ಕೊಲೆ ಬೆದರಿಕೆ ಬಗ್ಗೆ ಕ್ಷಿಪ್ರ ಕ್ರಮಕೈಗೊಳ್ಳಿ: ಕರ್ನಾಟಕ ಸರಕಾರಕ್ಕೆ ಆಗ್ರಹ

ಕರ್ನಾಟಕದಲ್ಲಿ  ಹಲವು ಪ್ರತಿಷ್ಠಿತ ವ್ಯಕ್ತಿಗಳಿಗೆ ಕೊಲೆ ಬೆದರಿಕೆ ಕಳಿಸಿರುವುದನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ. ಈ ಪಟ್ಟಿಯಲ್ಲಿ ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯರಾಗಿರುವ ಬೃಂದಾ ಕಾರಟ್‍, ಚಿತ್ರನಟರಾಗಿರುವ ಪ್ರಕಾಶ್‍ ರಾಜ್, ಸ್ವಾಮಿ ನಿಜಗುಣಾನಂದ , ಮಾಜಿ ಮುಖ್ಯಮಂತ್ರಿ ಹೆಚ್‍.ಡಿ.ಕುಮಾರಸ್ವಾಮಿ ಮತ್ತಿತರ 11 ಮಂದಿಯ ಹೆಸರುಗಳಿವೆ.

ಇದೊಂದು ಗಂಭೀರ ವಿಷಯ, ಕರ್ನಾಟಕ ಸರಕಾರ ತಕ್ಷಣವೇ ಈ ಬೆದರಿಕೆ ಪತ್ರದ ಹಿಂದೆ ಇರುವವರು ಯಾರು ಎಂಬುದನ್ನು ತನಿಖೆ ಮಾಡಬೇಕು  ಮತ್ತು ಕ್ಷಿಪ್ರ ಕ್ರಮ ಕೈಗೊಳ್ಳಬೇಕು ಎಂದು ಪೊಲಿಟ್‍ ಬ್ಯುರೊ ಆಗ್ರಹಿಸಿದೆ.

Leave a Reply

Your email address will not be published. Required fields are marked *