ಪರಿಶಿಷ್ಟ ಜಾತಿಗಳ ಹಿಂದುಳಿದ ವಿಭಾಗಗಳನ್ನು ಒಳಗೊಳ್ಳಲು ಸರಕಾರಗಳು ಸೂಕ್ತ ಕ್ರಮಗಳನ್ನು ರೂಪಿಸಬೇಕು-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠವು (6-1 ಬಹುಮತದಿಂದ) ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣಕ್ಕೆ  ಅನುಮತಿಯಿದೆ ಎಂದು ಹೇಳಿದೆ. ಪರಿಶಿಷ್ಟ ಜಾತಿ ಪ್ರವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳಿಗೆ ಕೂಡ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಉಪ-ವರ್ಗದ  ಪ್ರಾತಿನಿಧ್ಯ ಅಸಮರ್ಪಕವಾಗಿದೆಯೆಂಬುದನ್ನು  ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ರಾಜ್ಯವು ಉಪ-ವರ್ಗೀಕರಣವನ್ನು ಸಮರ್ಥಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಪ್ರಕಾರ ಸರ್ಕಾರಗಳು ಈಗ ಪರಿಶಿಷ್ಟ ಜಾತಿಗಳ ಹಿಂದುಳಿದ ವಿಭಾಗಗಳಿಗೆ  ಅವರ ಪರಿಸ್ಥಿತಿಗಳನ್ನು ಉತ್ತಮಪಡಿಸಲು ಸೌಲಭ್ಯಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಪರಿಶಿಷ್ಟ ಜಾತಿಗಳೊಳಗಿನ  ಹಿಂದುಳಿದ ವಿಭಾಗಗಳನ್ನು ಅನ್ವಯಾತ್ಮಕ ಕ್ರಿಯೆಯಲ್ಲಿ ಒಳಗೊಳ್ಳುವುದನ್ನು ಖಚಿತಪಡಿಸಿ ಕೊಳ್ಳಲು ಸೂಕ್ತ ಕ್ರಮಗಳನ್ನು ರೂಪಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸರ್ಕಾರಗಳಿಗೆ ಕರೆ ನೀಡಿದೆ.

Leave a Reply

Your email address will not be published. Required fields are marked *