ಗಾಝಾ-ಇಸ್ರೆಲ್ ಗಡಿ ಬೇಲಿಯಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳು ಮೇ 14ರಂದು 58 ಪ್ಯಾಲೆಸ್ತೀನಿಯನ್ನರ ಬಲಿ ತೆಗೆದುಕೊಂಡಿರುವ ಹತ್ಯಾಕಾಂಡದ ಬಗ್ಗೆ ಸಿಪಿಐ(ಎಂ) ತನ್ನ ಆಕ್ರೋಶ ಮತ್ತು ತೀವ್ರ ಖಂಡನೆಯನ್ನು ವ್ಯಕ್ತಪಡಿಸಿದೆ.
ಪ್ಯಾಲೆಸ್ತೀನಿಯನ್ನರು ಇಸ್ರೇಲಿನವರು ಒಕ್ಕಲೆಬ್ಬಿಸಿದ ತಮ್ಮ ಜಮೀನುಗಳಿಗೆ ವಾಪಾಸಾಗಲು ಬಿಡಬೇಕು ಎಂಬ ಆಗ್ರಹದೊಂದಿಗೆ ಗಡಿಯತ್ತ ಮೆರವಣಿಗೆಗಳನ್ನು ನಡೆಸುತ್ತಿದ್ದಾರೆ. ಆದಿನ ಅಮೆರಿಕ ಸಂಯುಕ್ತ ಸಂಸ್ಥಾನವು ಅಂತರ್ರಾಷ್ಟ್ರೀಯ ಕಾನೂನನ್ನು ಸಂಪೂರ್ಣವಾಗಿ ಉಲ್ಲಂಘಿಸಿ ತನ್ನ ರಾಯಭಾರಿ ಕಚೇರಿಯನ್ನು ಜೆರುಸಲೇಂನಲ್ಲಿ ತೆರೆದಿರುವುದು ಇಸ್ರೇಲಿ ಪಡೆಗಳಿಗೆಈ ನಗ್ನ ದಾಳಿ ನಡೆಸಲು ಧೈರ್ಯ ತುಂಬಿದೆ ಎಂದು ಪೊಲಿಟ್ಬ್ಯುರೊ ಹೇಳಿದೆ.
ಪ್ಯಾಲೆಸ್ತೀನಿಯನ್ನರ ಅಮಾನುಷ ಹತ್ಯಾಕಾಂಡವನ್ನು ಖಂಡಿಸಬೇಕು, ಮಾತ್ರವಲ್ಲ, ಗಂಭೀರ ಮಾನವ ಹಕ್ಕುಗಳ ಈ ಉಲ್ಲಂಘನೆಗಳಿಗೆ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು, ವಿಶ್ವಸಂಸ್ಥೆಯ ಭದ್ರತಾ ಸಮಿತಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.