ಜನ ನಾಯಕ ಕಾಂ.ಸೀತಾರಾA ಯೆಚೂರಿಯವರಿಗೆ ಸಿಪಿಐ(ಎಂ) ರಾಜ್ಯ ಸಮಿತಿ ಭಾವ ಪೂರ್ಣ ಶ್ರದ್ಧಾಂಜಲಿ

ಸಿಪಿಐ ಎA ಪಕ್ಷದ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಕಾಂ.ಸೀತಾರಾA ಎಚೂರಿಯವರು ನಿಧನರಾದ ತೀವ್ರ ದುಃಖದಾಯಕ ಸಂಗತಿ ತಿಳಿಸಲು ವಿಷಾಧಿಸುತ್ತೇವೆ. ಅಗಲಿದ ಹಿರಿಯ ನಾಯಕನಿಗೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ಕರ್ನಾಟಕ ರಾಜ್ಯ ಸಮಿತಿ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತದೆ. ಅವರು ಹಿಡಿದ ಸಮಾಜ ಬದಲಾವಣೆಯ ದಾರಿಯಲ್ಲಿ ಮುನ್ನಡೆಯಲು ಸಿಪಿಐಎಂ ಕರ್ನಾಟಕ ರಾಜ್ಯ ಸಮಿತಿ ಬದ್ಧವಾಗಿದೆ.

ಕಾಂ.ಸೀತಾರಾA ಎಚೂರಿಯವರು ವಿದ್ಯಾರ್ಥಿ ದೆಸೆಯಿಂದಲೆ ಹೋರಾಟದ ಕಣಕ್ಕೆ ಧುಮುಕಿದ್ದು ಮಾತ್ರವಲ್ಲಾ ಅಖಿಲ ಭಾರತ ನಾಯಕರಾಗಿ ವಿದ್ಯಾರ್ಥಿ ಚಳುವಳಿಯನ್ನು ದೇಶವ್ಯಾಪಿಯಾಗಿ ಮುನ್ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾರ್ಕ್ಸವಾದಕ್ಕೆ ಆಕರ್ಷಿತರಾಗಿ, ಸಿಪಿಐಎಂ ಪಕ್ಷದ ಕಾರ್ಯಕರ್ತರಾಗಿ ಮತ್ತು ನಾಯಕರಾಗಿ ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ, ಸಮಾಜ ಪರಿವರ್ತನೆಗಾಗಿ ಮುಡಿಪಾಗಿಟ್ಟಿದ್ದರು. ನಿಸ್ವಾರ್ಥಿ, ನಿಗರ್ವಿ, ಮುತ್ಸದ್ಧಿ ಸಂಗಾತಿಯ ಅಗಲಿಕೆ ದೇಶದ ರಾಜಕಾರಣಕ್ಕೆ ಶೋಷಿತ ಸಮುದಾಯಕ್ಕೆ ಮತ್ತು ಮುಖ್ಯವಾಗಿ ಸಿಪಿಐಎಂ ಪಕ್ಷಕ್ಕೆ ಬಹುದೊಡ್ಡ ನಷ್ಠ ಉಂಟುಮಾಡಿದೆ.

ಕಳೆದ 9 ವರ್ಷಗಳಿಂದ ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಯಾಗಿ ಪಕ್ಷವನ್ನು ಮುನ್ನಡೆಸಿದ್ದರು. ಪಾರ್ಲಿಮೆಂಟ ನಲ್ಲಿ ರಾಜ್ಯ ಸಭಾ ಸದಸ್ಯರಾಗಿ ದೇಶದ ಸಮಗ್ರ ಅಭಿವೃದ್ಧಿ ಹಾಗು ಸಮಗ್ರತೆ, ಐಕ್ಯತೆಯ ಮೇಲೆ ನ್ಯಾಯಯುತ ವಿದ್ವತ್ ಪೂರ್ಣ ವಿಷಯಗಳನ್ನು ಮಂಡಿಸಿದ್ದಾರೆ. ಕಳೆದ ಲೋಕ ಸಭಾ ಚುನಾವಣೆಯ ಸಂದರ್ಭದಲ್ಲಿ ಇಂಡಿಯಾ ಕೂಟ ರಚನೆಯಲ್ಲಿ ಅದರ ನಿರ್ವಹಣೆಯಲ್ಲಿ ಪ್ರಧಾನ ಪಾತ್ರವಹಿಸಿದ್ದರು.

ತುರ್ತು ಪರಿಸ್ಥಿತಿಯ ಸಮಯದಲ್ಲಿ ಅದನ್ನು ವಿರೋಧಿಸಿ ನೇರವಾಗಿ ಇಂದಿರಾಗಾAಧಿಯವರನ್ನೇ ಎದುರಿಸಿದ ದಿಟ್ಟತನ ಅವರದು. ಅಂದಿನಿAದ ಅವರು ಭಾರತದಾದ್ಯಂತ ಬಹು ಬೇಡಿಕೆಯ ವಾಗ್ಮಿಯಾಗಿ ಪ್ರಸಿದ್ಧರಾಗಿದ್ದರು.

1996 ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ, ಸಂಯುಕ್ತ ರಂಗವನ್ನು ರೂಪಿಸುವಲ್ಲಿ ಸುರ್ಜೀತ್ ರವರೊಂದಿಗೆ ಮುಖ್ಯ ಪಾತ್ರ ವಹಿಸಿದ್ದರು. ದೇಶದ ಎಲ್ಲ ಸೆಕ್ಯುಲರ್ ಪಕ್ಷಗಳ ನಾಯಕರೊಡನೆ ಆತ್ಮಿಯ ಸಂಬAಧ ಬೆಸೆದಿದ್ದರು. ಇದು ಮೂರು ದಶಕಗಳಿಗಿಂತ ಹೆಚ್ಚು ಕಾಲ ಭಾರತದ ಸೆಕ್ಯುಲರ್ ಶಕ್ತಿಗಳನ್ನು ಬೆಸೆಯುವಲ್ಲಿ  ಮುಖ್ಯ ಪಾತ್ರ ವಹಿಸಿದ್ದಾರೆ.

ವಿಶ್ವದ ನೂರಾರು ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಆಪ್ತ ಸಂಬAಧವನ್ನು ಬೆಸೆದಿದ್ದರು. ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯೂರೋಪಿನ ಸಮಾಜವಾದಿ ದೇಶಗಳ ಕುಸಿತದ ಸಂದರ್ಭದಲ್ಲಿ ಮತ್ತು ನಂತರದ ದಿನಗಳಲ್ಲಿ ವಿಶ್ವ ಕಮ್ಯುನಿಸ್ಟ್ ಚಳುವಳಿಯ ಸೈದ್ಧಾಂತಿಕ ದೃಢತೆ ಮತ್ತು ಐಕ್ಯತೆಯನ್ನು ಸಾಧಿಸುವಲ್ಲಿ ಸಿಪಿಐಎಂ ವಹಿಸಿದ ಮುಖ್ಯ ಪಾತ್ರದಲ್ಲಿ ಯೆಚೂರಿಯವರ ಕಾರ್ಯ ನೆನಪಿಸಿಕೊಳ್ಳುವಂತಹದು.

ಜೆ.ಎನ್.ಯು ವಿದ್ಯಾರ್ಥಿ ಸಂಘಟನೆ ಸಾಮಾಜಿಕ ಬದ್ಧತೆಯುಳ್ಳ ಪ್ರಖರ ಬೌದ್ಧಿಕತೆಯ ವಿದ್ವಾಂಸರನ್ನು ರೂಪಿಸುವ, ವಿಶ್ವವಿದ್ಯಾಲಯದೊಳಗಿನ ಅಕಾಡೆಮಿಕ್ ಪ್ರಜಾಪ್ರಭುತ್ವದ ಮಾದರಿಯಾಗಿ ಹಾಕಿದ ಅಡಿಪಾಯ ಇಂದಿಗೂ ದೇಶದೊಳಗೆ ಮಾತ್ರವಲ್ಲ ವಿಶ್ವದೊಳಗೂ ಮಾದರಿಯಾಗಿದೆ. ಮಾರ್ಕ್ಸವಾದದ ಹಲವು ಆಯಾಮಗಳಲ್ಲಿ ಆಳವಾದ ಪರಿಣತಿ ಅವರನ್ನು ವಿಶ್ವದ ಮುಖ್ಯ ಮಾರ್ಕ್ಸವಾದಿ ಚಿಂತಕರನ್ನಾಗಿಸಿತ್ತು.

ಪ್ರಧಾನ ಕಾರ್ಯದರ್ಶಿ ಅಗಲಿಕೆಯ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ, ಪಕ್ಷದ ಕಛೇರಿಗಳ ಮುಂದೆ ಪಕ್ಷದ ದ್ವಜವನ್ನು ಅರ್ಧಕ್ಕಿಳಿಸಿ ಹಾಗು ಶ್ರದ್ಧಾಂಜಲಿ ಸಭೆಗಳನ್ನು ಸಂಘಟಿಸುವ ಮೂಲಕ ಅಗಲಿದ ನಾಯಕನಿಗೆ ಗೌರವ ಸಲ್ಲಿಸಲು ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ.

ಯು. ಬಸವರಾಜ

ಸಿ.ಪಿ.ಐ(ಎಂ) ರಾಜ್ಯ ಕಾರ್ಯದರ್ಶಿಗಳು

Leave a Reply

Your email address will not be published. Required fields are marked *