ಜನರ ಪ್ರತಿಭಟನಾ ಹಕ್ಕಿನ ಮೇಲಿನ ದಾಳಿ-ನಿಷೇಧಾಜ್ಞೆ

ಕರ್ನಾಟಕ ಸರಕಾರ ರಾಜ್ಯದಾದ್ಯಂತ ಮೂರು ದಿನಗಳ ಕಾಲ ನಿಷೇಧಾಜ್ಞೆ ಹೇರುವ ಮೂಲಕ ಜನರ ಪ್ರತಿಭಟನಾ ಹಕ್ಕಿನ ಮೇಲೆ ಧಾಳಿ ನಡೆಸಿದೆಯೆಂದು ಭಾರತ ಕಮ್ಯುನಿಷ್ಠ್ ಪಕ್ಷ ( ಮಾರ್ಕ್ಸ್‌ವಾದಿ)ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನ ಹಾಗೂ ಜಾತ್ಯತೀತ ಪ್ರಜಾಪ್ರಭುತ್ವದ ವಿರುದ್ದವಾದ ಜನ ವಿರೋಧಿ ತಿದ್ದುಪಡಿಯನ್ನು ಪೌರತ್ವ ಕಾಯ್ದೆಗೆ ಸೇರ್ಪಡೆ ಮಾಡುತ್ತದೆ.

ಸದರಿ ಕಾಯ್ದೆಯ ಈ ಸಂವಿಧಾನ ವಿರೋಧಿ ಹಾಗೂ ಜಾತ್ಯತೀತ ಪ್ರಜಾಪ್ರಭುತ್ವದ ವಿರೋಧಿಯಾದ ಅಂಶಗಳನ್ನು ಕೂಡಲೇ ವಾಪಾಸು ಪಡೆಯಬೇಕೆಂದು ಒತ್ತಾಯಿಸಿ ನಡೆಯುವ ಎಡಪಕ್ಷಗಳ ಮತ್ತು ಪ್ರಜೆಗಳ ಹೋರಾಟವನ್ನು ಹತ್ತಿಕ್ಕಲು ಶ್ರೀ ಯಡೆಯೂರಪ್ಪನವರ ಸರಕಾರ ಸರ್ವಾಧಿಕಾರಿಯಂತೆ ಕ್ರಮವಹಿಸಿ ಜನತೆಯನ್ನು ಬೆದರಿಸುತ್ತದೆ. ಎಂದು ಸಿಪಿಐಎಂ ಕಟುವಾಗಿ ಟೀಕಿಸಿದೆ.

ಜನತೆ ಮತ್ತು ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ನಡೆಸುವ ಅವರ ಸಂವಿಧಾನಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಮತ್ತು ಶಾಂತ ರೀತಿಯ ಪ್ರತಿಭಟನ ಹಕ್ಕಿನ ಮೇಲಿನ ನಿಷೇಧಾಜ್ಞೆಯನ್ನು ಈ ಕೂಡಲೇ ವಾಪಾಸು ಪಡೆದು ಪ್ರತಿಭಟನಾ ಹಕ್ಕನ್ನು ಎತ್ತಿ ಹಿಡಿಯಲು ಕ್ರಮವಹಿಸಬೇಕೆಂದು ರಾಜ್ಯದ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪ ನವರನ್ನು ಸಿಪಿಐಎಂ ರಾಜ್ಯ ಸಮಿತಿ ಒತ್ತಾಯಿಸುತ್ತದೆ.

ಯು.ಬಸವರಾಜ

ರಾಜ್ಯ ಸಮಿತಿ ಕಾರ್ಯದರ್ಶಿ

 

Leave a Reply

Your email address will not be published. Required fields are marked *