ಸಿಪಿಐ(ಎಂ) 24 ನೇಮಹಾಧಿವೇಶನ: 3ನೇ ದಿನದ ಪತ್ರಿಕಾ ಪ್ರಕಟಣೆ- ಏಪ್ರಿಲ್ 4, 2025

ಏಪ್ರಿಲ್ 3ರಂದು ಪ್ರಾರಂಭವಾದ 24ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ ಮತ್ತು ರಾಜಕೀಯ ವಿಮರ್ಶಾ ವರದಿಯ ಮೇಲಿನ ಚರ್ಚೆಗಳು. ಎಪ್ರಿಲ್‍ 4ರಂದು ಮುಂದುವರೆದವು. ಮಧ್ಯಾಹ್ನದವರೆಗೆ 36 ಪ್ರತಿನಿಧಿಗಳು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.

3ನೇ ದಿನದ ಮಧ್ಯಾಹ್ನದವರೆಗೆ ಇನ್ನೂ 5  ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಕೇರಳದಲ್ಲಿ ಎಲ್‌ಡಿಎಫ್ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ನಿರ್ಣಯವನ್ನು ಪೊಲಿಟ್ ಬ್ಯೂರೋ ಸದಸ್ಯ ಮತ್ತು ಪಶ್ಚಿಮ ಬಂಗಾಳ ರಾಜ್ಯ ಸಮಿತಿಯ ಕಾರ್ಯದರ್ಶಿ ಮೊಹಮ್ಮದ್ ಸಲೀಂ ಮಂಡಿಸಿದರು. ಇದನ್ನು ಕೇಂದ್ರ ಸಮಿತಿಯ ಸದಸ್ಯ ಮತ್ತು ತ್ರಿಪುರ ರಾಜ್ಯ ಸಮಿತಿಯ ಕಾರ್ಯದರ್ಶಿ ಜಿತೇಂದ್ರ ಚೌಧರಿ ಅನುಮೋದಿಸಿದರು.

ಚುನಾವಣಾ ಕ್ಷೇತ್ರ ಮರುವಿಂಗಡಣೆಯ ಕುರಿತ ನಿರ್ಣಯವನ್ನು ಪೊಲಿಟ್ ಬ್ಯೂರೋ ಸದಸ್ಯ ಜಿ.ರಾಮಕೃಷ್ಣನ್ ಮಂಡಿಸಿದರು ಮತ್ತು ಹಿಮಾಚಲ ಪ್ರದೇಶ ರಾಜ್ಯ ಸಮಿತಿಯ ಕಾರ್ಯದರ್ಶಿ ಸಂಜಯ್ ಚೌಹಾಣ್ ಅನುಮೋದಿಸಿದರು.

ಚುನಾವಣೆಗಳಲ್ಲಿ ಸ್ವತಂತ್ರ, ನ್ಯಾಯಯುತ ಮತ್ತು ಸಮಾನ ಅವಕಾಶದ ನಿರ್ಣಯವನ್ನು ಪೊಲಿಟ್ ಬ್ಯೂರೋ ಸದಸ್ಯ ನೀಲೋತ್ಪಲ್ ಬಸು ಮಂಡಿಸಿದರು ಮತ್ತು ಆಂಧ್ರಪ್ರದೇಶ ರಾಜ್ಯ ಸಮಿತಿಯ ಕಾರ್ಯದರ್ಶಿ ಹಾಗೂ ಕೇಂದ್ರ ಸಮಿತಿ ಸದಸ್ಯ ವಿ. ಶ್ರೀನಿವಾಸ ರಾವ್ ಅನುಮೋದಿಸಿದರು.

ಸಾರ್ವತ್ರಿಕ ಜನಗಣತಿ ಮತ್ತು ಜಾತಿ ಜನಗಣತಿಯನ್ನು ತಕ್ಷಣ ನಡೆಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಕೇಂದ್ರ ಸಮಿತಿ ಸದಸ್ಯ ಅವದೇಶ್ ಕುಮಾರ್ ಮಂಡಿಸಿದರು ಮತ್ತು ಟಿ.ಜ್ಯೋತಿ ಅನುಮೋದಿಸಿದರು.

ಒಂದು ರಾಷ್ಟ್ರ-ಒಂದು ಚುನಾವಣೆಯನ್ನು ವಿರೋಧಿಸುವ ನಿರ್ಣಯವನ್ನು ಪೊಲಿಟ್ ಬ್ಯೂರೋ ಸದಸ್ಯ ಅಶೋಕ್ ಧವಳೆ ಮಂಡಿಸಿದರು ಮತ್ತು ಕೇಂದ್ರ ಸಮಿತಿ ಸದಸ್ಯ ಮತ್ತು ಲೋಕಸಭೆಯ ಸಂಸತ್ ಸದಸ್ಯ ಅಮ್ರಾ ರಾಮ್ ಅನುಮೋದಿಸಿದರು.

ಎಲ್ಲಾ ನಿರ್ಣಯಗಳನ್ನು ಮಹಾಧಿವೇಶನ ಸರ್ವಾನುಮತದಿಂದ ಅಂಗೀಕರಿಸಿತು.

ಪ್ಯಾಲೆಸ್ಟೈನ್‌ಗೆ ಸೌಹಾರ್ದ ವ್ಯಕ್ತಪಡಿಸುವ ಮತ್ತು ಗಾಜಾದ ಮೇಲಿನ ಇಸ್ರೇಲಿ ನರಮೇಧ ದಾಳಿಯನ್ನು ಖಂಡಿಸುವ ವಿಶೇಷ ನಿರ್ಣಯವನ್ನು ಪೊಲಿಟ್ ಬ್ಯೂರೋ ಸದಸ್ಯ ಎಂ.ಎ. ಬೇಬಿ ಮಂಡಿಸಿದರು ಮತ್ತು ಪೊಲಿಟ್ ಬ್ಯೂರೋ ಸದಸ್ಯ ಜಿ.ರಾಮಕೃಷ್ಣನ್ ಅನುಮೋದಿಸಿದರು. ಇಸ್ರೇಲ್ ಮತ್ತು ಅಮೆರಿಕವನ್ನು ಖಂಡಿಸಿ ಮತ್ತು ಸ್ವತಂತ್ರ ಪ್ಯಾಲೆಸ್ಟೈನ್ ಬೇಕು ಎನ್ನುವ ಘೋಷಣೆಗಳನ್ನು ಕೂಗುತ್ತಾ ಸಮಸ್ತ ಪ್ರತಿನಿಧಿಗಳು ಎದ್ದುನಿಂತು ಇದನ್ನು ಸರ್ವಾನುಮತದಿಂದ ಅಂಗೀಕರಿಸಿದರು.

Leave a Reply

Your email address will not be published. Required fields are marked *