ಈ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಹೆಚ್ಚೆಚ್ಚಾಗಿ ಸುಗ್ರೀವಾಜ್ಞಗಳ ರಾಜ್ಯಭಾರಕ್ಕೆ ಇಳಿದಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾದ ಆಕ್ಷೇಪ ವ್ಯಕ್ತಪಡಿಸಿದೆ.
ಪಾಪರ್ ಮತ್ತು ದಿವಾಳಿ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಸಂಸತ್ತಿನ ಅಧಿವೇಶನವನ್ನು ಬದಿಗೊತ್ತಿ ಸುಗ್ರೀವಾಜ್ಞೆಯ ದಾರಿ ಹಿಡಿದಿರುವುದು ಪ್ರಜಾಪ್ರಭುತ್ವ-ವಿರೋಧಿ ನಡೆಯಾಗಿದೆ, ಅದೂ ಸಂಸತ್ತು ಸದ್ಯದಲ್ಲೇ ಸಭೆ ಸೇರಲಿರುವಾಗ. ಸಂಸತ್ತು ಈ ತಿದ್ದುಪಡಿಯನ್ನು ಆಮೂಲಾಗ್ರವಾಗಿ ಚರ್ಚಿಸಿದ ಮೇಲೆಯೇ ಇದನ್ನು ತರಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.