“ಜಂಟಿ ಸಂಸದೀಯ ಸಮಿತಿಯ ತನಿಖೆಯಾಗಲಿ-ಪ್ರಧಾನಿ ಪಾತ್ರದ ಸತ್ಯ ಸಂಗತಿ ಹೊರಬರಲಿ”
36 ರಫಾಲ್ ಯುದ್ಧವಿಮಾನಗಳ ವ್ಯವಹಾರದಲ್ಲಿ ದಸ್ಸಾಲ್ಟ್ ಅವಿಯೇಶನ್ ಅನಿಲ್ ಅಂಬಾನಿಯ ರಿಲಯನ್ಸ್ ಡಿಫೆನ್ಸ್ ಕಂಪನಿಯನ್ನು ತನ್ನ ಈಡು(ಆಫ್ಸೆಟ್) ಭಾಗೀದಾರನಾಗಿ ಆರಿಸಿದ್ದು ಭಾರತ ಸರಕಾರ ಅವರ ಹೆಸರನ್ನು ಸೂಚಿಸಿದ್ದರಿಂದಾಗಿ ಎಂದು ಈ ವ್ಯವಹಾರಕ್ಕೆ ಸಹಿ ಹಾಕಿದಾಗ ಫ್ರಾನ್ಸ್ ನ ಅಧ್ಯಕ್ಷರಾಗಿದ್ದ ಫ್ರಾಂಕೋಯ್ ಹೊಲ್ಲಾಂದೆ ಹೇಳಿದ್ದಾರೆ.
ಮಾಜಿ ಫ್ರಾನ್ಸ್ ಅಧ್ಯಕ್ಷರ ಈ ಹೇಳಿಕೆ ಅನಿಲ್ ಅಂಬಾನಿಯ ಕಂಪನಿಯ ಆಯ್ಕೆಯಲ್ಲಿ ಭಾರತ ಸರಕಾರದ ಪಾತ್ರವೇನೂ ಇಲ್ಲ ಎಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರ ದಾವೆ ಒಂದು ನಾಚಿಕೆಗೆಟ್ಟ ಸುಳ್ಳು ಎಂಬುದನ್ನು ಬಯಲಿಗೆಳೆದಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಟೀಕಿಸಿದೆ.
ರಫಾಲ್ ವ್ಯವಹಾರ ಒಂದು ಮೊದಲ ದರ್ಜೆಯ ಹಗರಣ, ಅದನ್ನು ಮುಚ್ಚಿ ಹಾಕಲು ಮೋದಿ ಸರಕಾರ ಹೆಣಗಾಡುತ್ತಿದೆ ಎಂದು ಸಾಬೀತಾಗುತ್ತಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಇನ್ನು ವಿಳಂಬ ಮಾಡದೆ ಒಂದು ಜಂಟಿ ಸಂಸದೀಯ ಸಮಿತಿಯನ್ನು ರಚಿಸಲೇ ಬೇಕು, ಈ ಮೂಲಕ ಸತ್ಯಸಂಗತಿ ಏನು ಎಂಬುದನ್ನು ತಿಳಿಯಲು ಪ್ರಧಾನ ಮಂತ್ರಿಗಳ ಪಾತ್ರದ ತನಿಖೆಯಾಗಬೇಕು ಎಂದು ಆಗ್ರಹಿಸಿದೆ.