾಲಯದ ತೀರ್ಪೊಂದು ಫಂಡ್ ಗೆ ಸೇರುವುದು ಕಡ್ಡಾಯ ಎಂದು ಹೇಳಿದಾಗ ಸೇರ್ಪಡೆ ಪ್ರಮಾಣ ಉಕ್ಕಿತು.

ಇನ್ನೊಂದು ಕೊಚ್ಚಿಕೊಳ್ಳುವಿಕೆ ಏನೆಂದರೆ ಮುದ್ರಾ ಯೋಜನೆಯಡಿ 2015-16 ಮತ್ತು 2022-23 ರ ಅವಧಿಯಲ್ಲಿ ನೀಡಿದ ಸಾಲಗಳಿಂದ ಉದ್ಯೋಗಗಳು ಹೆಚ್ಚಿದವು ಎಂಬುದು. ಆದರೆ ಈ ಸಾಲಗಳ ಸರಾಸರಿ ಗಾತ್ರ ಬರೀ 55,622 ರೂಪಾಯಿಗಳು ಮಾತ್ರ !! ಈ ಪ್ರಮಾಣದ ಸಾಲ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೇಗೆ ನೀಡಬಲ್ಲದು ಎಂಬ ಪ್ರಶ್ನೆಗೆ ಉತ್ತರ ಕೊಡುವವರಿಲ್ಲ!!

ಮೋದಿ ಅವರು ತಮ್ಮ ನೀತಿಗಳಿಂದಾಗಿ ಜನರು ಕೃಷಿಗಿಂತ ಹೆಚ್ಚು ಸುಭದ್ರ ಮತ್ತು ಉತ್ತಮ  ಉದ್ಯೋಗಗಳನ್ನು ಉದ್ದಿಮೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಪಡೆಯುತ್ತಾರೆ ಎಂದು ಭರವಸೆ ನೀಡುತ್ತಾರೆ. ಉದ್ದಿಮೆಗಳ ಉತ್ಪಾದನೆಯಿಂದ ಒಟ್ಟು ಉತ್ಪಾದನೆಗೆ ಸಿಗುವ ಕೊಡುಗೆ ಈಗಿನ ಶೇ 17 ರಿಂದ ಶೇ 25 ಕ್ಕೆ ಏರುತ್ತದೆ ಎಂದು ಅವರು ಹೇಳುತ್ತಾರೆ. ಆದರೆ ವಾಸ್ತವ ಏನೆಂದರೆ ಒಟ್ಟು ಉತ್ಪಾದನೆಗೆ ಉದ್ದಿಮೆಗಳ ಉತ್ಪಾದನೆಯ ಕೊಡುಗೆ ಶೇ 13  ಕ್ಕೆ 2020 ರ ಹೊತ್ತಿಗೆ ಕುಸಿದದ್ದು ಈಗಷ್ಟೇ  ಶೇ 17 ಕ್ಕೆ ಬರುತ್ತಿದೆ!!

ನೀರುದ್ಯೋಗದ ಸಮಸ್ಯೆ ಹೆಚ್ಚಾಗಿ ಜನರು ಹಳ್ಳಿಗಳಿಗೆ ಹೋಗಿ ಕೃಷಿಯ ಮೇಲೆ ಅವಲಂಬಿಸುವ ದುಸ್ಥಿತಿ ಉಂಟಾಗಿದೆ. ಕೃಷಿ ವಲಯ ಇಂತಹ ಹೊರೆಯಿಂದಾಗಿ ಕುಸಿಯುವ ಭೀತಿಯಲ್ಲಿದೆ. ಭಾರತದ ದುಡಿವ ಶಕ್ತಿಯ ಶೇ 46 ರಷ್ಟು ಕೃಷಿ ಅಥವಾ ಕೃಷಿ ಸಂಬಂದಿತ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಕೂಲಿಕಾರರು ಬಿಡಿಗಾಸಿಗಾಗಿ ಅದೂ ಹಂಗಾಮಿನಲ್ಲಿ ಮಾತ್ರ ದುಡಿಯುವ ಪರಿಸ್ಥಿತಿ ಇದೆ!! ಇವು ನಿಜದಲ್ಲಿ ನಿರುದ್ಯೋಗದ ರೂಪಗಳೇ ಆಗಿದ್ದರೂ ಈ ಎಲ್ಲವುಗಳನ್ನು ಉದ್ಯೋಗ ಎಂದೇ ಪರಿಗಣಿಸಲಾಗುತ್ತದೆ!!

2014-15 ರಲ್ಲಿ 5.8 ಕೋಟಿ ಜನ ಗ್ರಾಮೀಣ ಉದ್ಯೋಗ ಖಾತರಿ (ಮನರೇಗ) ಯೋಜನೆಯಡಿ  ಕೆಲಸ ಮಾಡುತ್ತಿದ್ದರು. ಈ ಸಂಖ್ಯೆ 2022-23 ರಲ್ಲಿ 8.8 ಕೋಟಿಗೆ ಏರಿತ್ತು. ಇವರಿಗೂ ಸರಾಸರಿ ವರ್ಷಕ್ಕೆ 50 ದಿನಗಳ ಉದ್ಯೋಗ ಮಾತ್ರ ದೊರೆಯಿತು. ಇವರಿಗೆ  ದಿನಕ್ಕೆ ದೊರೆತ ಕೂಲಿ ಬರೀ 237 ರೂಪಾಯಿಗಳು!! ಇಂತಹ ಕಷ್ಟಕರ ಮನರೇಗ ಯೋಜನೆಯ ಮೇಲೆ ಅವರ ಅವಲಂಬನೆ ಉದ್ಯೋಗ ಬಿಕ್ಕಟ್ಟು ಎಂತಹ ಘೋರವಾಗಿದೆ ಎಂಬುದರ ಕೈಗನ್ನಡಿ. ಇಂತಹ ಜೀವ ಉಳಿಸುವ ಯೋಜನೆಯಡಿಯೂ ನಿಧಿಯ ಕೊರತೆಯ ನೆವದಲ್ಲಿ ಕೆಲಸದ ಲಭ್ಯತೆ ನಿರಾಕರಿಸಲಾಗುತ್ತಿದೆ ಮತ್ತು ವೇತನವನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಜಾರಿಯನ್ನು ಹೇರಉವ ನೆಪದಲ್ಲಿ ತಡೆಹಿಡಿಯಲಾಗುತ್ತಿದೆ.

ಮಹಿಳೆಯರು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಇಲ್ಲಿ ಯಾತನೆ ಪಡುತ್ತಿದ್ದಾರೆ. ಅವರ ನಿರುದ್ಯೋಗ ಪ್ರಮಾಣ ಗ್ರಾಮೀಣ ಪ್ರದೇಶದಲ್ಲಿ ಪುರುಷರಿಗಿಂತ ಎರಡು ಪಟ್ಟು ಹೆಚ್ಚಾಗಿದ್ದರೆ, ನಗರ ಪ್ರದೇಶಗಳಲ್ಲಿ ಮೂರು ಪಟ್ಟು ಹೆಚ್ಚು!! ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ ಎಂಬ ಅಂಕೆ-ಸಂಖ್ಯೆ ಇತ್ತೀಚೆಗೆ ಬಿಡುಗಡೆ ಆಗಿದೆ. ಆದರೆ ಇವು ದಾರಿ ತಪ್ಪಿಸುವಂತಹವು. ಯಾಕೆಂದರೆ ಈ ಹೆಚ್ಚಳವನ್ನು  ಮಹಿಳೆಯರ ಸ್ವ-ಉದ್ಯೋಗ  ಮತ್ತು ವೇತನ ರಹಿತ ಕೆಲಸಗಳಲ್ಲಿ ತೋರಿಸಲಾಗಿದೆ. ಬೆಲೆಗಳು ಹೆಚ್ಚಿದಾಗ ತಮ್ಮ ಮತ್ತು ತಮ್ಮ ಕುಟುಂಬದ ಹೊಟ್ಟೆ ಹೊರೆಯುವ ಜವಾಬ್ದಾರಿ ಹೊರುವ ಮಹಿಳೆಯರು ಹಲವು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುವ ಪ್ರಯತ್ನ ಮಾಡುತ್ತಾರೆ. ನಿಜ ಅರ್ಥದಲ್ಲಿ ಕೆಲಸಗಳು ಇಲ್ಲವೇ ಇಲ್ಲ ಅಥವಾ ಇದ್ದರೆ ಅತೀ ಕಡಿಮೆ ಸಂಖ್ಯೆಯಲ್ಲಿ ಮಾತ್ರ ಎಂಬುದು ಇಂದಿನ ವಾಸ್ತವ.

ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿವಿಧ ಇಲಾಖೆಗಳಲ್ಲಿ ಹತ್ತಿರ ಹತ್ತಿರ 10 ಲಕ್ಷ ಉದ್ಯೋಗಗಳು ಖಾಲಿ ಇವೆ. ಇವು ಪೊಲೀಸ್ ಪಡೆ, ವಿಶ್ವ ವಿದ್ಯಾಲಯಗಳು, ಆಸ್ಪತ್ರೆಗಳು, ನ್ಯಾಯಾಂಗ ಬ್ಯಾಂಕುಗಳು ಇತ್ಯಾದಿ ಸಂಸ್ಥೆಗಳಲ್ಲಿ ಇವೆ. ಈ ಸಂಸ್ಥೆ/ ಇಲಾಖೆಗಳಲ್ಲಿ ಉದ್ಯೋಗ ಭರ್ತಿ ಮಾಡದೆ  ಪ್ರಧಾನ ಮಂತ್ರಿಗಳು ಕೆಲವು ಸೀಮಿತ ಉದ್ಯೋಗಗಳಿಗೆ ನೇಮಕಾತಿ ಪತ್ರ ತೆಗೆದು ತೋರಿಸುವ ನಾಟಕ ಮಾಡಿದ್ದಾರೆ. ಇದು ಅರ್ಥಹೀನ ಕೆಲಸ.

ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ರಾಜ್ಯಗಳ 41 ನೇಮಕಾತಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಈ ನೇಮಕಗಳಲ್ಲಿ 1.04 ಲಕ್ಷ ಉದ್ಯೋಗಗಳು ಲಭ್ಯವಿದ್ದವು. ಈ ಸೋರಿಕೆಯಿಂದಾಗಿ 1.4 ಕೋಟಿ ಉದ್ಯೋಗರಹಿತರಿಗೆ ತೊಂದರೆ ಆಗಿದೆ!! ಹಲವರು ಈ ಪ್ರಕ್ರಿಯೆ ಮುಂದುವರೆಯುವುದೆಂದಯ ಕಾಯುತ್ತಿದ್ದಾರೆ.

ರಾಜ್ಯ ಸರ್ಕಾರಗಳೂ- ಕೇರಳ ಹೊರತುಪಡಿಸಿ- ಖಾಲಿ ಹುದ್ದೆಗಳನ್ನು ಭರಿಸುತ್ತಿಲ್ಲ.

ಮೋದಿಯವರ ಶಿಕ್ಷಣ, ಆರೋಗ್ಯ ಮತ್ತು ಇತರ ಸೇವೆಗಳ ಖಾಸಗಿಕರಣ  ಮತ್ತು ಸಾರ್ವಜನಿಕ ಉದ್ದಿಮೆಗಳ ಮಾರಾಟ ಉದ್ಯೋಗಗಳನ್ನು ಕಡಿಮೆ ಮಾಡಿವೆ. ಅಷ್ಟೇ ಅಲ್ಲ, ಅವು ಅತೀ ಕಡಿಮೆ ವೇತನ ಮತ್ತು ಯಾವುದೇ ಸವಲತ್ತುಗಳಿಲ್ಲದ ಗುತ್ತಿಗೆ ಉದ್ಯೋಗಗಳನ್ನೂ ಹೆಚ್ಚು ಮಾಡಿದೆ!!

ಇಂತಹ ಸ್ಥಿತಿ ಸುಧಾರಿಸಲು ಏನು ಮಾಡಬಹುದು?

ಸಾರ್ವಜನಿಕ ಹೂಡಿಕೆಯನ್ನು ಸರಕಾರ ಹೆಚ್ಚಿಸಬೇಕು. ಅದು ಕೆಳಗಿನವುಗಳಿಗೆ ಬೆಂಬಲ ನೀಡಬೇಕು.

  • ಕನಿಷ್ಟ ಬೆಂಬಲ ಬೆಲೆ ನೀಡುವ ಮೂಲಕ ರೈತರಿಗೆ ಬೆಂಬಲ ನೀಡಬೇಕು
  • ಸುಭದ್ರ ಉದ್ಯೋಗ ಮತ್ತು ಉತ್ತಮ ವೇತನ ನೀಡುವ ಮೂಲಕ ಔದ್ಯೋಗಿಕ ಕಾರ್ಮಿಕರನ್ನು ಬೆಂಬಲಿಸಬೇಕು
  • ಕನಿಷ್ಟ ವೇತನ ಖಾತರಿ ಮತ್ತು ಹೆಚ್ಚಿನ ಉದ್ಯೋಗಗಳನ್ನು ಮನರೆಗ ಯೋಜನೆಯಡಿ ನೀಡುವ ಮೂಲಕ ಕೃಷಿ ಕೂಲಿ ಕಾರ್ಮಿಕರನ್ನು ಬೆಂಬಲಿಸಬೇಕು
  • ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳನ್ನು ಸರಕಾರ ಬೆಂಬಲಿಸಬೇಕು. ಯಾಕೆಂದರೆ ಅವು ಉದ್ದಿಮೆಗಳಲ್ಲಿನ ಶೇ 65 ರಷ್ಟು ಉದ್ಯೋಗಗಳನ್ನು ಅವು ನೀಡುತ್ತವೆ. ಜೊತೆಗೆ ಸಾರ್ವಜನಿಕ ಉದ್ದಿಮೆಗಳನ್ನು ಬೆಂಬಲಿಸಬೇಕು.
  • ವಿದೇಶಿ ಮತ್ತು ದೇಶೀ  ಕಾರ್ಪೊರೇಟ್ ಏಕಸ್ವಾಮ್ಯ ಬಂಡವಾಳವನ್ನು ಹದ್ದು ಬಸ್ತಿಗೆ ಒಳಪಡಿಸಬೇಕು.

Text Box: ನಿರುದ್ಯೋಗಿಗಳ ಹತಾಶೆ ಮತ್ತು ಸರ್ಕಾರದ ನಿರ್ಲಕ್ಷ್ಯ ಇತ್ತೀಚೆಗೆ 10 ಸಾವಿರ ಜನ ಕಟ್ಟಡ ಕಾರ್ಮಿಕರು  ಇಸ್ರೇಲ್ ನ ಯುದ್ಧ ಭೂಮಿಯಲ್ಲಿ ಕೆಲಸ ಮಾಡಲು ಹೋದ ಫೆಬ್ರುವರಿ ಮಧ್ಯದ ಘಟನೆ ಎತ್ತಿ ತೋರಿಸುತ್ತದೆ. ಇವರು ಬಹಿರಂಗವಾಗಿಯೇ ತಾವು ಈ ರೀತಿಯ ಅಪಾಯಕಾರಿ ನಿರ್ಧಾರ ತೆಗೆದುಕೊಳ್ಳುವ ಅನಿವಾರ್ಯತೆ ಇದೆ ಎಂಬ ನಿಲುವು ತಳೆದರು. ಸರಕಾರ ಈ ಜನರ ಜೀವವಿಮೆ ಮಾಡಿಸುವ ಗೋಜಿಗೂ ಹೋಗಲಿಲ್ಲ. ಇಂತಹ ಉದ್ಯೋಗ ಭರ್ತಿ(ನೇಮಕಾತಿ) ಘಟನೆ ಬಿ ಜೆ ಪಿ ಆಢಳಿತದಲ್ಲಿರುವ ಉತ್ತರ ಪ್ರದೇಶ ರಾಜ್ಯದಲ್ಲಿ ನಡೆಯಿತು!!  ಸರಕಾರ ಖಾಸಗಿಕರಣದ ನೀತಿಗಳನ್ನು ಕೈಬಿಡಬೇಕು. ಖಾಸಗಿ ವಲಯ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲಾರದು. 

ಆಕರಗಳು: ಸಿ.ಎಮ್.ಐ.ಈ; 2011 ರ ಜನಗಣತಿ; ಪಿ.ಎಲ್.ಎಫ್.ಎಸ್ 2022-23; ಎಮ್.ಒ.ಎಸ್.ಪಿ.ಐ; ಮುದ್ರಾ ಯೋಜನೆ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳ ಸಚಿವಾಲಯ; ಉದ್ಯೋಗಿಗಳ ಪ್ರೋವಿಡೆಂಟ್ ಫಂಡ್ ಸಂಸ್ಥೆ; ಪಾರ್ಲಿಮೆಂಟ್ ನಲ್ಲಿನ ಪ್ರಶ್ನೆಗಳು; ಇಂಡಿಯನ್ ಎಕ್ಸ್ ಪ್ರೆಸ್

ನಿರುದ್ಯೋಗದ ವಿರುದ್ಧ ಹೋರಾಡಿ!  ಬಿ ಜೆ ಪಿ ಯನ್ನು ಸೋಲಿಸಿ

Leave a Reply

Your email address will not be published. Required fields are marked *