ಶಾಂತಿ ಕದಡಿದೆ. ಭಾರತ-ಪಾಕಿಸ್ತಾನ ಎರಡು ಸಹೋದರ ರಾಷ್ಟ್ರಗಳ ನಡುವೆ ಕ್ಫೋಭೆ ಉಂಟಾಗಿದೆ. ಎರಡೂ ದೇಶಗಳ ನಡುವೆ ನಡೆಯಬಹುದಾದ ಮಿಲಿಟರಿ ಘರ್ಷಣೆಗೆ ಎರಡೂ ದೇಶಗಳ ಜನತೆ ದುಬಾರಿ ಬೆಲೆ ತೆರಬೇಕಾದಬಹುದು. ಅಪಾರ ಜೀವಹಾನಿಗೆ ಕಾರಣ ಆಗಬಹುದು. ದೇಶ ಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿರುವ ಎರಡೂ ರಾಷ್ಟ್ರಗಳ ಯೋಧರು ಸಾವುನೋವು ಅಪ್ಪಿಕೊಳ್ಳಬೇಕಾದೀತ್ತೂ. ಅವರ ಮಡದಿಯರು ವಿಧುವೆಯರಾಗಬೇಕಾಗಬಹುದು. ಅವರ ನೆಚ್ಚಿನ ಮಕ್ಕಳು ಅನಾಥರಾಗಬೇಕಾಬಹುದು. ಮನೆ ಮನೆಗಳಲ್ಲಿ ದುಃಖವನ್ನು ಉಕ್ಕಿಸುವ ಯುದ್ಧವೆಂಬ ಅತಿ ಕ್ರೂರ ಭಯೋತ್ಪಾದನೆ ನಮಗೆ ಬೇಕಾ? ಇದನ್ನು ತಡೆಗಟ್ಟಲು ಸಾಧ್ಯವಿಲ್ಲವೆ? ಗಡಿಗಳಿಲ್ಲದ ಒಂದು ವಿಶ್ವವನ್ನು ಬಯಸುವುದು ತಪ್ಪಾ?
ಗಡಿಗಳು ಇರುವ ವರೆಗೂ ಗಡಿವಿವಾದಗಳು ಇರಲಿವೆ. ಆದರೆ ಯುದ್ಧದಿಂದ ಗಡಿ ವಿವಾದ ಪರಿಹಾರ ಆಗದು. ಗಡಿವಿವಾದ ಮಾತ್ರವಲ್ಲ; ಯಾವುದೇ ವಿವಾದ ಯುದ್ಧದಿಂದ ಪರಿಹಾರವಾಗದು. ಶಾಂತಿ, ಸೌಹಾರ್ದತೆ ದೌರ್ಬಲ್ಯವಲ್ಲ. ಸಂಧಾನಕ್ಕಾಗಿ ಬಾಗಿಲು ತೆರೆಯುವುದು ಶರಣಾಗತಿ ಅಲ್ಲ. ಸೆರೆಹಿಡಿದ ಪೈಲೆಟನ್ನು ಬೇಷರತ್ತಾಗಿ ಬಿಡುಗಡೆ ಮಾಡಲು ಮುಂದಾಗಿರುವ ಪಾಕಿಸ್ತಾನದ ಕ್ರಮ ಅದರ ದೌರ್ಬಲ್ಯ ಎಂದು ಪರಿಗಣಿಸಬೇಕಾಗಿಲ್ಲ. ಇದರಿಂದಾಗಿ ಎರಡೂ ರಾಷ್ಟ್ರಗಳ ನಡುವೆ ಉಂಟಾಗಿರುವ ಉದ್ವಿಗ್ನತೆ ಶಮನಗೊಳ್ಳುವುದಾದರೆ ಇದಕ್ಕಿಂತ ಒಳ್ಳೆಯದು ಬೇರೆ ಏನಿದೆ?
ಭಾರತ ಪಾಕಿಸ್ತಾನ ನಡುವಿನ ಈ ಅಂತಕಾರಿ ಬೆಳವಣಿಗೆ ಇನ್ನೊಂದು ಕೆಟ್ಟ ಆಯಾಮ ಪಡೆಯುತ್ತಿರುವುದು ಖೇದದ ಸಂಗತಿಯಾಗಿದೆ. ಅದುವೆ ಕದಡಿದ ನೀರಿನಲ್ಲಿ ಮೀನು ಹಿಡಿಯುವ ಪ್ರವೃತ್ತಿ; ಸ್ಪ?ವಾಗಿ ಹೇಳುವುದಾದರೆ, ಅದು ಯುದ್ಧ ರಾಜಕಾರಣ; ಯುದ್ಧದಂತಹ ಒಂದು ದುರಂತವನ್ನು ರಾಜಕೀಯ ಲಾಭಕ್ಕಾಗಿ, ಚುನಾವಣೆಯಲ್ಲಿ ಸೀಟು ಗೆಲ್ಲುವುದಕ್ಕಾಗಿ ಬಳಸಿಕೊಳ್ಳವುದು!
ಎರಡೂ ದೇಶಗಳ ಜನಸಾಮಾನ್ಯರು, ಆತಂಕದ ಕ್ಷಣಗಳನ್ನು ಕಳೆಯುತ್ತಿರುವಾಗ, ಮೋದಿಯವರು ತಮ್ಮ ಪಕ್ಷದ ಕಾರ್ಯಕರ್ತರಿಗಾಗಿ ಒಂದು ವಿಡಿಯೋ ಕಾನ್ಪರೆನ್ಸ ನಡೆಸುತ್ತಾ “ಮೇರಾ ಬೂತ್ ಸಬ್ ಸೇ ಮಜಬೂತ್” (ನನ್ನ ಮತಗಟ್ಟೆ ಉಳಿದೆಲ್ಲರಿಗಿಂತ ಗಟ್ಟಿ) ಎನ್ನುತ್ತಾರೆ. ಈ ಮಾತುಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥಮಾಡಿಕೊಳ್ಳಬಹುದು. ಯುದ್ಧದ ಬೆಂಕಿಯಲ್ಲಿ ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಳ್ಳಲು ಮೋದಿಯವರು ಮರೆಯಲಿಲ್ಲ ಎನ್ನುವಂತೆ ಕಾಣುತ್ತದೆ.
ಇದನ್ನು ಹೀಗೆ ಅರ್ಥ ಮಾಡಿಕೊಂಡವರಲ್ಲಿ ಕರ್ನಾಟಕದ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಒಬ್ಬರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಯನ್ನು ಗೆಲ್ಲಿಸಿ ಅಧಿಕಾರಕ್ಕೆ ತರಬೇಕು ಎಂಬ ಗುರಿಸಾಧನೆಗಾಗಿ ಏನು ಬೇಕಾದರೂ ಮಾಡಲು ಸಿದ್ದರಾಗಿರುವವರಲ್ಲಿ ಅವರೂ ಒಬ್ಬ ಪ್ರಮುಖರು.
ಚಿತ್ರದುರ್ಗದಲ್ಲಿ ಮಾತನಾಡುತ್ತಾ ಅವರು ಹೇಳಿದ್ದು ದೇಶ ವಿದೇಶಗಳಲ್ಲಿ ಟೀಕೆಗೆ ಒಳಗಾಗಿದೆ. “ಉಗ್ರರ ನೆಲೆಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದಾಳಿ ನಡೆಸಿದ್ದರ ಪರಿಣಾಮ ನಾಳೆ ೨೨ ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗಲಿದೆ”. ಹಿರಿಯ ಅನುಭವಿ ರಾಜಕಾರಣಿ ಇಂತಹ ಕೀಳು ಮಟ್ಟದ ಮತಗಳನ್ನು ಹೇಳಿದ್ದು ವಿಶ್ವದ ಮುಂದೆ ಮಾತು ದೇಶ ತಲೆ ತಗ್ಗಿಸುವಂತೆ ಮಾಡಿದೆ. ವೈಮಾನಿಕ ದಾಳಿಯ ನಂತರ ದೇಶದಲ್ಲಿ ಮೋದಿ ಪರವಾದ ಅಲೆ ಹೆಚ್ಚಾಗಿದೆ. ಇದರಿಂದ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂಬ ಮಾತು ಬಿಜೆಪಿ ಪಕ್ಷದೊಳಗಿನ ಅಧಿಕಾರದಾಹವನ್ನು ತೋರಿಸುತ್ತದೆ.
ಅಧಿಕಾರಕ್ಕಾಗಿ ಅವರು ಏನೂ ಬೇಕಾದರೂ ಮಾಡಲು ಸಿದ್ಧ. ನಾಡಿಗಾಗಿ ಮಡಿದ ವೀರ ಯೋಧರ ಮನೆಗಳಲ್ಲಿ ಕಣ್ಣೀರ ಕೋಡಿ ಹರಿಯುತ್ತಿರುವುದು ಇನ್ನೂ ನಿಂತಿಲ್ಲ. ಇವರು ಚುನಾವಣೆ ಗೆಲ್ಲುವ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಇವರು ಮನು?ರೇ? ಇದೆಯಾ ಇವರಿಗೆ ಮನುಷ್ಯತ್ವ? ಇವರನ್ನೂ, ಇವರ ಸಿದ್ಧಾಂತವನ್ನು ನಂಬಬಹುದಾ? ’ಯುದ್ಧದ ವಾತವರಣವನ್ನು ಚುನಾವಣೆ ಗೆಲ್ಲಲು ಬಳಸಬೇಕು’. ಎಂದು ಅಮಿತ್ ಶಾ ಹೇಳಿದ್ದಾರೆ. ಯುದ್ಧವನ್ನು ಗೆಲ್ಲಬಹುದು. ಆದರೆ ಮತದಾರರ ಮನಸ್ಸನ್ನು ಗೆಲ್ಲುವುದು ಅ? ಸುಲಭವಲ್ಲ.
ಪಾಕಿಸ್ತಾನಿ ಪ್ರಜೆಗಳೆಲ್ಲರೂ ನಮ್ಮ ಶತ್ರುಗಳಲ್ಲ. ಭಾರತದ ಜನರೆಲ್ಲರೂ ಪಾಕಿಸ್ತಾನಿಯರ ವಿರೋಧಿಗಳಲ. ಭಯೋತ್ಪಾದಕರು ಎರಡೂ ದೇಶಗಳಲ್ಲಿ ಇದ್ದಾರೆ. ಎಲ್ಲಾ ದೇಶಗಳಲ್ಲಿ ಇದ್ದಾರೆ. ಎಲ್ಲ ಮತಧರ್ಮಗಳಲಿದ್ದಾರೆ. ಸರಿಯಾಗಿ ಹೇಳುವುದಾದರೆ ಭಯೋತ್ಪಾಧಕರಿಗೆ ಧರ್ಮವಿಲ್ಲ. ಎರಡೂ ದೇಶಗಳ ನಡುವೆ ಇತ್ಯರ್ಥವಾಗದಿರುವ ಹಲವು ವಿವಾದಗಳು ಇರುತ್ತವೆ. ಅವುಗಳನ್ನು ಯುದ್ಧದಿಂದ ಇತ್ಯಾರ್ಥ ಪಡಿಸಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕೆ ತಿಳುವಳಿಕೆ ಇರಲಾರದು. ಎರಡೂ ದೇಶಗಳು ತಮ್ಮ ನಡುವೆ ಇತ್ಯರ್ಥವಾಗಿದೆ ಉಳಿದಿರುವ ಬಾರದೇ ಎಲ್ಲಾ ವಿಷಯಗಳ ಬಗ್ಗೆ ಹಂತ ಹಂತವಾಗಿ ಚರ್ಚೆಮಾಡುವ ಮೂಲಕ ಶಾಶ್ವತ ಶಾಂತಿಯನ್ನು ಕಂಡುಕೊಳ್ಳಬೇಕಾಗಿದೆ. ಯುದ್ಧೋನ್ಮಾದವನ್ನು ಬೆಂಬಲಿಸಬಾರದು.