“ದ್ವೇಶ ತೊಲಗಲಿ ಸಹಬಾಳ್ವೆ ಬಲಗೊಳ್ಳಲಿ” ಎಂಬ ಘೋಷಣೆಯಡಿ, ನಾಳೆ (ಜನವರಿ 30, 2020) ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ ದಿನವನ್ನು ರಾಜ್ಯದಾದ್ಯಂತ ಸೌಹಾರ್ಧ ಸಂಕಲ್ಪ ದಿನವಾಗಿ ಆಚರಿಸಲು ರಾಜ್ಯದ ಜನತೆಗೆ, ಸೌಹಾರ್ಧತೆಗಾಗಿ ಕರ್ನಾಟಕ ಮತ್ತಿತರೇ ಸಂಘ ಸಂಸ್ಥೆಗಳು ಕರೆ ನೀಡಿವೆ.
ಆ ದಿನ ಹುತಾತ್ಮರಿಗೆ ಶ್ರದ್ದಾಂಜಲಿ, ಬೃಹತ್ ಮಾನವ ಸೌಹಾರ್ಧ ಸರಪಳಿ ಹಾಗೂ ಪ್ರತಿಜ್ಞಾ ಸ್ವೀಕಾರ ಮತ್ತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಕೋಮು ಸೌಹಾರ್ಧತೆಯನ್ನು ಕದಡಲು ಯತ್ನಿಸುತ್ತಿರುವ ಈ ಸಂದರ್ಭದಲ್ಲಿ, ಇಂತಹ ಸೌಹಾರ್ಧ ಕಾರ್ಯಕ್ರಮಗಳು ವ್ಯಾಪಕಗೊಳ್ಳುವುದು ಅಗತ್ಯವಾಗಿದ್ದು, ಈ ಸಂಘಟನೆಯ ಕಾರ್ಯಕ್ರಮಗಳನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯಸಮಿತಿ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತದೆ ಹಾಗೂ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಲು ನಿರ್ಧರಿಸಿದೆ.
ಸದರಿ ಕಾರ್ಯಕ್ರಮದ ಯಶಸ್ವಿಗೆ ಸಿಪಿಐ(ಎಂ) ಪಕ್ಷವು ರಾಜ್ಯದಾದ್ಯಂತ ಇರುವ ಎಲ್ಲಾ ಘಟಕಗಳು ಶ್ರಮಿಸಲು ಕರೆ ನೀಡಿದೆ ಮತ್ತು ಎಲ್ಲಾ ಪ್ರಗತಿಪರ ಸಂಘ ಸಂಸ್ಥೆಗಳು, ರಾಜಕೀಯ ಶಕ್ತಿಗಳು ಮತ್ತು ವ್ಯಕ್ತಿಗಳು ಇದರ ಯಶಸ್ಸಿನಲ್ಲಿ ತೊಡಗುವಂತೆ, ಅದೇ ರೀತಿ, ಎಲ್ಲಾ ನಾಗರೀಕರು ಭಾಗಿಯಾಗುವಂತೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಮನವಿ ಮಾಡಿದೆ.
ಯು.ಬಸವರಾಜ
ರಾಜ್ಯ ಸಮಿತಿ ಕಾರ್ಯದರ್ಶಿ