ಕಾಶ್ಮೀರಿ ಜನಗಳ ಮೇಲೆ ಹಲ್ಲೆ ನಿಲ್ಲಿಸಿ- ದ್ವೇಷಪ್ರಚಾರಕ್ಕೆ ಇಳಿದಿರುವವರ ವಿರುದ್ಧ ಕ್ರಮ ಕೈಗೊಳ್ಳಿ

ದೇಶದ ವಿವಿಧೆಡೆಗಳಲ್ಲಿ ಕಾಶ್ಮೀರದ ವಿದ್ಯಾರ್ಥಿಗಳು ಮತ್ತು ಜನತೆಯ ಮೇಲೆ ಹಲ್ಲೆಗಳ ನಡೆಯುತ್ತಿರುವ ಬಗ್ಗೆ ಸಿಪಿ(ಎಂ) ಪೊಲಿಟ್‍ ಬ್ಯುರೊ ಗಂಭೀರ ಆತಂಕ ವ್ಯಕ್ತಪಡಿಸಿದೆ. ದೆಹ್ರಾದೂನ್‍ ನಲ್ಲಿ ಭಜರಂಗ ದಳ ಮತ್ತು ವಿ.ಹೆಚ್.ಪಿ. ಮಂದಿ  ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ.

ಇತರೆಡೆಗಳಲ್ಲೂ ಕಾಶ್ಮೀರಿ ವಿದ್ಯಾರ್ಥಿಗಳು ಮತ್ತು ವ್ಯಾಪಾರಿಗಳ ಮೇಲೆ ಬೆದರಿಕೆಗಳು ಬಂದಿವೆ, ಹಲ್ಲೆಗಳು ನಡೆದಿವೆ. ಜಮ್ಮುವಿನ ಕಾಶ್ಮೀರಿ ನಿವಾಸಿಗಳ ಮೇಲೆ ಹಲ್ಲೆಗಳ ನಂತರ ಅಲ್ಲಿ ಕರ್ಫ್ಯೂ ಹಾಕಲಾಗಿದೆ.

ಪುಲ್ವಾಮಾದಲ್ಲಿ 40 ಸಿ.ಆರ್‍.ಪಿ.ಎಫ್. ಸೈನಿಕರ ಹತ್ಯೆಯಿಂದ ಸಹಜವಾಗಿಯೇ ಜನಗಳು ನೊಂದಿದ್ದಾರೆ, ಬೇಸರಗೊಂಡಿದ್ದಾರೆ. ಆದರೆ ಈ ಸಂದರ್ಭವನ್ನು ಅಮಾಯಕ ಕಾಶ್ಮೀರಿ ಗಳ ಮೇಲೆ ಗುರಿಯಿಡಲು ಬಳಸಿಕೊಳ್ಳುವುದು ನಿಂದನಾರ್ಹ ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ಕಾಶ್ಮೀರಿ ನಿವಾಸಿಗಳನ್ನು ರಕ್ಷಿಸಲು ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು, ದ್ವೇಷ ಪ್ರಚಾರಕ್ಕೆ ಮತ್ತು ಹಿಂಸಾಚಾರಕ್ಕೆ ಇಳಿಯುವವರ ವಿರುದ್ಧ ದೃಢ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

 

Leave a Reply

Your email address will not be published. Required fields are marked *