ಆರ್ಥಿಕ ಚೇತರಿಕೆಗೆ ಸ್ಪಂದಿಸದ ಹಾಗೂ ಜನತೆಯ ಸಂಕಷ್ಟವನ್ನು ಹೆಚ್ಚಿಸಿದ ರಾಜ್ಯ ಬಜೆಟ್

ರಾಜ್ಯ ಸರ್ಕಾರದ ೨೦೨೦-೨೧ ರ ಸಾಲಿನ ಬಜೆಟ್ ರಾಜ್ಯವು ತೀವ್ರ ಆರ್ಥಿಕ ಹಿನ್ನಡೆ ಅನುಭವಿಸುತ್ತಿರುವುದನ್ನು ತೋರಿದೆ.  ರಾಜ್ಯದ ಆಂತರಿಕ ಉತ್ಪನ್ನದ ಅಭಿವೃದ್ದಿ ದರವು ೭.೮ ರಿಂದ ೬.೮ಕ್ಕೆ ಕುಸಿದಿದೆ. ಸತತ ಬರ ಹಾಗು ನೆರೆಗೆ ರಾಜ್ಯದ ಜನತೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರಾಜ್ಯ ಬಜೆಟ್, ಆರ್ಥಿಕ ಹಿನ್ನಡೆಯಿಂದ ಚೇತರಿಕೆಗಾಗಲಿ ಅಥವಾ ಜನತೆಯ ಸಂಕಷ್ಟ ನಿವಾರಣೆಗಾಗಲೀ ಸ್ಪಂದಿಸುವಲ್ಲಿ ವಿಫಲವಾಗಿದೆ ಮಾತ್ರವಲ್ಲಾ, ಬದಲಿಗೆ ಸಂಕಷ್ಟದಲ್ಲಿರುವ ಜನತೆಯ ಮೇಲೆ ಮತ್ತಷ್ಟು ಹೊರೆಯನ್ನು ಹೇರಿದೆಯೆಂದು ಎಂದು ಸಿಪಿಐ(ಎಂ) ರಾಜ್ಯ ಸಮಿತಿಯು ರಾಜ್ಯ ಸರಕಾರದ ಈ ಜನ ವಿರೋಧಿ ನಡೆಯನ್ನು ಬಲವಾಗಿ ಖಂಡಿಸಿದೆ.

ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ೮೮೮೭ ಕೋಟಿ ರೂಗಳ ಅನುದಾನವನ್ನು ಮತ್ತು ೧೧ ಸಾವಿರ ಕೋಟಿ ರೂಗಳ ಜಿ.ಎಸ್.ಟಿ. ಯನ್ನು ಕಡಿತ ಮಾಡಿದೆ. ಕೇಂದ್ರದಿಂದ ಸಿಗಬೇಕಿದ್ದ ೩ ಸಾವಿರ ಕೋಟಿ ರೂಗಳ ಜಿ.ಎಸ್.ಟಿ. ಪರಿಹಾರವು ಕಡಿತವಾಗಿದೆ.

ರಾಜ್ಯ ಸರ್ಕಾರದ ೩೫೧೬೯ ಕೋಟಿ ರೂಗಳ ನೆರೆ ಪರಿಹಾರ ಕೋರಿಕೆಗೆ ಕೇಂದ್ರ ಸರ್ಕಾರವು ಕೇವಲ ೧೮೬೯.೮೫ ಕೋಟಿ ರೂಗಳ ಪರಿಹಾರ ನೀಡಿರುವ ಕೇಂದ್ರದ ಬಿಜೆಪಿಯ ಸರ್ಕಾರವು, ರಾಜ್ಯವನ್ನು ಮತ್ತಷ್ಟು ಆರ್ಥಿಕ ಸಂಪನ್ಮೂಲಗಳ ಕೊರತೆಗೆ ದೂಡಿದೆ.

ಕೇಂದ್ರ ಮತ್ತು ರಾಜ್ಯ ಎರಡರಲ್ಲೂ ಬಿಜೆಪಿಯ ಸರ್ಕಾರ ಇದ್ದರೆ ರಾಜ್ಯದ ಜನತೆಯ ಸಂಕಷ್ಟಕ್ಕೆ ಪರಿಹಾರ ಸಿಗಲಿದೆ ಎಂಬ ಬಿಜೆಪಿಯ ವಾದವನ್ನು ಎರಡೂ ಸರ್ಕಾರಗಳೂ ಸೇರಿ ಅಣಕಿಸಿವೆ.

ಹಣಕಾಸು ಆಯೋಗದಂತೆ ಕೇಂದ್ರ ತೆರಿಗೆಯಲ್ಲಿನ ರಾಜ್ಯದ ಪಾಲು ೧೧೨೧೫ ಕೋಟಿ ರೂಗಳು ಕಡಿತವಾಗಲಿದೆ ಎಂಬ ಅಂಶವು ರಾಜ್ಯವನ್ನು ಮತ್ತಷ್ಟು ಆರ್ಥಿಕ ಸಂಪನ್ಮೂಲಗಳ ಕೊರತೆಗೆ ದೂಡಲಿದೆ. ೪೭೫೯ ರೂಗಳ ಕೊರತೆ ಬಜೆಟ್ ಮಂಡಿಸಿರುವ ಬಿಜೆಪಿ ಸರಕಾರವು ೩,೬೮,೬೯೨ ಕೋಟಿ ರೂಗಳ ಒಟ್ಟು ಸಾಲದ ಹೊಣೆಗಾರಿಕೆಯನ್ನು ರಾಜ್ಯದ ಮೇಲೆ ಹೊರಿಸಿದೆ.

ಕೇಂದ್ರ ಸರಕಾರವನ್ನು ಎದುರಿಸಲಾಗದೆ, ರಾಜ್ಯದ ಜನತೆಯ ಮೇಲೆ ಮತ್ತಷ್ಟು ಬೆಲೆ ಏರಿಕೆಯ ಹೊರೆಯನ್ನು ಹೇರಿದೆ. ಅದಾಗಲೇ ಕೇಂದ್ರ ಸರಕಾರ ಗ್ಯಾಸ್ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಿದೆ. ರಾಜ್ಯ ಸರಕಾರವೂ ಬಜೆಟ್ ಪೂರ್ವದಲ್ಲಿಯೇ ಬಸ್ ಪ್ರಯಾಣದರ ಹಾಗೂ ವಿದ್ಯುತ್ ದರಗಳನ್ನು ಹೆಚ್ಚಿಸಿದೆ. ಇದೀಗ ಈ ಬಜೆಟ್ ನಲ್ಲಿ ಮತ್ತೆ ಪೆಟ್ರೋಲ್ ಬೆಲೆಯನ್ನು ೧.೬೦ ರೂ ಹಾಗು  ಡೀಸಲ್ ಬೆಲೆಯನ್ನು ೧.೫೯ ರೂ ಹೆಚ್ಚಿಸಿದೆ. ಈ ಎಲ್ಲವುಗಳಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಮತ್ತಷ್ಟು ಗಗನಮುಖಿಯಾಗಲಿವೆ.

ಪಡಿತರ ಚೀಟಿಗೆ ನೀಡಲಾಗುತ್ತಿದ್ದ ಅಕ್ಕಿಯನ್ನು ತಲಾ ವ್ಯಕ್ತಿಗೆ ಎರಡು ಕೆಜಿಯಷ್ಟು ಕಡಿತಗೊಳಿಸಿ ಮುಕ್ತ ಮಾರುಕಟ್ಟೆಯ ಕಡೆ ದೂಡಿದೆ ಮತ್ತು ಅದಕ್ಕಾಗಿ ನೀಡಲಾಗುತ್ತಿದ್ದ ಬಜೆಟ್ ಅನುದಾನವನ್ನು ೧,೨೩೪ ಕೋಟಿ ರೂ ಕಡಿತಗೊಳಿಸಿದೆ.

ಇದರೊಂದಿಗೆ ಕೊರತೆ ಬಜೆಟ್ ಹಾಗೂ ಸುಮಾರು ೫೩ ಸಾವಿರ ಕೋಟಿ ರೂಪಾಯಿಗಳ ಹೊಸ ಸಾಲದ ಭಾರವನ್ನು ಜನತೆ ಭರಿಸಬೇಕಾಗಿದೆ.

ರಾಜ್ಯದಲ್ಲಿ ತಲಾ ಆದಾಯ ಪ್ರತಿ ದಿನ ೩೫-೪೦ ರೂಗಳಿಗಿಂತ ಕಡಿಮೆ ಇರುವ ಕೋಟ್ಯಾಂತರ, ಕೃಕೂಲಿಕಾರರು, ಬಡ ರೈತರು, ಕಾರ್ಮಿಕ ಕುಟುಂಬಗಳ ಆದಾಯವನ್ನು ಹೆಚ್ಚಿಸುವ ಯಾವುದೇ ಕ್ರಮಕೈಗೊಳ್ಳದ ಬಜೆಟ್, ಸಂಕಟಗಳ ಹೊರೆಯ ಸರಮಾಲೆಯನ್ನು ಹೇರಲು ಮಾತ್ರವೇ ಸಫಲವಾಗಿದೆ. ಅದೇ ವೇಳೆ, ಸೇವಾ ವಲಯಕ್ಕೆ ನೀಡಿರುವ ತೆರಿಗೆ ರಿಯಾಯಿತಿಯನ್ನು ರದ್ದುಪಡಿಸಲಾಗದ ಅಸಹಾಯಕತೆಯನ್ನು ತೋರಿದೆ.

ಜನತೆ ಪರಿಹಾರಕ್ಕಾಗಿ ಹಾತೊರೆಯುತ್ತಿರುವಾಗ ನೆರೆ ಪರಿಹಾರಕ್ಕೆ ಮೀಸಲಿಟ್ಟ ೬೧೦೮ ಕೋಟಿ ರೂಗಳಲ್ಲಿ ಕೇವಲ ೩೪೨೩ ಕೋಟಿ ರೂಗಳನ್ನು ಮಾತ್ರ ಇದುವರೆಗೆ ಖರ್ಚು ಮಾಡಿರುವ ಅಂಶವು ರಾಜ್ಯ ಬಿಜೆಪಿಯ ಅದಕ್ಷ ಆಡಳಿತವನ್ನು ಬಹಿರಂಗ ಪಡಿಸಿದೆ. ಒಟ್ಟಾರೆ ಕೇಂದ್ರ ಹಾಗು ರಾಜ್ಯ ಬಿಜೆಪಿಯ ಸರ್ಕಾರಗಳು ರಾಜ್ಯವನ್ನು ದಿವಾಳಿಯತ್ತ ದೂಡುತ್ತಿವೆ ಎಂಬದನ್ನು ಬಜೆಟ್ ತೋರುತ್ತದೆ.

ಕೃಷಿ ಕೂಲಿಕಾರರು, ದಲಿತರು ಬಡರೈತರು ಕೃಷಿ ಭೂಮಿಗಾಗಿ ಬಾಯಿ, ಬಾಯಿ ಬಿಡುತ್ತಿರುವಾಗ, ಲೂಟಿಕೋರ ಬಹು ರಾಷ್ಟ್ರೀಯ ಕಂಪನಿಗಳ ಕಂಪನಿ ಕೃಷಿಗೆ ನಮ್ಮ ರೈತಾಪಿ ಕೃಷಿಯನ್ನು ತೆರೆಯುವುದನ್ನು ಮುಂದುವರೆಸಿದೆ. ಇನ್ನೂ ೫೦೦ ರೈತ ಉತ್ಪಾದಕರ ಕಂಪನಿಗಳ ರಚನೆಗೆ ಕ್ರಮವಹಿಸಿದೆ. ರಾಜ್ಯವನ್ನು ಆರ್ಥಿಕ ಬಿಕ್ಕಟ್ಟು ಬಾಧಿಸುತ್ತಿರುವಾಗ ಮತ್ತು ಅದಾಗಲೇ ಪಡೆದ ಕೃ ಭೂಮಿಯಲ್ಲಿ ಕೈಗಾರಿಕೆಗಳು ನಿರ್ಮಾಣಗೊಳ್ಳದಿರುವಾಗ, ಕೃ ಭೂಮಿಯನ್ನು ಅತ್ಯಂತ ವೇಗವಾಗಿ ಕಂಪನಿಗಳಿಗೆ ವರ್ಗಾಸಲು ಭೂ ಸುಧಾರಣಾ ಕಾಯ್ದೆಗೆ ತಿದ್ದಪಡಿ  ಕ್ರಮವಹಿಸಲಾಗಿದೆ.

ರಾಜ್ಯದಾದ್ಯಂತ ನಗರ ವ್ಯಾಪ್ತಿಯ ಲಕ್ಷಾಂತರ ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ನಗರ ಪ್ರದೇಶದ ಭೂಕಬಳಿಕೆ ನಿಷೇಧದ ಹೆಸರಲ್ಲಿ ಸರಕಾರಿ ಭೂಮಿ ಸಂರಕ್ಷಣಾ ಸಮಿತಿ ರಚನೆಗೆ ಕ್ರಮವಹಿಸಿದೆ

ರೈತರು, ಕಾರ್ಮಿಕರು, ವಿಧ್ಯಾರ್ಥಿ ಯುವಜನರ ದಲಿತರ, ಅಲ್ಪ ಸಂಖ್ಯಾತರ ಬೇಡಿಕೆಗಳಿಗೆ ಸ್ಪಂದಿಸದ ರಾಜ್ಯ ಬಜೆಟ್ ತನ್ನ ನವ ಉದಾರವಾದಿ ಆರ್ಥಿಕ ನೀತಿಗಳ ಭಾಗವಾಗಿ ಬಂದರುಗಳ, ಮೆಟ್ರೋ, ಆರೋಗ್ಯ ಯೋಜನೆ, ಮುಂತಾದವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಹೆಸರಿನಲ್ಲಿ ಖಾಸಗೀಕರಣಕ್ಕೆ ನಾಂದಿಯಾಡಿದೆ.

ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಅಭಿವೃದ್ಧಿ ಯೋಜನೆಗಳಿಗೆ ಶೇ ೨೭ ರ್‍ಠರುವ ಅವರ ಜನಸಂಖ್ಯೆಗನುಗುಣವಾಗಿ ನೀಡದೇ ಕಳೆದ ಬಜೆಟ್ ನಲ್ಲಿ ನೀಡಿದ್ದ ಹಣಕ್ಕಿಂತ ಸುಮಾರು ೩,೦೦೦ ಕೋಟಿ ಕಡಿಮೆ ಹಣ ನೀಡಿದೆ. ದಲಿತರು ಮತ್ತು ದಲಿತ ಮಹಿಳೆಯರ ಸಾಲಮನ್ನಾ ಹಾಗೂ ದೇವದಾಸಿ ಮಹಿಳೆಯರ ನೆರವು ಘೋಸಿಲ್ಲ. ಅದೇ ರೀತಿ, ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ನೀಡಲಾಗುತ್ತಿದ್ದ ಅನುದಾನವನ್ನು ಕಡಿತಗೊಳಿಸಿದೆ.

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಅಗತ್ಯ ಹಣಕಾಸಿನ ನೆರವನ್ನು ನೀಡಿಲ್ಲ. ಬೀದಿ ಬದಿ ವ್ಯಾಪಾರಿಗಳ ಕಾಯಕ ನಿಧಿ ಯೋಜನೆ ರದ್ದುಪಡಿಸಿದೆ. ಉದ್ಯೋಗ ಸೃಷ್ಟಿಗೆ ಯಾವುದೆ ಕ್ರಮಗಳಿಲ್ಲ. ಬದಲಾಗಿ ಆರ್.ಎಸ್.ಎಸ್ ಕಾರ್ಯಕರ್ತರಿಗೆ ಸರ್ಕಾರದ ಹಣ ನೀಡಲು ಜನ ಸೇವಕ ಯೋಜನೆಯನ್ನು ಬೆಂಗಳೂರಿನ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಿಗೆ ಮತ್ತು ಇತರೆ ಮಹಾನಗರ ಪಾಲಿಕೆಗಳಿಗೆ ವಿಸ್ತರಿಸಲು ಬಜೆಟ್ ಮುಂದಾಗಿದೆ.

ಆತ್ಮಹತ್ಯೆಗಳನ್ನು ತಡೆಯಲು ರೈತರ ಹಾಗೂ ಕೃಕೂಲಿಕಾರರ ಸಾಲ ಮನ್ನಾ ಬದಲು, ಕೇವಲ ರೈತರ ಸಾಲದ ಬಡ್ಡಿ ಸುಸ್ತಿ ಬಡ್ಡಿ ಮನ್ನಾಕ್ಕಾಗಿ ಮುಂದಾಗಿದೆ. ಗ್ರಾಮೀಣ ಜನತೆಯನ್ನು ಸಾಲಬಾಧೆಯಿಂದ ಮುಕ್ತಗೊಳಿಸಲು, ಕೂಲಿ ಕೆಲಸದ ದಿನಗಳ ವಿಸ್ಥರಣೆಗೆ ಮತ್ತು ಕನಿಷ್ಟ ಕೂಲಿಯ ಹೆಚ್ಚಳಕ್ಕೆ ಮತ್ತು ಕೃಷಿ ಉತ್ಪನ್ನಗಳ ವೈಜ್ಞಾನಿಕ ಬೆಲೆ ನಿಗದಿ ಮತ್ತು ಅದನ್ನು ಖಾತರಿಯಾಗಿ ದೊರೆಸುವ ಕ್ರಮದ ಬದಲು, ತನ್ನ ಹಿಂದಿನ ಕಿಸಾನ್ ಸಮ್ಮಾನ್ ಯೋಜನೆಯನ್ನೆ ರಾಜ್ಯ ಬಜೆಟ್ ಪುನರುಚ್ಚರಿಸಿದೆ ಎಂದು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಠೀಕಿಸಿದೆ.

ಕೂಡಲೇ ಬೆಲೆ ಏರಿಕೆಯ ಹೊರೆಯನ್ನು ಹಿಂಪಡೆಯಲು, ಹಾಗೂ ಕಂಪನಿ ಕೃಷಿಯ ಧಾಳಿಯಿಂದ ರೈತರ ಕೃಷಿ ಭೂಮಿ ಉಳಿಸಲು ಮತ್ತು ದಲಿತರ ಜನಸಂಖ್ಯೆಗನುಗುಣವಾಗಿ ಅನುದಾನವನ್ನು, ಬಡವರ ತಲಾ ಆದಾಯ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸಲು ಸಿಪಿಐಎಂ ಒತ್ತಾಸಿದೆ.

 

ಯು. ಬಸವರಾಜ, ಕಾರ್ಯದರ್ಶಿಗಳು

Leave a Reply

Your email address will not be published. Required fields are marked *